ಕರ್ತವ್ಯ ಮರೆಯದ, ಸಿಬ್ಬಂದಿ ಕೈ ಬಿಡದ ಎಸ್ಪಿ ರಿಷ್ಯಂತ್.! ಸಿಎಂ ಸೆಕ್ಯುರಿಟಿಯಲ್ಲಿದ್ದ ಇನ್ಸ್‌ಪೆಕ್ಟರ್ ಲಘು ಹೃದಯಾಘಾತ.!

ದಾವಣಗೆರೆ: ಆರಕ್ಷಕರು ಅಂದ್ರೆ ಸಾಕು. ಬರೀ ಬಂದೋಬಸ್ತ್, ಠಾಣೆ ಕೆಲಸ, ಕ್ರೈಂ ಸೇರಿದಂತೆ ಇನ್ನಿತರ ಕೆಲಸವೇ ಜಾಸ್ತಿ. ಅದರಲ್ಲೂ ನಾಡಿನ ದೊರೆ ಊರಿಗೆ ಬರ್ತಾರೆ ಅಂದ್ರೆ ಆರಕ್ಷಕರು ಬೆಳ್ಳಂ ಬೆಳಗ್ಗೆ ಊಟ ತಿಂಡಿ ಬಿಟ್ಟು, ಬಿಸಿಲಿನಲ್ಲಿ ಒಣಗಬೇಕು. ಎಷ್ಟೋ ಪೊಲೀಸರು ಒತ್ತಡದ ಬದುಕಿಗೆ ಸಿಲುಕಿದ್ದಾರೆ.

ಹೀಗಿರುವಾಗ ಸಿಎಂ ಬಸವರಾಜ್ ಬೊಮ್ಮಾಯಿ
ಜೂನ್ 16 ರಂದು ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪನವರ ಮೊಮ್ಮಗಳ ಮದುವೆಗೆ ಜೆಎಂಐಟಿ ಹೆಲಿಪ್ಯಾಡ್ ಗೆ ಸಿಎಂ ಬಂದಿರುತ್ತಾರೆ. ಅವರು ಬರುವ ಹಿನ್ನೆಲೆಯಲ್ಲಿ ದಾವಣಗೆರೆಯ ರಸ್ತೆ ಇಕ್ಕೆಲಗಳಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿರುತ್ತದೆ. ಅದಕ್ಕಾಗಿ ದಾವಣಗೆರೆಯ ಸಿಇಎನ್ CEN POLICE INSPECTOR ಪೊಲೀಸ್ ಠಾಣೆಯ ಪಿಐ ಮಂಜುನಾಥ್ ರನ್ನು ಬಂದೋ ಬಸ್ತ್ ಗೆ ನಿಯೋಜನೆ ಮಾಡಲಾಗಿರುತ್ತದೆ. ಸಿಎಂ ಬಸವರಾಜ್ ಬೊಮ್ಮಾಯಿ ಜಿಎಂಐಟಿ ಹೆಲಿಪ್ಯಾಡ್ ಗೆ ಬಂದು ಇಳಿದು ಇನ್ನೇನೂ ವಿವಾಹಕ್ಕೆ ಹೊರಡಲು ಸಿದ್ದರಿರುವ
ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಸೆಕ್ಯುರಿಟಿ ಎಸ್ಕಾರ್ಟ್ ಕರ್ತವ್ಯದಲ್ಲಿ ಇದ್ದ ಪೊಲೀಸ್ ಇನ್ಸ್ ಪೆಕ್ಟರ್ ಬಿ. ಮಂಜುನಾಥ್ ಕರ್ತವ್ಯದಲ್ಲಿ ನಿರತರಾಗಿದ್ದ ಸಮಯದಲ್ಲಿ ದಿಢೀರ್ ಎದೆನೋವು ಕಾಣಿಸಿಕೊಂಡು ಕುಸಿದು ಬೀಳುತ್ತಾರೆ.

ಸ್ಥಳದಲ್ಲಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅರವಿಂದ್, ಸಿಬ್ಬಂದಿಯವರಾದ ಲಿಂಗರಾಜ್ ಬಿ.ಕೆ, ಕುಮಾರ್ ನಾಯ್ಕ್, ಲೋಹಿತ್, ಗೋವಿಂದರಾಜ್ ಹಾಗೂ ಇತರ ಸಿಬ್ಬಂದಿಯವರು ಕೂಡಲೇ ಎಸ್ ಪಿ ಸಿ.ಬಿ ರಿಷ್ಯಂತ್ ಅವರ ಗಮನಕ್ಕೆ ತರುತ್ತಾರೆ. ಕೂಡಲೇ ಸನ್ನದ್ದರಾದ ಎಸ್ ಪಿ ರಿಷ್ಯಂತ್ ಲಕ್ಷಣವೇ ಪಿಐ ಮಂಜುನಾಥ್ ಅವರನ್ನ ದಾವಣಗೆರೆಯ ಎಸ್.ಎಸ್ ಹೈಟೆಕ್ ಆಸ್ಪತ್ರೆಯ ನಾರಾಯಣ ಹೃದಯಾಲಯಕ್ಕೆ ದಾಖಲಿಸಿ ತಮ್ಮ ಸಿಬ್ಬಂದಿಯ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ ಚೇತರಿಸಿಕೊಂಡಿದ್ದು, ಆರೋಗ್ಯ ವಾಗಿದ್ದಾರೆ.

ಆಸ್ಪತ್ರೆಗೆ ಡಿಸಿ ಮಹಾಂತೇಶ್ ಬೀಳಗಿ, ಎಸ್ ಪಿ ಸಿ.ಬಿ. ರಿಷ್ಯಂತ್, ಹೆಚ್ಚುವರಿ ಎಸ್.ಪಿ ರಾಮಗೊಂಡ ಬಸರಗಿ, ಡಿವೈಎಸ್ ಪಿ ರವರಾದ ಬಿ.ಎಸ್ ಬಸವರಾಜ್ ಹಾಗೂ ಇತರೆ ಪೊಲೀಸ್ ಅಧಿಕಾರಿ‌ ಮತ್ತು ಸಿಬ್ಬಂದಿಯವರು ಭೇಟಿ ನೀಡಿ ಮಂಜುನಾಥ್ ಅವರ ಆರೋಗ್ಯ ವಿಚಾರಿಸಿಕೊಂಡು ಬಂದಿದ್ದಾರೆ.

ಕರ್ತವ್ಯ ಮರೆಯದ, ಸಿಬ್ಬಂದಿ ಕೈ ಬಿಡದ ಎಸ್ಪಿ ರಿಷ್ಯಂತ್ ಗೆ ಇಲಾಖೆಯ ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ಪ್ರಶಂಸೆ :
ಒಂದು ಕಡೆ ರಾಜ್ಯದ ಮುಖ್ಯಮಂತ್ರಿ‌ ಇದ್ದಾರೆ. ಇನ್ನೋಂದೆಡೆ ತನ್ನ ಸಿಬ್ಬಂದಿಗೆ ಹೃದಯಘಾತವಾಗಿದೆ. ಹೀಗಿರುವಾಗ ಎಸ್ ಪಿ ರಿಷ್ಯಂತ್ ಮಂಜುನಾಥ್ ಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಟ್ಟರು. ಅಲ್ಲದೇ ಅವರ ಜಾಗಕ್ಕೆ ಇನ್ನೊಬ್ಬ ಸಿಬ್ಬಂದಿ ನೇಮಿಸಿ ಸಿಎಂ ಹೋಗುವ ತನಕ ಬಂದೋ ಬಸ್ತ್ ವ್ಯವಸ್ಥೆ ಮಾಡಿದರು. ಒಟ್ಟಾರೆ ಎಸ್ ಪಿ ರಿಷ್ಯಂತ್ ಕಾರ್ಯಕ್ಕೆ ದಾವಣಗೆರೆ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!