Exclusive: ದಾವಣಗೆರೆ ಜೈಲಿಂದ ಕಳ್ಳತನ ಆರೋಪಿ ಚಿಕಿತ್ಸೆಗೆ ಬಂದಾಗ ಎಸ್ಕೇಪ್.!
ದಾವಣಗೆರೆ: ದಾವಣಗೆರೆ ಜೈಲ್ ಮತ್ತೆ ಸುದ್ದಿಯಲ್ಲಿದೆ, ಮಾದಕ ವಸ್ತು ಪ್ರಕರಣದ ಬೆನ್ನಲ್ಲೆ ಇದೀಗ ದಾವಣಗೆರೆ ಜೈಲ್‌ನ ಕೈದಿ ಒಬ್ಬ ತಪ್ಪಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
ದಾವಣಗೆರೆ ಜೈಲ್‌ನಲ್ಲಿ ಇತ್ತೀಚೆಗೆ ಅಷ್ಟೆ ದಾಖಲಾಗಿದ್ದ ಕಳ್ಳತನದ ಆರೋಪಿ ಎಸ್ಕೇಪ್ ಆಗಿರುವ ಬಗ್ಗೆ ದಾವಣಗೆರೆ ಮೂಲಗಳಿಂದ ವರದಿಯಾಗಿದೆ. ಚಿತ್ರದುರ್ಗದ ಮೂಲದ ಕಳ್ಳತನದ ಆರೋಪಿ ತೇಜು ಎಂಬಾತ. ಕಳೆದ ಏಪ್ರಿಲ್ 30 ರಂದು ದಾವಣಗೆರೆ ಜೈಲ್‌ನಲ್ಲಿ ಅಡ್ಮಿಷನ್ ಆಗಿದ್ದ. ಈತನ ಆರೋಗ್ಯ ಸರಿಯಿಲ್ಲದ ಕಾರಣಕ್ಕೆ ಇವನನ್ನು ಸೇರಿದಂತೆ ಇಬ್ಬರು ಕೈದಿಗಳನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು.
ಈ ವೇಳೆ ಆರೋಪಿ ತೇಜು ಎಸ್ಕೇಪ್ ಆಗಿದ್ದಾನೆ. ಈ ಸಂಬಂದ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ. ಕಳೇದ ವರ್ಷದಲ್ಲಿಯು ಓರ್ವ ಅತ್ಯಾಚಾರ ಪ್ರಕರಣದ ಆರೋಪಿಯೊಬ್ಬ ದಾವಣಗೆಗೆ ಜೈಲಿನ ಗೋಡೆ ಹಾರಿ ತಪ್ಪಿಸಿಕೊಂಡಿದ್ದರ ಬಗ್ಗೆ ವರದಿಯಾಗಿತ್ತು. ಆನಂತರ ಮಾದಕವಸ್ತು ಪ್ರಕರಣ ಮತ್ತು ಜೈಲಿನಲ್ಲಿ ಹಲ್ಲೆ ಪ್ರಕರಣಗಳ ನಡೆದ ಬಗ್ಗೆ ವರದಿಯಾಗಿದ್ದವು. ಇದೀಗ ಕಳ್ಳತನ ಪ್ರಕರಣದ ಕೈದಿ ತಪ್ಪಿಸಿಕೊಂಡಿರುವ ಬಗ್ಗೆ ಸುದ್ದಿಯಾಗಿದೆ.