ದಾವಣಗೆರೆ ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದ ವ್ಯಕ್ತಿ ಬಂಧನ, 4.87 ಲಕ್ಷ ರೂ. ಮೌಲ್ಯದ ವಸ್ತುಗಳ ವಶ

ದಾವಣಗೆರೆ: ನಗರದ ರೈಲ್ವೇ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದು, ಆತನಿಂದ ವಿವಿಧ ಕಂಪನಿಯ 20ಮೊಬೈಲ್‌ಗಳು ಬಂಗಾರದ ಆಭರಣಗಳು ಸೇರಿದಂತೆ 4.87 ಲಕ್ಷ ರೂ. ಬೆಲೆಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲ್ಲೂಕು ಗಡಿಸಾಗರದ ಕಾಳಪ್ಪ ಬಡಿಗೇರ (36) ಬಂಧಿತ ಆರೋಪಿ. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ಹಲವು ಪ್ರಕರಣಗಳು ಬಯಲಾಗಿವೆ.

ರೈಲ್ವೇಸ್ ಪೊಲೀಸ್ ಉಪ ಮಹಾ ನಿರೀಕ್ಷಕ ಡಾ.ಎಸ್.ಡಿ. ಶರಣಪ್ಪ, ಪೊಲೀಸ್ ಅಧೀಕ್ಷಕಿ ಡಾ.ಸೌಮ್ಯಲತಾ ಕೆ.ಎಸ್. ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ರೈಲ್ವೇ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ರವಿಕುಮಾರ್ ನೇತೃತ್ವದಲ್ಲಿ ದಾವಣಗೆರೆ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸ ಂತೋಷ್ ಎಂ.ಪಾಟೀಲ್ ಮುಂದಾಳತ್ವದಲ್ಲಿ ಎಎಸ್‌ಐ ನಾಗರಾಜ್, ಆರಕ್ಷಕರುಗಳಾದ ಶ್ರೀನಿವಾಸ್, ಚೇತನ್ ಟಿ.ಆರ್., ಚೇತನ್ ಬಿ.ಎನ್., ಹಾಲೇಶ್ ಬಿ.ಎನ್., ಹನುಮಂತಪ್ಪ ಬಿ, ದಿನೇಶ್ ಸಿ.ಪಿ. ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!