ವಾಹನ ಸವಾರರಿಗೆ ಗುಡ್‌ನ್ಯೂಸ್‌ ; ಪೆಟ್ರೋಲ್ ಡೀಸೆಲ್ ದರ ಇಂದಿನಿಂದ ಕಡಿತ

ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಕೇಂದ್ರ ಸರ್ಕಾರ, ದೇಶದ ಜನರಿಗೆ ಗಿಫ್ಟ್ ಕೊಟ್ಟಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಬೆಲೆ ಮೇಲೆ ತಲಾ 2 ರೂಪಾಯಿ ಕಡಿಮೆ ಮಾಡಿ ಆದೇಶ ಹೊರಡಿಸಿದೆ ಇಂದಿನಿಂದ ಬೆಳಗ್ಗೆ 6 ಗಂಟೆಯಿಂದ ಹೊಸ ದರಗಳು ಜಾರಿಯಾಗುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, “ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 2 ರೂಪಾಯಿ ಇಳಿಸುವ ಮೂಲಕ, ಪ್ರಧಾನಿ ನರೇಂದ್ರ ಮೋದಿ ಅವರು ಕೋಟ್ಯಂತರ ಭಾರತೀಯರ ಕುಟುಂಬದ ಕಲ್ಯಾಣ ಮತ್ತು ಅನುಕೂಲತೆ ಯಾವಾಗಲೂ ತಮ್ಮ ಗುರಿ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಎಂದಿದ್ದಾರೆ

ಬೆಂಗಳೂರಿನಲ್ಲಿ ಮಾ. 13-14ರ ಪೆಟ್ರೋಲ್ ದರ ಪ್ರತಿ ಲೀಟರಿಗೆ 101.94 ರೂ. ಇದ್ದು, ಪರಿಷ್ಕೃತರ ದರಗಳು ಅನ್ವಯವಾದ ನಂತರ ಮಾ. 14ರ ಮಧ್ಯರಾತ್ರಿಯಿಂದ ಪ್ರತಿ ಲೀಟರಿಗೆ 99.94 ರೂ. ಆಗಲಿದೆ. ಇನ್ನು, ಮಾ. 13-14ರಂದು ಪೆಟ್ರೋಲ್ ನ ದರ ಪ್ರತಿ ಲೀಟರ್ 87.89 ಇದ್ದು, ಇದರ ದರ ಪ್ರತಿ ಲೀಟರ್ ಗೆ 85.89 ರೂ. ಆಗಲಿದೆ.

Leave a Reply

Your email address will not be published. Required fields are marked *

error: Content is protected !!