ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಹೊರಟ ಗೃಹಸಚಿವ ಆರಗ ಜ್ಞಾನೇಂದ್ರ

ಕೇರಳ: ರಾಜ್ಯ ಗೃಹಸಚಿವ ಆರಗ ಜ್ಞಾನೇಂದ್ರರವರು ಇವತ್ತು ಶಬರಿಮಲೆ ದರ್ಶನಕ್ಕೆ  ತೆರಳಿದ್ದಾರೆ. ಇವತ್ತು ಅಯ್ಯಪ್ಪ ಸ್ವಾಮಿಯ ಮಾಲೆ ಧರಿಸಿ ವೃತ ಆರಂಭಿಸಿ ಶಬರಿಮಲೆಗೆ ಹೊರಟಿದ್ಧಾರೆ.

ಈ ಹಿಂದೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಬೇಕು ಎಂದು ಆರಗಜ್ಞಾನೇಂದ್ರರವರು ಎಂದುಕೊಂಡಿದ್ದರಂತೆ .  ಆದರೆ ಸಮಯ ಕೂಡಿ ಬಂದಿರಲಿಲ್ಲ. ಇದೀಗ ಕಾರ್ಯಕರ್ತರ ಜೊತೆಗೆ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಇರುಮುಡಿ ಹೊತ್ತುಕೊಂಡು ಆರಗ ಜ್ಞಾನೇಂದ್ರರವರು ಹೊರಟಿದ್ಧಾರೆ.

ಬರಿಗಾಲಲ್ಲಿ ಶಬರಿಮಲೆ ಯಾತ್ರೆ ಹೊರಟಿರುವ ಆರಗ ಜ್ಞಾನೇಂದ್ರವರ ವಿಡಿಯೋವನ್ನು ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಿದ್ದಾರೆ. 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!