ವಸತಿ ಸೌಲಭ್ಯ ಕೊಡಿಸಬೇಕೆಂದು ಶಾಸಕರಿಗೆ ಮನವಿ ಮಾಡಿದ ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್

Kadasamsa taluk coordinator P.J.Mahantesh appealed to the legislators to provide accommodation in case of indefinite sit-in satyagraha.

ಹರಿಹರ: dss ತಾಲ್ಲೂಕಿನ ಭಾನುವಳ್ಳಿ ಹಾಗೂ ಕಡ್ಲೆಗೊಂದಿ ಗ್ರಾಮಗಳ ನಿರ್ವಸತಿಕ ದಲಿತ ಹಾಗೂ ಹಿಂದುಳಿದ ಸಮುದಾಯದವರಿಗೆ ವಸತಿ ಯೋಜನೆ ಜಾರಿಗೆ ಆಗ್ರಹಿಸಿ ನಗರದ ತಾಲ್ಲೂಕು ಕಚೇರಿ ಎದುರು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕ್ರಷ್ಣಪ್ಪ ಸ್ಥಾಪಿತ)ಯಿಂದ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಮಂಗಳವಾರ ಶಾಸಕ ಬಿ.ಪಿ.ಹರೀಶ್ ಭೇಟಿ ನೀಡಿ ಮನವಿ ಸ್ವೀಕರಿಸಿದರು.

ನಂತರ ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಎರಡೂ ಗ್ರಾಮಗಳಲ್ಲಿ ದಲಿತ ಹಾಗೂ ಹಿಂದುಳಿದ ಸಮುದಾಯದ ನೂರಾರು ಕುಟುಂಬದವರು ಸಣ್ಣ, ಪುಟ್ಟ ಗುಡಿಸಲು, ನೆರಿಕೆ ಮನೆಗಳಲ್ಲಿಗಳಲ್ಲಿ ಮೂಲ ಸೌಕರ್ಯಗಳಿಲ್ಲದೆ ವಾಸಿಸುತ್ತಿದ್ದಾರೆ.ಈ ಎರಡೂ ಗ್ರಾಮಗಳಲ್ಲಿ ಸರ್ಕಾರಕ್ಕೆ ಸಂಬAದಿತ ಜಮೀನುಗಳು ಲಭ್ಯವಿದೆ. ಈ ಕುರಿತು ಕಳೆದ ಎರಡು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ, ಕಳೆದ ಜೂನ್ ತಿಂಗಳಲ್ಲಿ ಭಾನುವಳ್ಳಿಯಿಂದ ಹರಿಹರದವರೆಗೆ ಪಾದಯಾತ್ರೆಯನ್ನೂ ಮಾಡಲಾಗಿದೆ, ಕಳೆದ 8 ದಿನಗಳಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ, ಈ ಕುರಿತು ತಾಲ್ಲೂಕು ಹಾಗೂ ಜಿಲ್ಲಾಡಳಿತದವರಿಗೆ ಮನವರಿಕೆ ಮಾಡಿ ವಸತಿ ಸೌಲಭ್ಯ ಕೊಡಿಸಬೇಕೆಂದು ಶಾಸಕರಿಗೆ ಮನವಿ ಮಾಡಿದರು.

ಈ ಸಮಸ್ಯೆ ನನ್ನ ಗಮನದಲ್ಲಿದೆ, ಈ ಕುರಿತು ಸಂಬAಧಿತ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆಂದು ಶಾಸಕ ಹರೀಶ್ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಹನುಮಜ್ಜಿ ಮಾತಂಗಮ್ಮ, ಗ್ರಾಪಂ ಸದಸ್ಯ ತಿಮ್ಮಣ್ಣ ಕಡ್ಲೆಗೊಂದಿ, ಪರಮೇಶ್, ಚೌಡಪ್ಪ ಭಾನುವಳ್ಳಿ, ಹನುಮಂತಪ್ಪ, ಮಲ್ಲಮ್ಮ, ಬಸಮ್ಮ, ನಿರ್ಮಲ, ಹನುಮಕ್ಕ, ಶಹತಾಜ್‌ಬಾನು, ಮಲ್ಕಾಬಿ, ಸೀತಮ್ಮ, ಗಂಗಮ್ಮ ಇದ್ದರು.

 

 

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!