ಜಿಲ್ಲಾಧಿಕಾರಿಗಳ ನ್ಯಾಯಾಲದಲ್ಲಿ ಕಕ್ಷೀದಾರರಿಗೆ ವೈದ್ಯರಾದ ಜಿಲ್ಲಾಧಿಕಾರಿ ಡಾ: ವೆಂಕಟೇಶ್ ಎಂ.ವಿ
ದಾವಣಗೆರೆ: ಶುಕ್ರವಾರ ಜುಲೈ 28 ರಂದು ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಿರಿಯ ನಾಗರೀಕರ ಕುಂದುಕೊರತೆಗಳಿಗೆ ಸಂಬಂಧಿಸಿದ ನ್ಯಾಯಾಲಯದ ಕಲಾಪದಲ್ಲಿ ಜಿಲ್ಲಾಧಿಕಾರಿ ಡಾ; ಎಂ.ವಿ.ವೆಂಕಟೇಶ್ ಅವರು ಭಾಗವಹಿಸಿದ್ದರು.
ಈ ವೇಳೆ ಹಿರಿಯ ನಾಗರೀಕರಾದ ವಯೋವೃದ್ದ 73 ವರ್ಷದ ಮುರಿಗೆಮ್ಮ ಕೋಂ ಧರ್ಮಪ್ಪ ಹಾವೇರಿಯ ಮಹಿಳೆಯೊಬ್ಬರು ತಮ್ಮ ಕುಂದು ಕೊರತೆಗೆ ಸಂಬಂಧಿಸಿದ ಪ್ರಕರಣದಲ್ಲಿ ಭಾಗವಹಿಸಲು ನ್ಯಾಯಾಲಯದಲ್ಲಿ ಕಕ್ಷಿದಾರರಾಗಿ ಆಗಮಿಸಿದ್ದರು.ಈ ವೇಳೆ ಅಸ್ವಸ್ಥರಾಗಿ ಕೆಳಗೆ ಉರುಳಿ ಪ್ರಜ್ಞೆಹೀನರಾದರು. ನ್ಯಾಯಾಧೀಶರ ಸ್ಥಾನದಲ್ಲಿದ್ದ ಸ್ವತಃ ವೈದ್ಯರು ಅದರಲ್ಲಿ ಎಂ.ಡಿ. ಜನರಲ್ ಮೆಡಿಷನ್ ವೈದ್ಯರಾಗಿರುವ ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ಅವರು ತಕ್ಷಣವೇ ಮಹಿಳೆಯ ನಾಡಿ ಪರೀಕ್ಷೆ ಮಾಡುವ ಮೂಲಕ ಸ್ವತಃ ಚಿಕಿತ್ಸಾ ಸಲಹೆ, ಪಿಜಿಯೋತೆರಫಿ ಮಾಡುವ ಮೂಲಕ ಮಹಿಳೆಯನ್ನು ಎಚ್ಚರಗೊಳಿಸಿ ಮಾನವೀಯತೆ ಮೆರೆದಿದ್ದಾರೆ.ವಯೋವೃದ್ದ ಮಹಿಳೆ ಲೋ ಬಿ.ಪಿ, ಮಧುಮೇಹದಿಂದ ಬಳಲುತ್ತಿದ್ದು ಇದನ್ನು ಸಿಪಿಆರ್ ಎಂದೇ ಕರೆಯಲಾಗುತ್ತದೆ. ಇದರಿಂದ ಆ ವೃದ್ದಿಗೆ ಜೀವ ಬಂದಂತಾಯಿತು.