ಜನರ ಸೇವಕನಾಗಿ ಬಮದಿರುವೆ, ಅಭಿವೃದ್ಧಿಯೇ ನನ್ನ ಗುರಿ: ಶಾಸಕ ಬಸವರಾಜು ವಿ ಶಿವಗಂಗಾ
ಚನ್ನಗಿರಿ : ಈ ತಾಲ್ಲೂಕಿನ ಸಮಗ್ರ ಅಭಿವೃದ್ಧಿಯೇ ನನ್ನ ಗುರಿಯಾಗಿದೆ. ನಾನು ನಿಮ್ಮ ಸೇವಕನಾಗಿ ಬಂದಿದ್ದೇನೆ ಎಂದು ಶಾಸಕ ಬಸವರಾಜು ವಿ ಶಿವಗಂಗಾ ತಿಳಿಸಿದರು.
ಇಟ್ಟಿಗೆ ಗ್ರಾಮದಲ್ಲಿ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಈ ವಿಷಯ ತಿಳಿಸಿದರು. ತಾಲ್ಲೂಕಿನ ಜನರ ನಂಬಿಕೆ ವಿಶ್ವಾಸ ಉಳಿಸಿಕೊಂಡು ಉತ್ತಮ ಕೆಲಸ ಮಾಡುತ್ತಿದ್ದೇನೆ. ಯಾವುದೇ ಸಮಯದಲ್ಲಾದರೂ ಸರಿ ನಿಮ್ಮ ಸಮಸ್ಯೆಗಳಿಗೆ ನಾನು ಸ್ಪಂದಿಸಲು ಸಿದ್ಧನಿದ್ದೇನೆ ಎಂದರು. ಶಾಸಕನಾದ ಮೇಲೆ ಈ ಭಾಗದ ರೈತರು ಜನರ ಪರವಾಗಿ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತಿ ನಿಮಗೆ ಒಳ್ಳೆಯ ಕೆಲಸ ಮಾಡಲು ಪ್ರಯತ್ನಿಸಿರುವೆ. ನಮ್ಮದೇ ಸರ್ಕಾರವಿರುವ ಕಾರಣ ಅಭಿವೃದ್ಧಿಗೆ ಹಿನ್ನೆಡೆಯೂ ಆಗಲ್ಲ ಕುಂಠಿತವೂ ಆಗಲ್ಲ. ನನ್ನ ಅಧಿಕಾರಾವಧಿಯಲ್ಲಿ ಮಾದರಿ ತಾಲ್ಲೂಕ್ ನ್ನಾಗಿ ಮಾಡುವೆ. ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಿರುವೆ.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ಕರೆದು ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಅಧಿಕಾರಿ ವರ್ಗಕ್ಕೆ ಹೇಳಿರುವೆ ಎಂದರು. ಜನತಾ ದರ್ಶನ ಕಾರ್ಯಕ್ರಮ ಕೇವಲ ಸಮಸ್ಯೆ ಹೇಳಿಕೊಳ್ಳುವುದಲ್ಲ ಅದಕ್ಕೆ ಸ್ದಳದಲ್ಲೇ ಪರಿಹರಿಸುತ್ತಾ ಬಂದಿರುವೆ, ಇನ್ನೂ ಅಧಿಕಾರಿಗಳಿಗೆ ಸ್ಪಂದಿಸಿ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿರುವೆ. ಈ ತಾಲ್ಲೂಕಿನಲ್ಲಿ ಉತ್ತಮ ಪಾರದರ್ಶಕ ಆಡಳಿತ ನೀಡುತ್ತಿದ್ದೇವೆ ಎಂದರು. ಈ ವೇಳೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.