ಮೊದಲನೇ ತ್ರೈಮಾಸಿಕ ಟಿಡಿಪಿ ಸಭೆ : ಜನರ ಸಮಸ್ಯೆಗೆ ಸ್ಪಂದಿಸಿ  :ಅಧಿಕಾರಿಗಳಿಗೆ  ಬಸವರಾಜು ವಿ ಶಿವಗಂಗಾ ಸೂಚನೆ

ಮೊದಲನೇ ತ್ರೈಮಾಸಿಕ ಟಿಡಿಪಿ ಸಭೆ : ಜನರ ಸಮಸ್ಯೆಗೆ ಸ್ಪಂದಿಸಿ  :ಅಧಿಕಾರಿಗಳಿಗೆ  ಬಸವರಾಜು ವಿ ಶಿವಗಂಗಾ ಸೂಚನೆ
ಚನ್ನಗಿರಿ : ಪಟ್ಟಣದ ತಾಲ್ಲೂಕ್ ಪಂಚಾಯಿತಿ ಕಚೇರಿಯ ರಾಜೀವ್ ಗಾಂಧಿ ಸಭಾಂಗಣದಲ್ಲಿ ಶಾಸಕರಾದ ಬಸವರಾಜು ವಿ ಶಿವಗಂಗಾ ಹಾಗೂ ಕೆ.ಎಸ್ ಬಸವಂತಪ್ಪ ನೇತೃತ್ವದಲ್ಲಿ ಮೊದಲನೇ ತಾಲ್ಲೂಕ್ ಪಂಚಾಯಿತಿ ಅಭಿವೃದ್ಧಿ ಸಭೆ ಮಾಡಲಾಯಿತು. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಶಾಸಕರು ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ಪಡೆದರು. ಹಳ್ಳಿಗಳಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆ ಏನೇ ಇದ್ದರು ತಕ್ಷಣ ಬಗೆಹರಿಸುವಂತೆ ಸೂಚಿಸಿದರು.

ಅಪೂರ್ಣಗೊಂಡ ಕಾಮಗಾರಿಗಳನ್ನ ಪೂರ್ಣಗೊಳಿಸುವಂತೆ ತಾಕೀತು ಮಾಡಿದ್ದು ಅದರ ವರದಿ ಒಪ್ಪಿಸುವಂತೆ ತಿಳಿಸಿದರು. ಕಳಪೆ ಗುಣಮಟ್ಟದ ಕಾಮಗಾರಿ ಕಂಡು ಬಂದಲ್ಲಿ ಅಧಿಕಾರಿಗಳೇ ನೇರಹೊಣೆಯಾಗಬೇಕಾಗುತ್ತದೆ. ಪ್ರಾಮಾಣಿಕವಾಗಿ ಕೆಲಸ ಮಾಡಿ, ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಬೇಕೆಂದು ಶಾಸಕ ಬಸವರಾಜು ವಿ ಶಿವಗಂಗಾ ಸೂಚಿಸಿದರು.ನಮ್ಮ ಸರ್ಕಾರ ಅಭಿವೃದ್ಧಿಗೆ ಎಲ್ಲಾ ರೀತಿ ನೆರವು ಸಹಕಾರ ನೀಡುತ್ತದೆ, ಅಧಿಕಾರಿಗಳು ಅದನ್ನ ಕಾರ್ಯರೂಪಕ್ಕೆ ತಂದು ಜನರಿಗೆ ಅನೂಕೂಲ ಮಾಡಿಕೊಡಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ತಾ.ಪಂ. ಇಓ ಉತ್ತಮ್ ತಹಶೀಲ್ದಾರ್ ಯರ್ರಿಸ್ವಾಮಿ ಸೇರಿದಂತೆ ತಾಲ್ಲೂಕ್ ಅಧಿಕಾರಿಗಳು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!