ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಬಿಡದೇ ಸುರಿಯುತ್ತಿರುವ ಮಳೆಗೆ ಹುಬ್ಬಳ್ಳಿಯ ಐತಿಹಾಸಿಕ ಕೆರೆಯಾಗಿರುವ ಉಣಕಲ್ ಕೆರೆ ತುಂಬಿ ಹರಿಯುತ್ತಿದ್ದು, ಜನರು ತಂಡೋಪ ತಂಡವಾಗಿ ಬರುತ್ತಿದ್ದಾರೆ. ರಮಣೀಯ ದೃಶ್ಯಗಳಿಗೆ ಸಾಕ್ಷಿಯಾಗಿದೆ ಹುಬ್ಬಳ್ಳಿಯ ಐತಿಹಾಸಿಕ ತಾಣ.
ಹೌದು.. ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಉಣಕಲ್ ಕೆರೆ ತುಂಬಿ ಕೋಡಿ ಹರಿದಿದೆ.ಕೋಡಿ ಹರಿಯುವ ಕಟ್ಟೆ ಮೇಲೆ ನಿಂತಿ ಸ್ಥಳೀಯರು ಸಂಭ್ರಮಿಸುತ್ತಿದ್ದಾರೆ.
ಇನ್ನೂ ಸುತ್ತಲಿನ ನಿವಾಸಿಗಳು ತಂಡೋಪತಂಡವಾಗಿ ಬಂದು ವೀಕ್ಷಿಸುತ್ತಿದ್ದಾರೆ. ಗಾಮನಗಟ್ಟಿ, ನವನಗರ ಭಾಗದಲ್ಲಿ ಮಳೆಯಾದರೆ ಕೆರೆ ತುಂಬಿ ಹರಿಯುತ್ತದೆ. ಕೋಡಿ ಬಿದ್ದ ನೀರು ರಾಜಕಾಲುಮೆ ಮುಖಾಂತರ ಹರಿಯುವುದರಿಂದ, ಕಾಲುವೆ ಅಂಚಿನ ಪ್ರದೇಶಗಳಾದ ಪಾಂಡುರಂಗ ಕಾಲೊನಿ, ನಾರಯಣಸೋಫಾ, ಚನ್ನಪೇಟ ನಿವಾಸಿಗಳಲ್ಲಿ ಆತಂಕ ಆರಂಭವಾಗಿದೆ.
