ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪಗೆ ದಾವಣಗೆರೆ ಪೊಲೀಸರ ನೋಟೀಸ್

ದಾವಣಗೆರೆ: ತನಿಖೆಗಾಗಿ ಠಾಣೆಗೆ ಆಗಮಿಸುವಂತೆ ಮಾಜಿ ಉಪ ಮುಖ್ಯಮಂತ್ರಿಕೆ.ಎಸ್. ಈಶ್ವರಪ್ಪ ಅವರಿಗೆ ಬಡಾವಣೆ ಪೊಲೀಸರು ನೋಟೀಸ್ ಕಳುಹಿಸಿದ್ದಾರೆ.

ಕೆ.ಎಸ್. ಈಶ್ವರಪ್ಪ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆಂದು ಶುಕ್ರವಾರ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಹನುಮಂತ ಎಂಬುವವರು ದೂರು ನೀಡಿದ್ದರು. ಕಲಂ 505 (1)(ಸಿ), 505(2), 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಸದರಿ ಕೇಸಿನಲ್ಲಿ ಘಟನೆ ಬಗ್ಗೆ ಕೆಲವು ಸತ್ಯಾಂಶ ಹಾಗೂ ಸನ್ನಿವೇಶಗಳನ್ನು ಖಚಿತ ಪಡಿಸಿಕೊಳ್ಳಬೇಕಾಗಿರುವುದರಿಂದ ವಿಚಾರಣೆ ಮಾಡಲು ಪೂರಕ ಕಾರಣಗಳು ಕಂಡು ಬಂದಿದ್ದು, ಕೇಸಿನ ಆರೋಪ ವಿಚಾರಣೆಗಾಗಿ ಫೆ.15ರಂದು ಬೆಳಿಗ್ಗೆ 10.30 ಗಂಟೆಗೆ ಬಡಾವಣೆ ಪೊಲೀಸ್ ಠಾಣೆಗೆ ಆಗಮಿಸುವಂತೆ ಆರಕ್ಷಕ ಉಪ ನಿರೀಕ್ಷಕರು ನೊಟೀಸ್ ಕಳುಹಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!