ಹೊನ್ನಾಳಿ ಕಡದಕಟ್ಟೆ ಪಿಡಿಒ ಮೇಲಿದ್ದ ದಂಡನಾದೇಶ ಹಿಂಪಡೆದ ಸರ್ಕಾರ.!

ದಾವಣಗೆರೆ: ಹೊನ್ನಾಳಿ ತಾಲೂಕು ವ್ಯಾಪ್ತಿಯ ಚಿ. ಕಡದಕಟ್ಟೆ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಎಸ್.ಬಿ. ಮಂಜುಳ ಇವರ ವಿರುದ್ದದ ಆರೋಪಗಳಿಗೆ ಸಂಬ0ಧಿಸಿದ0ತೆ ದಂಡನೆ ವಿಧಿಸಿ ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ:ಗ್ರಾಅಪ707ಗ್ರಾಪ0ಕಾ 2016, ದಿನಾಂಕ:26-10-2018ರ ಆದೇಶವನ್ನು ಸರ್ಕಾರ ಹಿಂಪಡೆದು ಜೂನ್, 2ರ, 2022ರಂದು ಆದೇಶಿಸಿದೆ.

ಚಿ. ಕಡದಕಟ್ಟೆ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಎಸ್.ಬಿ. ಮಂಜುಳ ಇವರು ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿ, ಬೆಂಗಳೂರು ಇಲ್ಲಿ ದಾಖಲಿಸಿರುವ ಅರ್ಜಿ ಸಂಖ್ಯೆ:606/2019 c/w 8022/2018 ರ ಕುರಿತಂತೆ ಮಾನ್ಯ ನ್ಯಾಯಾಲಯದ ಆದೇಶದನ್ವಯ ಕ್ರಮವಹಿಸುವಂತೆ ಸೂಚಿಸಲಾಗಿದೆ.

ಚಿ. ಕಡದಕಟ್ಟೆ ಗ್ರಾಮ ಪಂಚಾಯ್ತಿಯಲ್ಲಿ ಕರವಸೂಲಿಗಾರರ ಹುದ್ದೆಯ ನೇಮಕಾತಿಗೆ ಸಂಬ0ಧಿಸಿದ0ತೆ ಕರ್ತವ್ಯಲೋಪ ಸಾಬೀತಾಗಿರುವ ಹಿನ್ನಲೆಯಲ್ಲಿ ಮಾನ್ಯ ಉಪಲೋಕಾಯುಕ್ತರ ಶಿಫಾರಸ್ಸಿನಂತೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 8(iii) ರಡಿಯಲ್ಲಿ ನಿರ್ದಿಷ್ಟಪಡಿಸಿದಂತೆ ಎರಡು ವಾರ್ಷಿಕ ವೇತನ ಬಡ್ತಿಗಳನ್ನು ಸಂಚಿತ ಪರಿಣಾಮ ರಹಿತವಾಗಿ ಮೂರು ವರ್ಷಗಳ ಕಾಲ ತಡೆಹಿಡಿಯುವ ದಂಡನೆಯನ್ನು ವಿಧಿಸಿ ಆದೇಶಿಸಲಾಗಿತ್ತು.

ತದನಂತರ ಚಿ. ಕಡದಕಟ್ಟೆ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಎಸ್.ಬಿ. ಮಂಜುಳ ಇವರು ಸರ್ಕಾರದ ದಂಡನಾದೇಶ ಸಂಖ್ಯೆ:ಗ್ರಾಅಪ707 ಗ್ರಾಪಂಕಾ 2016, ದಿನಾಂಕ:26-10-2018 ಅನ್ನು ಪ್ರಶ್ನಿಸಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿ, ಬೆಂಗಳೂರು ಇಲ್ಲಿ ಅರ್ಜಿ ಸಂಖ್ಯೆ:606/2019 ಅನ್ನು ದಾಖಲಿಸಿದ್ದು, ಈ ಪ್ರಕರಣದ ಕುರಿತಂತೆ ನ್ಯಾಯ ಮಂಡಳಿಯು ದಿನಾಂಕ:13-01-2021ರ ಆದೇಶದಲ್ಲಿ ಅರ್ಜಿದಾರರ ಆದೇಶವನ್ನು ಅಂಗೀಕರಿಸಿ, ಸರ್ಕಾರದ ದಿನಾಂಕ:26-10-2018ರ ಆದೇಶವನ್ನು ರದ್ದುಗೊಳಿಸಿರುತ್ತದೆ.

ಕರ್ನಾಟಕ ನ್ಯಾಯ ಮಂಡಳಿ ಹಾಗೂ ಕಾನೂನು ಕೋಶದ ಮುಖ್ಯಸ್ಥರ ಅಭಿಪ್ರಾಯದ ಅಂಶಗಳನ್ನು ಪರಿಶೀಲಿಸಲಾಗಿದೆ. ಸದರಿ ಪ್ರಕರಣದಲ್ಲಿ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಅರ್ಜಿ ಸಂಖ್ಯೆ:606/2019 c/w 8022/2018 ರಲ್ಲಿ ದಿನಾಂಕ: 13-01-2021 ರಂದು ನೀಡಿರುವ ಆದೇಶದ ಕುರಿತಂತೆ ಕಾನೂನು ಕೋಶದ ಮುಖ್ಯಸ್ಥರ ಅಭಿಪ್ರಾಯವನ್ನು ಕಾನೂನು ಇಲಾಖೆಯು ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಚಿ. ಕಡದಕಟ್ಟೆ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಎಸ್.ಬಿ ಮಂಜುಳ ಇವರ ಮೇಲಿನ ಆಪಾದನೆಗೆ ಸಂಬ0ಧಿಸಿದ0ತೆ ವಿಧಿಸಲಾಗಿದ್ದ ದಂಡನಾದೇಶವನ್ನು ಹಿಂಪಡೆಯಲು ನಿರ್ಣಯಿಸಲಾಗಿದೆ ಎಂದು ಎಂ.ಎ0.ರಾಜು ಸರ್ಕಾರದ ಅಧೀನ ಕಾರ್ಯದರ್ಶಿ(ಜಿ.ಪಂ), ಗ್ರಾಮೀಣಾಭಿವೃದ್ದಿ ಮತ್ತು ಪಂ.ರಾಜ್ ಇಲಾಖೆ ಇವರು ಆದೇಶಿಸಿದ್ದಾರೆ.

garudavoice21@gmail.com 9740365719

Leave a Reply

Your email address will not be published. Required fields are marked *

error: Content is protected !!