ಹಿರೇಮುಗದೂರ ಗ್ರಾಮದ ಟಿಎಂಎಇಎಸ್ ಪ್ರೌಢ ಶಾಲೆಯಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ
![IMG-20220103-WA0015](https://garudavoice.com/wp-content/uploads/2022/01/IMG-20220103-WA0015.jpg)
ಹಾವೇರಿ: ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದ ಟಿಎಂಎಇಎಸ್ ಪ್ರೌಢ ಶಾಲೆಯಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕಾಕರಣ ಕಾರ್ಯಕ್ರಮ ಜರುಗಿತು.
ಗ್ರಾಪಂ ಸದಸ್ಯರಾದ ನಿಂಗಪ್ಪ ಎಂ ಆರೇರ ಮಾತನಾಡಿ ಕೋವಿಡ್ ಲಸಿಕೆ ನೀಡುವ ಆರೋಗ್ಯ ಇಲಾಖೆಯ ಕಾರ್ಯಕರ್ತೆಯರಿಗೆ ಎಲ್ಲ ರೀತಿ ಸಹಕಾರ ನೀಡಲಾಗುವುದು. ಈ ವಯಸ್ಸಿನ ಮಕ್ಕಳು ಆರೋಗ್ಯ ರಕ್ಷಣೆಗಾಗಿ ಕಾಳಜಿವಹಿಸುವುದು ಅಗತ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ಕ್ಷೇಮ ಕೇಂದ್ರ ಆರೋಗ್ಯಾಧಿಕಾರಿ ಶ್ರೀಮತಿ ಶಶಿಕಲಾ ಹಿರೇಮಠ. ಶಾಲೆಯ ಮುಖ್ಯೋಪಾಧ್ಯಾಯರಾದ ವ್ಹಿ ಎಸ್ ಹಿರೇಮಠ. ಗ್ರಾಪಂ ಲೆಕ್ಕಸಹಾಯಕರಾದ ವೀರೇಶ ಕಮ್ಮಾರ.ಆಶಾ ಕಾರ್ಯಕರ್ತರು,ಶಾಲಾ ಗುರುಬಳಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.