ದಾವಣಗೆರೆ ನಗರ ದೇವಾಂಗ ಸಂಘದಿಂದ ದೇವಾಂಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ವಧು-ವರರ ಸಮಾವೇಶ

ದಾವಣಗೆರೆ ನಗರ ದೇವಾಂಗ ಸಂಘದಿಂದ ದೇವಾಂಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉಚಿತ ವಧು-ವರರ ಸಮಾವೇಶ

ದಾವಣಗೆರೆ: ದಾವಣಗೆರೆ ನಗರದ ದೇವಾಂಗ ಸಂಘದ ವತಿಯಿಂದ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. ೮೫ ಮತ್ತು ಪಿಯುಸಿಯಲ್ಲಿ ಶೇ.೮೦ಕ್ಕಿಂತ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ೫ನೇ ವರ್ಷದ ದೇವಾಂಗ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಯಾದಗಿರಿ ಜಿಲೆಯ ಶ್ರೀ ಕ್ಷೇತ್ರ ಮುದನೂರು ಮಹಾಸಂಸ್ಥಾನ ಮಠದ ಡಾ. ಈಶ್ವರಾನಂದಸ್ವಾಮೀಜಿಯವರ ಸಾನಿಧ್ಯದಲ್ಲಿ ದಿ.೧೬ರ ಭಾನುವಾರ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಮುದಾಯ ಭವನ, ಆರ್.ಟಿ.ಓ ಆಫೀಸ್ ಹತ್ತಿರ, ಕೊಂಡಜ್ಜಿ ರಸ್ತೆ, ದಾವಣಗೆರೆಯಲ್ಲಿಹಮ್ಮಿಕೊಳ್ಳಲಾಗಿತ್ತು.

ಸಾನಿಧ್ಯ ವಹಿಸಿದ್ದ ಡಾ. ಈಶ್ವರನಾಂದ ಸ್ವಾಮೀಜಿಯವರು ನೀವು ಉತ್ತಮ ವಿದ್ಯಾಭ್ಯಾಸ ಮಾಡುವುದರಿಂದ ಮುಂಬರುವ ದಿನಗಳಲ್ಲಿ ಸಮಾಜಕ್ಕೆ ಉತ್ತಮ ಪ್ರಜೆಗಳಾಗಿ ಜೀವನದಲ್ಲಿ ಉತ್ತಮ ಸ್ಥಾನ ಪಡೆಯಲಿದ್ದೀರಿ ಎಂದರು. ಇನ್ನೂ ಹೆಚ್ಚಿನ ಆಸಕ್ತಿ, ಪ್ರಾಮಾಣಿಕತೆ, ಪ್ರಯತ್ನದಿಂದ ತಾವುಗಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಶ್ರಮವಹಿಸಬೇಕು ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ಪ್ರಶ್ನಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಮತ್ತು ನಿಮ್ಮ ತಂದೆ-ತಾಯಿಯರಿಗೆ ಶಿಸ್ತು ಪೋಷಕರಿಗೆ, ಶಾಲೆಗೆ ಕೀರ್ತಿ ತರುವಂತೆ ಮಕ್ಕಳಿಗೆ ಕಿವಿಮಾತು ಹೇಳಿದರು.

ಉದ್ಘಾಟನೆಯನ್ನು ಜಿಲ್ಲಾ ದೇವಾಂಗ ಸಂಘದ ಗೌರವವಾಧ್ಯ ಅಧ್ಯಕ್ಷ ಡಾ. ಎಸ್. ರಂಗನಾಥ್, ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಟಿ. ಅಂಬಣ್ಣ. ಇವರು ನೆರವೇರಿಸಿದರು.ಅಧ್ಯಕ್ಷತೆಯನ್ನು  ನಗರ ದೇವಾಂಗ ಸಂಘದ ಅಧ್ಯಕ್ಷ  ಟಿ. ಅಜ್ಜೇಶಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ದೇವಾಂಗ ವಿದ್ಯಾರ್ಥಿ ನಿಲಯದ ಅಧ್ಯಕ್ಷ  ಎಂ.ಹೆಚ್. ಕೃಷ್ಣಮೂರ್ತಿ, ಸಹಾಯಕ ಔಷಧ ನಿಯಂತ್ರಣ ಅಧಿಕಾರಿ ಸಿ.ಹೆಚ್. ಗಿರೀಶ್, ಎಸ್.ಜಿ. ಪುನೀತ್ ಶಂಕರ, ಮಹಾನಗರ ಪಾಲಿಕೆ ಸದಸ್ಯ ಎಲ್.ಡಿ. ಗೋಣೆಪ್ಪ ಆಗಮಿಸಿದ್ದರು.

ಗೌರವಾಧ್ಯ ಜಿ.ಹೆಚ್. ರಾಘವೇಂದ್ರ, ಗೌರವ ಸಲಹೆಗಾರರಾದ ವೆಂಕಟೇಶ್ ಕೆ. ಉಪಾಧ್ಯಕ್ಷ ಬಿ.ಎನ್. ಬಾಬು, ಖಜಾಂಚಿ ಎಸ್.ಡಿ. ರಂಗನಾಥ, ನಿರ್ದೇಶಕರುಗಳಾದ ಗಿರಿರಾಜ್, ಎಸ್. ಮಾಲತೇಶ್, ಹೆಚ್.ಡಿ. ಶ್ರೀನಿವಾಸ್ ಇವರುಗಳು ಸ್ವಾಗತ ಕೋರಿ, ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!