ತಾಯಿ ಪರ ಪ್ರಚಾರಕ್ಕೆ ತೆರಳುವ ವೇಳೆ ಮಾನವೀಯತೆ ಮೆರೆದ ಪುತ್ರಿ ಜಿ.ಎಸ್.ಅಶ್ವಿನಿ.
ದಾವಣಗೆರೆ : ಅಪಘಾತಕ್ಕೆ ಒಳಗಾಗಿದ್ದ ವ್ಯಕ್ತಿಗಳಿಗೆ ಸಕಾಲದಲ್ಲಿ ಸ್ಪಂದಿಸಿ, ಆಸ್ಪತ್ರೆಗೆ ದಾಖಲಿಸುವ ಮೂಲಕ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಪುತ್ರಿ ಜಿ.ಎಸ್.ಅಶ್ವಿನಿ ಮಾನವೀಯತೆ ಮೆರೆದಿದ್ದಾರೆ.
ಜಿ.ಎಸ್.ಅಶ್ವಿನಿ ಅವರು ಬಿಜೆಪಿ ಅಭ್ಯರ್ಥಿ, ತಾಯಿ ಗಾಯಿತ್ರಿ ಸಿದ್ದೇಶ್ವರ್ ಪರ ಪ್ರಚಾರಕ್ಕೆ ಮಲೆಬೆನ್ನೂರಿಗೆ ತೆರಳುತ್ತಿದ್ದಾಗ ಹರಿಹರ-ಶಿವಮೊಗ್ಗ ರಸ್ತೆ, ಹರಿಹರ ಬೈಪಾಸ್ ಬಳಿ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ಕೆಳಗೆ ಜನ ಸಿಲುಕಿಕೊಂಡಿದ್ದರು. ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಜಿ.ಎಸ್.ಅಶ್ವಿನಿಯರು ಘಟನೆ ಗಮನಿಸಿ ಗಾಯಾಳುಗಳ ನೆರವಿಗೆ ಧಾನಿಸಿದ್ದಾರೆ.
ಮಲೆಬೆನ್ನೂರು ಸಮೀಪದ ಅರಲಹಳ್ಳಿ ಗ್ರಾಮಸ್ಥರು ಊರಿನ ಜಾತ್ರೆ ನಿಮಿತ್ತ ನಾಲ್ಕು ಟ್ರ್ಯಾಕ್ಟರ್ ಗಳಲ್ಲಿ ಮುಳ್ಳಿನ ಗಿಡಗಳನ್ನು ತುಂಬಿಕೊಂಡು ಹೋಗುತ್ತಿದ್ದರು. ಒಂದು ಟ್ರ್ಯಾಕ್ಟರ್ ನ ಟ್ರಾಲಿ ಮುಗುಚಿ ಬಿದ್ದು, ಕೆಳಗೆ ನಾಲ್ಕೈದು ಜನ ಸಿಲುಕಿಕೊಂಡಿದ್ದರು.
ಅಪಾಯದಲ್ಲಿದ್ದ ಅವರನ್ನು ಸ್ಥಳೀಯರ ಮತ್ತು ಗ್ರಾಮಸ್ಥರ ಸಹಕಾರದಿಂದ ರಕ್ಷಿಸಿ ತಮ್ಮ ವಾಹನದಲ್ಲೇ ಹರಿಹರ ತಾಲೂಕು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ..