ಅಧಿಕ ಶ್ರಾವಣ ಮಾಸದಲ್ಲಿ ಶುಭಕಾರ್ಯ ಮಾಡುವಂತಿಲ್ಲ ಯಾಕೆ ಗೊತ್ತಾ.?

ಅಧಿಕ ಶ್ರಾವಣ ಮಾಸದಲ್ಲಿ ಶುಭಕಾರ್ಯ ಮಾಡುವಂತಿಲ್ಲ ಯಾಕೆ ಗೊತ್ತಾ.?

ದಾವಣಗೆರೆ:  ಮಂಗಳವಾರದಂದು ಪುಷ್ಯ ನಕ್ಷತ್ರ , ಹರ್ಷಿಣಿ ಯೋಗದಲ್ಲಿ ಶ್ರಾವಣದಲ್ಲಿನ ಅಧಿಕ ಮಾಸವು ಪ್ರಾರಂಭವಾಗುತ್ತದೆ.
ಶ್ರಾವಣ ಅಧಿಕ ಮಾಸವು ವಿಶೇಷವಾದ ಮಾಸಗಳಲ್ಲಿ ಒಂದಾಗಿದೆ. ಈ ಅಧಿಕ ಮಾಸವನ್ನು ಮಲಮಾಸ , ಕ್ಷಯಮಾಸ , ಪುರುಷೋತ್ತಮ ಮಾಸವೆಂದು ಕೂಡ ಕರೆಯಲಾಗುತ್ತದೆ.
ಪ್ರತಿ ಮೂರು ( 3 ) ವರ್ಷಗಳಿಗೊಮ್ಮೆ ಮಾತ್ರ ಈ ರೀತಿಯ ಅಧಿಕ ಮಾಸವು ಬರುತ್ತದೆ.

ಈ ಅಧಿಕ ಶ್ರಾವಣ ಮಾಸದಲ್ಲಿ ಯಾವುದೇ ರೀತಿಯ ಶುಭ – ಸಂಭ್ರಮದ ಸಾಂಪ್ರದಾಯಕವಾದ ಹಬ್ಬಗಳು ಆಚರಣೆಯಲ್ಲಿ ಇರುವುದಿಲ್ಲ ಹಾಗೂ ತದನಂತರದಲ್ಲಿ ಆಗಸ್ಟ್ 17ರ ಗುರುವಾರದಿಂದ ‌ ಪ್ರಾರಂಭವಾಗುವ ನಿಜಶ್ರಾವಣ ಮಾಸದಲ್ಲಿ ಎಲ್ಲಾ ರೀತಿಯ ಆ ಸಂಬಂಧಿತ ಆಚರಣೆಗಳು ಇರುತ್ತವೆ.

ಪ್ರತಿ ಮೂರು ವರ್ಷಗಳಿಗೊಮ್ಮೆ ಬರುವ ಅಧಿಕ ಮಾಸ :
ಭಾರತೀಯ ಸಂಸ್ಕೃತಿ ಅನುಸಂಧಾನದ ಕಾಲಗಣನಾಶಾಸ್ತ್ರ ಪದ್ಧತಿಯ ಪ್ರಕಾರ ದಂತೆ , ಪ್ರತ್ಯೇಕವಾಗಿ ಸೂರ್ಯ ವರ್ಷವು 365 ದಿನ ಮತ್ತು 6 ಗಂಟೆಯು ಆಗಿರುತ್ತದೆ ಎಂದು ಪರಿಗಣಿಸಲಾಗಿರುತ್ತದೆ. ಅದೇ ರೀತಿಯಲ್ಲಿ , ಚಂದ್ರ ವರ್ಷವು 354 ದಿನಗಳು ಆಗಿರುತ್ತದೆ ಎಂದು ಪರಿಗಣಿಸ ಲಾಗಿರುತ್ತದೆ. ಇದರಲ್ಲಿ ಇವೆರಡರ ನಡುವೆ ಸುಮಾರು 11 ದಿನಗಳ ಅಂತರವು ಇರುತ್ತದೆ. ಅದರಂತೆ ಪ್ರತಿ ಮೂರು ( 3 ) ವರ್ಷದಲ್ಲಿ ಅದೆಲ್ಲವೂ ಒಟ್ಟಾರೆಯಾಗಿ ಸೇರಿದಂತೆ ಸರಿಸುಮಾರು ಒಂದು (1) ಮಾಸಕ್ಕೆ ಸಮನಾಗುತ್ತದೆ. ಅದನ್ನು ಸರಿದೂಗಿಸುವ ಕ್ರಮದ ಸಂಯೋಜನೆ ರೀತಿಯ ಕಾರಣದಿಂದ ಬಂದಿರುವ ಇದನ್ನು ಒಂದು ಅಧಿಕ ಮಾಸವೆಂದು ಕರೆಯಲಾಗುತ್ತದೆ.

ಆಯಾ ಸಂಬಂಧಿತ ವಷ೯ಗಳಲ್ಲಿ ಯಾವುದೇ ಮಾಸದಲ್ಲಿ ಆ ರೀತಿಯ ಅಧಿಕ ಮಾಸವು ಗತಿಸಬಹುದಾಗಿರುತ್ತದೆ – ಅದರಂತೆ , ಪ್ರಸ್ತುತದ ಈ ವಷ೯ದಲ್ಲಿ ಆ ಸಂಬಂಧಿತ ಅಧಿಕಮಾಸವು ಶ್ರಾವಣ ಮಾಸದಲ್ಲಿ ಗತಿಸಿರುತ್ತದೆ.

ಈ ಅಧಿಕ ಮಾಸದಲ್ಲಿ ಹಿಂದೂ ಧರ್ಮ ಸಂಸ್ಕೃತಿಯ ಪವಿತ್ರ ಹಾಗೂ ಶುಭಾರಂಭದ ಆಚರಣೆಗಳಾದ ನಾಮಕರಣ , ವಿವಾಹ……..ಇನ್ನೂ ಮುಂತಾದ ಯಾವುದೇ ಶುಭ ಸೂಚಕದ ಸಮಸ್ತ ಕಾರ್ಯಗಳನ್ನು ನಡೆಸಬಾರದು ಎಂದು ತೀಮಾ೯ನಿಸಿ ಅದರಂತೆ ಹೇಳಲಾಗುತ್ತದೆ.

ಏಕೆಂದರೆ ಆ ಸಂಬಂಧಿತ ಮಾಸವು ಸಂಕ್ರಾಂತಿ ರಹಿತವಾದ ಮಾಸ ಆಗಿರುತ್ತದೆ , ಅಂದರೆ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರತಿ ತಿಂಗಳು ತನ್ನ ಸಂಚಾರವನ್ನು ಮಾಡಿದಾಗ ಆಯಾ ರಾಶಿಯ ಸಂಕ್ರಾಂತಿಯು ಆಗುತ್ತಾ ಇರುತ್ತದೆ.

ಉದಾಹರಣೆಗೆ , ಸೂರ್ಯನು ಮೇಷರಾಶಿಗೆ ಹೋದಾಗ ಮೇಷ ಸಂಕ್ರಾಂತಿ ಎಂದಾಗುತ್ತದೆ – ಅಧಿಕಮಾಸದಲ್ಲಿ ಸೂರ್ಯನು ಯಾವುದೇ ರಾಶಿಗೆ ಪ್ರವೇಶಿಸದೆ ಒಂದೇ ರಾಶಿಯಲ್ಲಿ ಎರಡು ( 2 ) ಮಾಸಗಳ ಕಾಲ ( ಅಧಿಕ ಮಾಸ ಮತ್ತು ನಿಜಮಾಸ ಸೇರಿದಂತೆ ) ಇರುತ್ತಾನೆ. ಆದುದರಿಂದ ಆ ಸಂಬಂಧಿತ ಮಾಸದಲ್ಲಿ ಯಾವುದೇ ಸಂಕ್ರಮಣವು ಇರುವುದಿಲ್ಲ. ಹಾಗಾಗಿ ಅದರಂತೆ ಇದು ಅಧಿಕಮಾಸ ಆಗಿರುತ್ತದೆ ಎಂದು ನಿಣ೯ಯವಾಗಿರುತ್ತದೆ.

ಹಾಗೆಯೇ , ಹಿಂದೆ ಭಗವಂತನು ಒಂದೊಂದು ಮಾಸವನ್ನು ಒಬೊಬ್ಬ ದೇವರುಗಳಿಗೆ ಹಂಚಿಕೆಯನ್ನು ಮಾಡಿ , ಅಧಿಕ ಮಾಸವನ್ನು ಸೂರ್ಯ ಭಗವಾನರಿಗೆ ಹಂಚಿರುತ್ತಾರೆ ಎಂಬ ದೃಢವಾದ ಮೂಲನಂಬಿಕೆಯು ಇರುತ್ತದೆ.

ಈ ಅಧಿಕ ಮಾಸದಲ್ಲಿ ಸ್ನಾನ, ಧ್ಯಾನ, ದಾನ, ದೀಪಗಳಿಂದ ದೇವತೆಗಳ ಆರಾಧನೆಯನ್ನು ಮಾಡಿದರೆ ಅವರುಗಳ ಜನ್ಮ ಜನ್ಮಾಂತರಗಳ ಪಾಪ – ಕಮ೯ಗಳ ವಿಮೋಚನೆಯಾಗುವುದು ಎಂಬ ಪ್ರತೀತಿಯು ಇರುತ್ತದೆ

ಈ ಅಧಿಕ ಮಾಸದಲ್ಲಿ ಎಲ್ಲರೂ ಮಾಡುವ ಯಾವುದೇ ದಾನ , ಆಚರಿಸುವ ಧರ್ಮಾಚರಣೆಗಳು ಸಹ ತ್ರಯತ್ರಿಂಶತಿ ( 33 ) ಕೋಟಿ ದೇವತೆಗಳಿಗೆ ಸಮಪಿ೯ತವಾಗುತ್ತದೆ ಎಂದು ಹೇಳಲಾಗುತ್ತದೆ. ಇದರಲ್ಲಿ ಕೋಟಿ ಎಂದರೆ ಸಂಸ್ಕೃತ ದಲ್ಲಿ ವರ್ಗ ಅಥವಾ ವಿಧ ಎಂಬುವುದು ನೈಜ ಅಥ೯ವು ಆಗಿರುತ್ತದೆ.

ತ್ರಯತ್ರಿಂಶತಿ (33) ಕೋಟಿ (ವಗ೯ – ವಿಧ) ದೇವತೆಗಳು :
12 ಆದಿತ್ಯರು ( ದ್ವಾದಶಾದಿತ್ಯರು ) :
1. ತ್ವಷ್ಟ 2. ಪೂಷ 3. ವಿವಸ್ವಾನ್ 4. ಮಿತ್ರ 5. ಧಾತಾ 6. ವಿಷ್ಣು 7. ಭಗ 8. ವರುಣ 9. ಸವಿತೃ 10. ಶುಕ್ರ 11. ಅಂಶ 12. ಅರ್ಯಮ

11 ರುದ್ರರು ( ಏಕಾದಶರುದ್ರಾಃ ) :
1. ಮನ್ಯು 2. ಮನು 3. ಮಹಿನಸ 4. ಮಹಾನ್ 5. ಶಿವ 6. ಋತಧ್ವಜ 7. ಉಗ್ರರೇತಾ 8. ಭವ 9. ಕಾಲ 10. ವಾಮದೇವ 11. ಧೃತವೃತ

8 ವಸುಗಳು ( ಅಷ್ಟವಸವಃ ) :
1. ಧರಾ 2. ಪಾವಕ 3. ಅನಿಲ 4. ಅಪ 5. ಪ್ರತ್ಯುಷ 6. ಪ್ರಭಾಸ 7. ಸೋಮ 8. ಧ್ರುವ

ಮತ್ತಿಬ್ಬರು (2 ) :
1. ಇಂದ್ರ 2. ಪ್ರಜಾಪತಿ.
ಇವರುಗಳೇ ಆ 33 ಕೋಟಿ ( ವರ್ಗ – ವಿಧ ) ದೇವತೆಗಳು ಆಗಿದ್ದು , ಅವರುಗಳು ಎಲ್ಲರನ್ನೂ ಆಶೀರ್ವದಿಸುವರು ಎಂದು ಮೂಲ ನಂಬಿಕೆಯಂತೆ ಹೇಳಲಾಗುತ್ತದೆ.
ಈ 33 ಕೋಟಿ ದೇವತೆಗಳಲ್ಲಿ ಅಂತರ್ಗತವಾಗಿ ಪುರುಷೋತ್ತಮನು ನೆಲೆಸಿರುವುದರಿಂದ ಸಲ್ಲಿಸುವ ಪೂಜೆಗಳು ಅವರೆಲ್ಲರಿಗೂ ಸೇರುತ್ತವೆ. ಹೀಗಾಗಿ ಎಲ್ಲಾ ದೇವತೆಗಳ ಆಶೀರ್ವಾದವು ಅಧಿಕವಾಗಿ ಲಭಿಸುತ್ತದೆ ಎನ್ನುವುದು ಅದು ಆಗಿರುತ್ತದೆ. ಹಾಗೆಯೇ , ಇದರಲ್ಲಿ ದೇವರುಗಳ ವಗ೯ ( ವಿಧ ) ಎನ್ನುವುದು ಬೇರೆ , ಹಾಗೂ ದೇವತೆಗಳ ವಗ೯ ( ವಿಧ ) ಎನ್ನುವುದು ಬೇರೆ ಆಗಿರುತ್ತದೆ ( ಅಂದರೆ ಅವೆರಡೂ ಕೂಡ ಒಂದೇ ಆಗಿರುವುದಿಲ್ಲ – ಅವುಗಳು ಬೇರೆ ಬೇರೆಯೇ ಆಗಿರುತ್ತದೆ ಎಂದು ಅದರ ಅಥ೯ವಾಗಿರುತ್ತದೆ ) ಎಂದು ತಿಳಿಯಬೇಕಾಗಿರುತ್ತದೆ.

ಅಧಿಕ ಮಾಸದ ಮಹತ್ವ :
ಹಿಂದೂ ಧರ್ಮ ಸಂಸ್ಕೃತಿಯ ಪ್ರಕಾರ ದಂತೆ , ಪ್ರತಿಯೊಂದು ಜೀವಾತ್ಮವೂ ಕೂಡ ಪಂಚಭೂತ ತತ್ವಗಳಿಂದ ನಿರ್ಮಿತ ವಾಗಿರುತ್ತದೆ.
ಈ ಪಂಚ ಮಹಾಭೂತ ತತ್ವಗಳಲ್ಲಿನ ಪ್ರಕೃತಿಯ ಅನುರೂಪವಾಗಿ , ಈ ಐದು ತತ್ವಗಳು ಯಾವಾಗಲೂ ಕೂಡ ಎಲ್ಲರೊಂದಿಗಿರುತ್ತವೆ.

ಅಧಿಕ ಮಾಸದಲ್ಲಿ ಸಮಸ್ತ ಧಾರ್ಮಿಕ ಕಾರ್ಯಗಳು , ಧ್ಯಾನ , ಯೋಗ, ಪೂಜೆ, ವ್ರತಗಳು ಹಾಗೂ ಸಿದ್ಧಿಯ ಮೂಲಕ ಸಮ್ಮಿಲನಗೊಳಿಸಲು ಪ್ರಯತ್ನಿಸುತ್ತದೆ.
ಈ ಸಂಪೂರ್ಣ ಮಾಸದಲ್ಲಿ ತಮ್ಮ ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಚರಣೆ ಯಿಂದ ವ್ಯಕ್ತಿಯು ಭೌತಿಕ ಮತ್ತು ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುವನು. ಅಧಿಕ ಮಾಸದಲ್ಲಿ ಮಾಡಿದ ಧಾರ್ಮಿಕ ಕಾರ್ಯವು ಇತರ ಯಾವುದೇ ತಿಂಗಳಲ್ಲಿ ಸಲ್ಲಿಸಿದ ಪೂಜೆಗಿಂತ ಹತ್ತು ( 10 ) ಪಟ್ಟು ಹೆಚ್ಚು ಫಲಿತಾಂಶವನ್ನು ನೀಡುತ್ತದೆ ಎಂಬ ದೃಢವಾದ ಮೂಲನಂಬಿಕೆಯು ಇರುತ್ತದೆ.

ಅಧಿಕ ಮಾಸದಲ್ಲಿನ ಆಚರಣೆಗಳು :
ಅಧಿಕ ಮಾಸದಲ್ಲಿ ಹೆಚ್ಚಾಗಿ ಹಿಂದೂಗಳು ಉಪವಾಸ , ಪೂಜೆ , ವ್ರತ , ಧ್ಯಾನ , ಭಜನೆ ಮತ್ತು ಕೀರ್ತನೆಗಳನ್ನು ಅವರ ಜೀವನಶೈಲಿಯನ್ನಾಗಿ ಮಾಡಿಕೊಳ್ಳುತ್ತಾರೆ. ಪೌರಾಣಿಕ ಸಿದ್ಧಾಂತದ ಪ್ರಕಾರ , ಈ ಮಾಸದ ಸಮಯದಲ್ಲಿ ಹೋಮ , ಹವನ ಅಷ್ಟೇ ಅಲ್ಲದೆ ಪುರಾಣಾದಿ ಶ್ರವಣ ಆದಿಯಾಗಿ ದೇವತಾರಾಧನೆ ಇತ್ಯಾದಿಗಳನ್ನು ಕೇಳುವುದು, ಜಪಿಸುವುದು ವಿಶೇಷ ರೂಪದಲ್ಲಿ ಫಲದಾಯಕವು ಆಗಿರುತ್ತದೆ.
ಹಾಗೆಯೇ , ಈ ಅಧಿಕ ಮಾಸದಲ್ಲಿ ಮಂತ್ರವನ್ನು ಜಪಿಸುವ ಸಾಧಕರಿಗೆ ಭಗವಂತನು ಸ್ವಯಂ ಆಶೀರ್ವಾದವನ್ನು ನೀಡುತ್ತಾನೆ ಎಂಬ ಪ್ರತೀತಿಯು ಇರುತ್ತದೆ.
ಮಾಹಿತಿಗಳ ಸಂಗ್ರಹ ಮತ್ತು ಲೇಖನ : ವಿ. ಪಿ. ಆರಾಧ್ಯ – ಮೈಸೂರು

Leave a Reply

Your email address will not be published. Required fields are marked *

error: Content is protected !!