ಜನವರಿ 15 ರಂದು ಯೋಗಥಾನ್ 2022 ರ ಗಿನ್ನಿಸ್ ವಿಶ್ವ ದಾಖಲೆ ಕಾರ್ಯಕ್ರಮ – ಡಿಸಿ ಶಿವಾನಂದ ಕಾಪಾಶಿ

ದಾವಣಗೆರೆ: ಜನವರಿ 15 ರಂದು  ದಾವಣಗೆರೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬೃಹತ್ ಯೋಗಥಾನ್ ಗಿನ್ನಿಸ್ ವಿಶ್ವದಾಖಲೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜನವರಿ 15 ರಂದು ಬೆಳಿಗ್ಗೆ 6 ರಿಂದ 8-30ರವರೆಗೆ  ಜರುಗುವ ಕಾರ್ಯಕ್ರಮದಲ್ಲಿ ಅಂದಾಜು ಎಂಟರಿಂದ ಹತ್ತು ಸಾವಿರ ಯೋಗಾಪಟುಗಳು ಪ್ರದರ್ಶನ ನೀಡುವ ನಿರೀಕ್ಷೆ ಇದೆ  ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಯೋಗಥಾನ್ ಕಾರ್ಯಕ್ರಮದ ಆಯೋಜನೆ ಕುರಿತಂತೆ ಮಾಹಿತಿ ನೀಡಿದ ಅವರು,  ರಾಜ್ಯದಾದ್ಯಂತ ಏಕಕಾಲಕ್ಕೆ ಯೋಗ ಪ್ರದರ್ಶನ ಕಾರ್ಯಕ್ರಮ ನಡೆಯಲಿದ್ದು,  ಜಿಲ್ಲಾ ಮಟ್ಟದಲ್ಲಿ ಯೋಗಥಾನ್ ಕಾರ್ಯಕ್ರಮ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯೋಗ ಒಕ್ಕೂಟ, ಆಯುಷ್ ಇಲಾಖೆ, ಆಯುಷ್ ಟಿ.ವಿ ಸಹಯೋಗದೊಂದಿಗೆ  ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜನಪ್ರತಿನಧಿಗಳು ಭಾಗವಹಿಸಲಿದ್ದಾರೆ. ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಏಕಕಾಲದಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರು ಸೇರಿ ಯೋಗಾಭ್ಯಾಸಮಾಡುವ ಮೂಲಕ ಗಿನ್ನೀಸ್ ವಿಶ್ವದಾಖಲೆ ಪ್ರಯತ್ನ ಮಾಡಲಾಗುತ್ತದೆ ಎಂದರು.

ದಾವಣಗೆರೆ ಜಿಲ್ಲೆಗೆ  ಆರು ಸಾವಿರ ಯೋಗಾಪಟುಗಳನ್ನು ನಿಗದಿಮಾಡಲಾಗಿದೆ. ಆದರೆ ಆದರೆ ಎಂಟರಿAದ ಹತ್ತು ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಯೋಗಥಾನ್  ಕಾರ್ಯಕ್ರಮಕ್ಕೆ ಕ್ರೀಡಾಂಗಣದಲ್ಲಿ ಒಂದೇ ಪ್ರವೇಶದ್ವಾರ ಹಾಗೂ ಒಂದೇ ನಿರ್ಗಮನದ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣದಲ್ಲಿ ಸಂಪೂರ್ಣವಾಗಿ ಗ್ರೀನ್ ಮ್ಯಾಟ್ ಅಳವಡಿಸಲಾಗುವುದು. ಬ್ಯಾರಕೇಡ್, ಸಿ.ಸಿ.ಟಿ.ವಿ, ರೆಕಾರ್ಡಿಂಗ್, ಧ್ವನಿವರ್ಧಕ ವ್ಯವಸ್ಥೆ ಹಾಗೂ ಸೂಕ್ತ ಪೊಲೀಸ್ ಬಂದೋಬಸ್ತ್   ವ್ಯವಸ್ಥೆ ಮಾಡಲಾಗಿದೆ  ಎಂದು ಮಾಹಿತಿ ನೀಡಿದರು.

ನಿರ್ಭಂದ:  ಯೋಗಾಥಾನ್  ಕಾರ್ಯಕ್ರಮದ ಪೂರ್ವ ಸಿದ್ಧತೆ ಹಿನ್ನಲೆಯಲ್ಲಿ ಜನವರಿ 13 ರಿಂದ ಜ.15ರವರೆಗೆ ಸಾರ್ವಜನಿಕರು ಮತ್ತು ಕ್ರೀಡಾಪುಟಗಳಿಗೆ ಕ್ರೀಡಾಂಗಣ ಪ್ರವೇಶವನ್ನು ನಿಷೇಧಿಸಲಾಗಿದ್ದು, ಎಲ್ಲರೂ ಸಹಕರಿಸಲು ಈ ಸಂದರ್ಭದಲ್ಲಿ ಕೋರಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಹೆಚ್ಚಾಗಿದ್ದು, ಪ್ರತಿ50 ವಿದ್ಯಾರ್ಥಿಗಳೀಗೆ ಓರ್ವ ಮಲ್ವಿಚಾರಕರು, ಪ್ರತಿ ಸಾವಿರ ವಿದ್ಯಾರ್ಥಿಗಳಿಗೆ ಓರ್ವ ತರಬೇತುದಾರರು, 6 ಚಿಕ್ಕ ವೇದಿಕೆಗಳ ವ್ಯವಸ್ಥೆ,  ಪ್ರಥಮ ಚಿಕಿತ್ಸಾ ವ್ಯವಸ್ಥೆ, ಲಘು ಉಪಹಾರ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸುಚೇತಾ ಎಂ. ನೆಲವಿಗಿ, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್, ಆಯುಷ ಇಲಾಖೆಯ ಶಂಕರೇಗೌಡ, ರವೀಂದ್ರ  ಉಪಸ್ಥಿತರಿದ್ದರು.

ಚಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಕ್ಕಳು, ವಯಸ್ಕರು, ವಯೋವೃದ್ದರು, ಆರೋಗ್ಯದ ಸಮಸ್ಯೆ ಇರುವವರು ಮುಂಜಾಗ್ರತಾ ಕ್ರಮವಾಗಿ ಸ್ವೇಟರ್ ಟೋಪಿಯನ್ನು ಧರಿಸುವುದು ಉತ್ತಮ ಹಾಗೆ ವೈಧ್ಯಕೀಯ ಸಿಬ್ವಂದಿ ಒಂದು ಆಂಬ್ಯೂಲೆನ್ಸ್  ಸ್ಥಳದಲ್ಲಿ ನಿಯೋಜನೆ ಮಾಡಲಾಗುತ್ತೆ ಎಂದು ಮಾಧ್ಯಮದವರ ಪ್ರಶ್ನೆಗೆ ಡಿಸಿ ಉತ್ತರಿಸಿದರು.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!