e-KYC; ಆ. 31ರೊಳಗೆ ಇಕೆವೈಸಿ ಕಡ್ಡಾಯ

ದಾವಣಗೆರೆ, ಆ. 19: ಜಿಲ್ಲೆಯ ಎಲ್ಲಾ ಪಡಿತರ ಚೀಟಿ (ration card) ಫಲಾನುಭವಿಗಳ ಇ-ಕೆವೈಸಿ (e-KYC) ಸಂಗ್ರಹಣೆಯನ್ನು ನ್ಯಾಯಬೆಲೆ ಅಂಗಡಿಗಳ ಮಟ್ಟದಲ್ಲಿ ಆಗಸ್ಟ್ 31ರೊಳಗೆ ಪೂರ್ಣಗೊಳಿಸಲು ತಿಳಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು ಅಂತ್ಯೋದಯ 10696, ಆದ್ಯತಾ ಪಡಿತರ ಚೀಟಿಗಳು 51509, ಆದ್ಯತೇತರ ಪಡಿತರ ಚೀಟಿಗಳು 74,882, ಒಟ್ಟು 137087 ಪಡಿತರ ಚೀಟಿ ಫಲಾನುಭವಿಗಳ ಇ-ಕೆವೈಸಿ ಬಾಕಿ ಇದ್ದು, ಅಂತಹ ಫಲಾನುಭವಿಗಳ ಪಟ್ಟಿಯನ್ನು ಪ್ರತಿ ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರಕಟಿಸಲಾಗುತ್ತದೆ. ಸಂಬAಧಿಸಿದ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಫಲಾನುಭವಿಗಳು ಆಗಸ್ಟ್ 31ರೊಳಗಾಗಿ ಇ-ಕೆವೈಸಿ ಪೂರ್ಣಗೊಳಿಸಿಕೊಳ್ಳಬೇಕು.

sports; ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

ವಿನಾಯಿತಿ ನೀಡಲಾಗಿರುವ ಪಡಿತರ ಚೀಟಿಯಲ್ಲಿ (Ration Card) ಬೆರಳಚ್ಚು ಪಡೆಯಲು ಆಗದೆ ಇರುವ(Exempted Rc’s) ಪಡಿತರ ಫಲಾನುಭವಿಗಳನ್ನು ಅಮಾನತು ಪಡಿಸದೆ, ಪುನಃ ಬೆರಳಚ್ಚು ಪಡೆಯಲು, ಬೆರಳಚ್ಚು ಬಾರದೆ ಇದ್ದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಐರಿಸ್(IRIS) ತಂತ್ರಾಂಶವನ್ನು ಬಳಸಿ ಫಲಾನುಭವಿಗಳ ಇ-ಕೆವೈಸಿ ಪೂರ್ಣಗೊಳಿಸಲಾಗುವುದು.

ಪಡಿತರ ಚೀಟಿ ಫಲಾನುಭವಿಗಳ ಇ-ಕೆವೈಸಿ ಸಂಗ್ರಹಣೆಯನ್ನು ನಿಗದಿತ ಅವಧಿಯೋಳಗೆ ಪೂರ್ಣಗೊಳಿಸಿಕೊಳ್ಳದೆ ಇರುವಂತಹ ಪಡಿತರ ಚೀಟಿಗಳ ಸದಸ್ಯರುಗಳನ್ನು ಪಡಿತರ ಚೀಟಿಯಿಂದ ಅಮಾನತುಗೊಳಿಸುವ ಮೂಲಕ ಆಹಾರಧಾನ್ಯ ಮತ್ತು ಡಿಬಿಟಿ ನಗದು ಸೌಲಭ್ಯವನ್ನು ಸೆಪ್ಟೆಂಬರ್ ಮಾಹೆಯಿಂದ ಸ್ಥಗಿತಗೊಳಿಸಲಾಗುವುದು.

education; ಗುಣಮಟ್ಟದ ಶಿಕ್ಷಣಕ್ಕೆ ನಮ್ಮ ಸರ್ಕಾರ ಹೆಚ್ಚು ಆದ್ಯತೆ ನೀಡುತ್ತಿದೆ: ಶಾಸಕ ಬಸವರಾಜು ವಿ ಶಿವಗಂಗಾ

ಪರಿಶಿಷ್ಟ ಜಾತಿ  ಮತ್ತು ಪರಿಶಿಷ್ಟ ಪಂಗಡ ಪಡಿತರ ಚೀಟಿದಾರರು ತಮ್ಮ ಕುಟುಂಬದ ಯಾರಾದರೂ ಒಬ್ಬ ಸದಸ್ಯರ ಜಾತಿ ಪ್ರಮಾಣ ಪತ್ರವನ್ನು ನ್ಯಾಯಬೆಲೆ ಅಂಗಡಿಯಲ್ಲಿ ನೀಡಿ ನಿಖರವಾದ ವಿವರ ದಾಖಲಿಸಿಕೊಳ್ಳಲು ಜಿಲ್ಲಾ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ಶಿದ್ರಾಮ ಮಾರಿಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!