employment; ಹೊಸ ಕೈಗಾರಿಕೆ ಸಂಸ್ಥೆಗಳ ಸ್ಥಾಪನೆಯಿಂದ ಜೀವನಮಟ್ಟ ಉತ್ತಮ

ದಾವಣಗೆರೆ, ಆ.28: ಬೌದ್ಧಿಕ ಆಸ್ತಿ ಹಕ್ಕಿನಿಂದ ಆರ್ಥಿಕ ಪ್ರಗತಿ ಹೊಸ ಕೈಗಾರಿಕೆ/ತಯಾರಕ ಸಂಸ್ಥೆಗಳ ಸ್ಥಾಪನೆ ಉದ್ಯೋಗ (employment) ಸೃಷ್ಠಿಗೆ ಕಾರಣವಾಗುವುದರ ಮೂಲಕ ಜನರ ಜೀವನದ ಗುಣಮಟ್ಟವನ್ನು ಉತ್ತಮಪಡಿಸಲು ಸಹಕಾರವಾಗುತ್ತದೆ ಎಂದು ದಾವಣಗೆರೆ ಸ್ಮಾರ್ಟ್ಸಿಟಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವೀರೇಶ್ ಕುಮಾರವರು ನುಡಿದರು

ಅವರು ಸ್ಥಳೀಯ ವಿಶ್ವವಿದ್ಯಾಲಯ ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ಬೌದ್ಧಿಕ ಆಸ್ತಿ ಹಕ್ಕುಗಳ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ “ಬೌದ್ಧಿಕ ಆಸ್ತಿ ಹಕ್ಕುಗಳು” ಎಂಬ ವಿಷಯ ಕುರಿತು ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮನುಷ್ಯನ ಬೌದ್ದಿಕ ಸಾಮರ್ಥ್ಯದಿಂದ ಸೃಷ್ಟಿಸಲ್ಷಟ್ಟ ಸೃಜನಾತ್ಮಕ ಮತ್ತು ಕ್ರಿಯಾತ್ಮಕ ಕ್ರಿಯೆಗಳನ್ನು ಬೌದ್ದಿಕ ಸ್ವತ್ತುಗಳು ಅಥವಾ ಆಸ್ತಿಯ ಹಕ್ಕುಗಳಾಗಿ ರಕ್ಷಣೆ ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಇದೆ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿಯ ಬಗ್ಗೆ ಮಾತನಾಡುತ್ತ ದಾವಣಗೆರೆಯ ನಗರವು ದೇಶದಲ್ಲಿ ೨೩ನೇ ಸ್ಥಾನದಲ್ಲಿದ್ದು ಹಾಗೂ ಕರ್ನಾಟಕದಲ್ಲಿ ಮೂರನೇ ಸ್ಥಾನದಲ್ಲಿ ಅತ್ಯುತ್ಮಮ ಕಾರ್ಯವನ್ನು ನಿರ್ವಹಿಸುತ್ತಿದೆ ಎಂದು ತಿಳಿಸಿದರು. ಮಹಾವಿದ್ಯಾಲಯದ ಯಾಂತ್ರಿಕ ವಿಭಾಗದ ಪ್ರಾಧ್ಯಾಪಕರಾದ ಡಾ.ಶೇಖರಪ್ಪ ಬಿ. ಮಲ್ಲೂರ ಮಾತನಾಡುತ್ತ ಬೌದ್ದಿಕ ಆಸ್ತಿಯ ಹಕ್ಕು ಇತರ ಆಸ್ತಿಗಳಂತೆ ಅದನ್ನು ಹೊಂದಿದ ಆಥವಾ ಸೃಷ್ಠಿಸಿದ ಲೇಖಕರಿಗೆ ಸಂಶೋಧಕರಿಗೆ ಉತ್ಪಾದಕ ಸಂಸ್ಥೆಗಳಿಗೆ ಕಾನೂನಾತ್ಮಕವಾಗಿ ನೀಡುವುದಲ್ಲದೇ ಆರ್ಥಿಕ ಅಥವಾ ಹಣಕಾಸಿನ ಅನುಕೂಲಗಳನ್ನು ಒದಗಿಸುತ್ತಿದೆ ಎಂದು ನುಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳ ವರ್ಗಾವಣೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರೆ ಪ್ರಾಚಾರ್ಯರಾದ ಡಾ.ಮಂಜುನಾಥ ಕೆ. ಇವರು ಮಾತನಾಡಿ ಪೆಟೆಂಟ್ ಎನ್ನುವುದು ಹೊಸ ಸಂಶೋಧನೆ ಅಥಾವ ಅವಿಷ್ಕಾರಕ್ಕಾಗಿ ನೀಡಲಾದ ವಿಶೇಷ ಹಕ್ಕು ಇದು ಸೀಮಿತ ಅವಧಿಗೆ ಒಳಪಟ್ಟಿರುತ್ತದೆ ಎಂದು ವಿವರಿಸಿದರು.

ಸ್ಮಾರ್ಟ್ ಸಿಟಿಯ ಯೋಜನಾ ಸಲಹೆಗಾರ ಹಾಗೂ ಮುಖ್ಯಸ್ಥರಾದ ಹೊಂಬಣ್ಣ ಉಮಾಪತಿ ಡೀನರು ಆಡಳಿತರಾದ ಡಾ.ಟಿ.ಡಿ.ವಿಷ್ಣುಮೂರ್ತಿ, ಡಾ.ಮಂಜನಾಯ್ಕ್ ಡೀನರು ವಿದ್ಯಾರ್ಥಿಗಳ ಕ್ಷೇಮಬಿವೃದ್ಧಿ, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಚಂಪಾ ಪ್ರಾರ್ಥಿಸಿದರು, ಕಾರ್ಯಕ್ರಮ ಸಂಯೋಜಕರು ಹಾಗೂ ಡೀನರು (ಆರ್ ಅಂಡ್ ಡಿ) ಆದ ಡಾ.ಮಂಜಪ್ಪ ಎಸ್. ಇವರು ಸ್ವಾಗತಿಸಿದರು ಸಿವಿಲ್ ವಿಭಾಗದ ಸಿ.ಎಮ್.ರವಿಕುಮಾರ ಮತ್ತು ಡಾ,ಮಹಮ್ಮದ್ ರಫೀ ಸಿ.ಎಸ್.ಅಂಡ್ ಇ ವಿಭಾಗದ ಇವರುಗಳು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು ಐ.ಅಂಡ್ ಪಿ ವಿಭಾಗ ಪ್ರೊ.ಎಮ್.ಹೆಚ್.ದಿವಾಕರ್ ಕಾರ್ಯಕ್ರಮದ ನಿರೂಪಣೆ ಮಾಡಿದರು ಕೊನೆಯದಾಗಿ ಡೀನರು (ಶೈಕ್ಷಣಿಕ) ಮತ್ತು ಕಾರ್ಯಕ್ರಮದ ಸಂಯೋಜಕರಾದ ಡಾ.ಈರಪ್ಪ ಸೊಗಲದ್ ವಂದನಾರ್ಪಣೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!