ಬೆಂಗಳೂರು: ದೊಡ್ಡಬಳ್ಳಾಪುರ ನಗರದ ಲಾವಣ್ಯ ಶಾಲೆ ಬಳಿಯ ಗ್ಯಾಸ್ ಬಂಕ್ ಹತ್ತಿರ ಗ್ಯಾಸ್ ಲೀಕೇಜ್ ಆಗಿ ಆಟೋ ಒಂದು ಹೊತ್ತಿ ಉರಿದಿದೆ. ಹೊಸಹಳ್ಳಿ ನಿವಾಸಿ ಶಿವಕುಮಾರ್ ಅವರಿಗೆ ಸೇರಿದ ಆಟೋ ಗ್ಯಾಸ್ ಲೀಕೇಜ್‌ನಿಂದಾಗಿ ಸುಟ್ಟು ಭಸ್ಮವಾಗಿದೆ.
ಆಟೋ ಚಾಲಕ ಶಿವಕುಮಾರ್ ಎಂಬವರು ದಾಬಸ್ ಪೇಟೆ ಮುಖ್ಯ ರಸ್ತೆಯಲ್ಲಿರುವ ಗೋ ಗ್ಯಾಸ್ ಬಂಕ್‌ನಲ್ಲಿ ಗ್ಯಾಸ್ ತುಂಬಿಸಿಕೊಂಡು ಹೊರಬಂದ ತಕ್ಷಣ ಏಕಾಏಕಿ ಬೆಂಕಿ ಕಾಣಿಸಿಕೊಂಡು ಆಟೋ ಸಂಪೂರ್ಣ ಭಸ್ಮವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹೊತ್ತಿ ಉರಿಯುತ್ತಿದ್ದ ಆಟೋವನ್ನು ಆಟೋ ಚಾಲಕ ಶಿವಕುಮಾರ್ ಮತ್ತು ಗ್ಯಾಸ್ ಬಂಕ್ ಸಿಬ್ಬಂದಿ ಸ್ಥಳೀಯರು ನೆರವಿನಿಂದ ನಂದಿಸಿದ್ದಾರೆ.
