lingayat; ಲಿಂಗಾಯತ ಉಪ ಪಂಗಡಗಳ ಕೇಂದ್ರ ಓಬಿಸಿ ಪಟ್ಟಿಗೆ ಸೇರಿಸುವಂತೆ ಒತ್ತಾಯ

ದಾವಣಗೆರೆ, ನ.04: 2ಎ ಮೀಸಲಾತಿ ಜೊತೆ ಲಿಂಗಾಯತ ( Lingayat) ಉಪ ಪಂಗಡಗಳನ್ನು ಕೇಂದ್ರ ಓಬಿಸಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಕೂಡಲ ಸಂಗಮ ಪಂಚಾಮಸಾಲಿ ಪೀಠದ ಅಧ್ಯಕ್ಷರಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನವೆಂಬರ್ 11 ರಂದು ದಾವಣಗೆರೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಕಳೆದ ಸರ್ಕಾರ ಮೀಸಲಾತಿ ಘೋಷಣೆ ಮಾಡಿತ್ತು. ಆದರೆ ನೀತಿ ಸಂಹಿತೆ ಹಿನ್ನೆಲೆ ಜಾರಿಯಾಗಿರಲಿಲ್ಲ. ಅನುಷ್ಟಾನಕ್ಕೂ ಬರಲಿಲ್ಲ. ಈ ಸರ್ಕಾರಕ್ಕೂ ಪಂಚಮಸಾಲಿ ಅವರ ಋಣ ಇದೆ. ಅಧಿಕಾರಕ್ಕೆ ಬಂದು ಕೆಲವೇ ತಿಂಗಳುಗಳು‌ ಕಳೆದಿವೆ. ಆದರೂ ಲೋಕಸಭೆ ಚುನಾವಣೆಯೊಳಗಾಗಿ ನಮಗೆ ಮೀಸಲಾತಿ ನೀಡಬೇಕು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ತಿಳಿಸಿದರು.

ಈ ದೇಶದ ಇತಿಹಾಸದಲ್ಲಿ ಲಿಂಗವನ್ನು ಬೀದಿಗೆ ತಂದು ಯಾರೂ ಪ್ರತಿಭಟನೆ ಮಾಡಿಲ್ಲ. ಅಂದು ಬಾಲಗಂಗಾಧರನಾಥ ತಿಲಕರು​ ಸಾರ್ವಜನಿಕ ಗಣೇಶೋತ್ಸವ ಶುರುಮಾಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಒಂದುಗೂಡಿಸಿದ್ದರು. ಇದೀಗ ಹೋರಾಟದ 2 ಹಂತವನ್ನು ಲಿಂಗಾಯತ ಪಂಚಾಮಸಾಲಿಗಳು ಮೀಸಲಾತಿಗಾಗಿ ರಸ್ತೆ ಬಂದ್ ಮಾಡಿ ಲಿಂಗ ಪೂಜೆ ಮಾಡಲು ಮುಂದಗಿದ್ದೇವೆ. ಕಳೆದ ಮೂರು ವರ್ಷಗಳಿಂದ ನಿರಂತರ ಹೋರಾಟ ನಡೆಸಿದರೂ ಯಾವ ಸರ್ಕಾರ ಕೂಡ ನಮ್ಮ ಹೋರಾಟದ ಕಡೆ ಗಮನಹರಿಸುತ್ತಿಲ್ಲ. ಹೀಗಾಗಿ ನೂತನ ಸರ್ಕಾರಕ್ಕೆ ಆರಂಭದಲ್ಲೇ ಬಿಸಿ ಮುಟ್ಟಿಸುವ ಕೆಲಸ ಮಾಡಲು ಕೈಯಲ್ಲಿ ಲಿಂಗ ಹಿಡಿದಿದ್ದೇವೆ. ಈ ಮೂಲಕ ಭಗವಂತನ ಮೊರೆ ಹೋಗಿದ್ದೇವೆ” ಎಂದು ಹೇಳಿದರು.

ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಕಂದಾಯ ಇಲಾಖೆಯಿಂದ ಪ್ರತ್ಯೇಕ

ಜಾತಿ ಗಣತಿ ಬಿಡುಗಡೆ ವಿಚಾರ:

ಜಾತಿ ಗಣತಿ ಬಿಡುಗಡೆ ಬಗ್ಗೆ ನಮ್ಮಲ್ಲಿ ಯಾವುದೇ ವಿರೋಧವಿಲ್ಲ. ಲಿಂಗಾಯತ ಒಕ್ಕಲಿಗರ ಸಮಾಜದ ಜನರಲ್ಲಿ ಎಲ್ಲಿ ನಮ್ಮ ಸಮಾಜ ಕಡಿಮೆ ತೋರಿಸಿದರೆ ಎಂಬ ಆತಂಕವಿದೆ. ಸರ್ಕಾರ ಬೇಕಿದರೆ ಎರಡು ಸಮಾಜದ ಶಾಸಕರನ್ನು ಸೇರಿಸಿ ಸಭೆ ಮಾಡಿ ಮನವರಿಕೆ ಮಾಡಿಕೊಳ್ಳಲಿ. ಇನ್ನೂ ಜಾತಿ ಗಣತಿ ಪ್ರಾಮಾಣಿಕವಾಗಿರಲಿ. ಎಲ್ಲಾ ಸಮುದಾಯಕ್ಕೂ ನ್ಯಾಯ ಸಿಗಲಿ ಎಂದರು.

2A ಮೀಸಲಾತಿ ನ್ಯಾ, ಜಯಪ್ರಕಾಶ್ ಹೆಗಡೆ ವರದಿ ವಿಚಾರ:

ಜಯಪ್ರಕಾಶ್ ಹೆಗಡೆ ಅವರ ಮಧ್ಯಂತರ ವರದಿ ಪಂಚಮಸಾಲಿ ಅವರ ಪರವಾಗಿ ಬಂದಿದೆ. ಆದರೆ ಆ ಸಂದರ್ಭದಲ್ಲಿ ಅವರು ಕೊಟ್ಟ ವರದಿ ಹೇಗಾಗಿದೆ ಎಂದರೆ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. 2A ಮೀಸಲಾತಿ ನೀಡುವುದರಿಂದ ಅಲ್ಲಿರುವ ಜಾತಿಗಳಿಗೆ ಅನ್ಯಾಯವಾಗುತ್ತದೆ ಎಂದುಕೊಂಡಿದ್ದಾರೆ. ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ನೀಡಿ ಎಂದು ತಿಳಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!