ಡಾ.ಅಂಬೇಡ್ಕರ್ ಪ್ರತಿಮೆ ಪುನರ್ ಸ್ಥಾಪನೆಗೆ ಗುದ್ದಲಿ ಪೂಜೆ
ದಾವಣಗೆರೆ: ನಗರದ ಅಂಬೇಡ್ಕರ್ ವೃತ್ತದಲ್ಲಿ 12 ಅಡಿ ಎತ್ತರದ ಡಾ. ಬಿ ಆರ್ ಅಂಬೇಡ್ಕರ್ ನೂತನ ಪುತ್ಥಳಿ ಹಾಗೂ ನವೀಕೃತ ವೃತ್ತ ನಿರ್ಮಾಣ, ವೃತ್ತ ಸುತ್ತಲು ಸ್ಟೀಲ್ ರೈಲಿಂಗ್ ನಿರ್ಮಿಸುವ ಕಾಮಗಾರಿಗೆ ಸಂಸದ ಜಿ ಎಂ ಸಿದ್ದೇಶ್ವರ್ ಹಾಗೂ ಶಾಸಕ ಎಸ್. ಎ. ರವೀಂದ್ರನಾಥ್ ಸೇರಿದಂತೆ ಹಲವು ಗಣ್ಯರು ಗುದ್ದಲಿ ಪೂಜೆ ನೆರವೇರಿಸಿದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಮಾಜಿ ಮೇಯರ್ ಬಿ.ಜಿ. ಅಜಯ್‌ಕುಮಾರ್, ಮುಖಂಡರಾದ ಕುಂದುವಾಡ ಮಂಜುನಾಥ್, ಹೆಚ್ ಮಲ್ಲೇಶ್, ಎಲ್. ಎಂ. ಹನುಮಂತಪ್ಪ, ಆಲೂರು ನಿಂಗರಾಜ್ ಸೇರಿದಂತೆ ಹಲವು ಗಣ್ಯರು ಗುದ್ದಲಿ ಪೂಜೆ ಸಮಾರಂಭದಲ್ಲಿ ಭಾಗವಹಿಸಿದ್ದರು.