ಜಿ.ಎಸ್. ಶ್ಯಾಮ್ ಪುತ್ರ ರಾಜ್ ಶ್ಯಾಮ್ ಅದ್ದೂರಿ ಜನ್ಮದಿನಾಚರಣೆ

ಜಿ.ಎಸ್. ಶ್ಯಾಮ್ ಪುತ್ರ ರಾಜ್ ಶ್ಯಾಮ್ ಅದ್ದೂರಿ ಜನ್ಮದಿನಾಚರಣೆ
ದಾವಣಗೆರೆ: ಗೋ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರಾದ ಬಿ.ಟಿ. ಸಿದ್ದಪ್ಪ ಹಾಗೂ ಮಹಾಲಕ್ಷ್ಮಿ ಅವರ ಮೊಮ್ಮಗ ಹಾಗೂ ಬಿಜೆಪಿ ಯುವ ಮುಖಂಡ ಜಿ.ಎಸ್. ಶ್ಯಾಮ್ ಪುತ್ರ , ರಾಜ್ ಶ್ಯಾಮ್ ಪ್ರಥಮ ವರ್ಷದ ಹುಟ್ಟು ಹಬ್ಬವನ್ನು ಸಡಗರ-ಸಂಭ್ರಮದೊಂದಿಗೆ ಆಚರಿಸಲಾಯಿತು. ನಗರದ ಅಭಿನವ ರೇಣುಕಾ ಮಂದಿರದಲ್ಲಿ ಹಮ್ಮಿಕೊಂಡಿದ್ದ ಅದ್ಧೂರಿ ಜನ್ಮದಿನಾಚರಣೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರು ಪುಟಾಣಿ ರಾಜ್ ಶ್ಯಾಮ್ ಗೆ ಕೇಕ್ ಸಿಹಿ ಸವಿ ನೀಡಿ ಶುಭ ಹಾರೈಸಿದರು.
ಈ ವೇಳೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರುಗಳಾದ ಅಣಬೇರು ಜೀವನಮೂರ್ತಿ, ಯಶವಂತ್ ರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ದೇವರಮನೆ ಶಿವಕುಮಾರ್, ಶೈಲಜಾ ಬಸವರಾಜ್, ಅಗಸನಕಟ್ಟೆ ಶಿವಮೂರ್ತಿಪ್ಪ, ಆಲೂರು ಚೆನ್ನಬಸಪ್ಪ, ಪವಾಡ ರಂಗನಹಳ್ಳಿ ಶಿವಕುಮಾರ್, ಗುಮ್ಮನೂರು ಶ್ರೀನಿವಾಸ್, ಎಸ್.ಟಿ. ವೀರೇಶ್, ಎನ್.ಜಿ. ಪುಟ್ಟಸ್ವಾಮಿ, ಬಾಡಾದ ಆನಂದ್ ರಾಜ್, ಜೆ.ಎನ್. ಶ್ರೀನಿವಾಸ್, ಆರ್.ಎಲ್. ಶಿವಪ್ರಕಾಶ್ ಸೇರಿದಂತೆ ಅನೇಕ ಗಣ್ಯರು ಈ ಜನ್ಮದಿನದ ಸಂಭ್ರಮದಲ್ಲಿ ಭಾಗವಹಿಸಿ ಪುಟಾಣಿ ರಾಜ್ ಶ್ಯಾಮ್ ಗೆ ಶುಭ ಹಾರೈಸಿದರು. ಪುಟಾಣಿ ರಾಜ್ ಶ್ಯಾಮ್ ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತು. ಇದಕ್ಕೆ ಅಪಾರ ಸಂಖ್ಯೆಯಲ್ಲಿ ಜನಸಾಗರ ಸೇರಿದ್ದೇ ಸಾಕ್ಷಿಯಾಯಿತು.
ಸಸಿ ನೀಡಿ ಪರಿಸರ ಪ್ರೇಮ : ತಮ್ಮ ಮಗ ರಾಜ್ ಶ್ಯಾಮ್ ಜನ್ಮದಿನದ ಪ್ರಯುಕ್ತ ಜಿ. ಎಸ್. ಶ್ಯಾಮ್ ಅವರು ಸಾರ್ವಜನಿಕರಿಗೆ ಸಸಿಗಳ ವಿತರಿಸಿ ಪರಿಸರ ಪ್ರೇಮ ಮೆರೆದರು. ಅಲ್ಲದೆ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಿದರು.
GS Shyam, Putra, Raj Shyam, Adhuri, Birth, Day celebration,

Leave a Reply

Your email address will not be published. Required fields are marked *

error: Content is protected !!