ಸ್ಯಾಂಟ್ರೋ ರವಿ ಸೇವ್ ಮಾಡೋದಾಗಿದ್ರೆ ಅರೆಸ್ಟ್ ಯಾಕೆ ಮಾಡ್ತಾ ಇದ್ರು.!? ಬಿ ವೈ ವಿಜಯೇಂದ್ರ
ದಾವಣಗೆರೆ: ಖತರನಾಕ್ ದಂಧೆಕೋರ ಸ್ಯಾಂಟ್ರೋ ರವಿ ಸೇವ್ ಮಾಡೋದಿದ್ದರೇ ಪೊಲೀಸರು ಯಾಕೆ ಅರೆಸ್ಟ್ ಮಾಡ್ತಾ ಇದ್ರೂ ಎಂದು ಬಿಜೆಪಿ ಯುವಮುಖಂಡ ವಿಜೇಯೇಂದ್ರ ಪ್ರಶ್ನಿಸಿದ್ದಾರೆ. ಹರಿಹರದಲ್ಲಿ ನಡೆಯುತ್ತಿರುವ ಹರ ಜಾತ್ರೆಗೆ ಹೋಗಲು ದಾವಣಗೆರೆ ಬಂದಿದ್ದ ವೇಳೆ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸ್ಯಾಂಟ್ರೋ ರವಿಯನ್ನು ಬಂಧನದಿಂದ ಮುಕ್ತಗೊಳಿಸಲು, ಸಾಕ್ಷಿಗಳನ್ನು ನಾಶಪಡಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ಗುಜರಾತ್‌ಗೆ ಹೋಗಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಈ ರೀತಿ ಉತ್ತರಿಸಿದರು. ಆರೋಪಿ ಸ್ಯಾಂಟ್ರೋ ರವಿಯನ್ನು ಈಗಾಗಲೇ ಬಂಧಿಸಲಾಗಿದೆ. ಅವರನ್ನು ಬಿಡಿಸುವುದಾಗಿದ್ದರೇ, ಯಾಕೆ ಬಂಧಿಸುತ್ತಿದ್ದರು ಎಂದ ಅವರು ಗುಜರಾತ್‌ಗೆ ಯಾಕೆ ಹೋಗಿದ್ದಾರೆ ಎಂಬುದನ್ನು ಗೃಹ ಸಚಿವರ ಬಳಿಯೇ ಉತ್ತರ ತೆಗೆದುಕೊಳ್ಳಬೇಕು ಎಂದು ಉತ್ತರಿಸಿದರು.
ವಚನಾನಂದ ಶ್ರೀಗಳು ಹರ ಜಾತ್ರೆಗೆ ಕಳೆದ ಕೆಲ ದಿನಗಳಿಂದ ಬರಲೇಬೇಕೆಂದು ಆಹ್ವಾನ ಮಾಡಿದ ಹಿನ್ನೆಲೆಯಲ್ಲಿ ಹರ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಹಿರಿಯರಾದ ಪ್ರಹ್ಲಾದ್ ಜೋಷಿ ಕೂಡ ಭಾಗವಹಿಸುತ್ತಿದ್ದಾರೆ. ಬಹಳ ದಿನಗಳ ನಂತರ ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಆರ್ಶೀವಾದ ಪಡೆಯುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದರು
ಯಡಿಯೂರಪ್ಪರನ್ನು ಪಕ್ಷದ ವರಿಷ್ಠರು ಯಾವಾಗಲೂ ಸೈಡ್ ಲೈನ್ ಮಾಡಿಲ್ಲ. ಸೈಡ್‌ಲೈನ್ ಮಾಡೋದಿದ್ದರೇ ಕೇಂದ್ರ ಸಂಸದೀಯ ಮಂಡಳಿಗೆ ಆಯ್ಕೆಯಾಗುತ್ತಿರಲಿಲ್ಲಘಿ. ಯಡಿಯೂರಪ್ಪ ಕೂಡ ಹಲವಾರು ಬಾರಿ ಹೇಳಿದ್ದಾರೆ..ಯಾರು ಕೂಡ ನನ್ನನ್ನು ಸೈಡ್ ಲೈನ್ ಮಾಡಿಲ್ಲಘಿ.ಅಸಮಾಧಾನ ಎಂಬುವುದು ಇಲ್ಲ. ಯಡಿಯೂರಪ್ಪ ಸಕ್ರಿಯವಾಗಿ ರಾಜ್ಯ ರಾಜಕಾರಣದಲ್ಲಿ ಇದ್ದಾರೆ. ಮುಂದೇನೂ ಇರುತ್ತಾರೆ ಎಂದರು.
ಪಕ್ಷದ ಯಾವ ಕಾರ್ಯಕ್ರಮದಲ್ಲೂ ಕಾಣಿಸಿಕೊಳ್ಳುತ್ತಿಲ್ಲ ಎಂಬ ಪ್ರಶ್ನೇಗೆ ಉತ್ತರಿಸಿದ ಬಿಜೆಪಿ ಮುಖಂಡ ವಿಜೇಯೇಂದ್ರ,ಒಂದು ತಿಂಗಳ ಮುಂಚೇನೇ ಶಿರಾಗೆ ಹೋಗಿದ್ದರು. ಕೆ.ಆರ್.ಪೇಟೆಗೆ ಹೋಗಿದ್ದೇವೆ. ಅಲ್ಲಿ ಚುನಾವಣಾ ಪ್ರಚಾರ ಮಾಡಿದ್ದೇವೆ. ಎರಡು ಕ್ಷೇತ್ರಗಳನ್ನು ಕಾರ್ಯಕರ್ತರ ಬೆಂಬಲದಲ್ಲಿ ಗೆದ್ದುಕೊಂಡು ಬಂದಿದ್ದೇವೆ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ದರಾಗಿರುತ್ತೇವೆ. ಪಕ್ಷ ಯಾವ ಕ್ಷೇತ್ರಕ್ಕೆ ಹೋಗಿ ಎಂದು ಹೇಳುತ್ತದೆಯೋ ಅಲ್ಲಿ ನಾವು ಹೋಗುತ್ತೇವೆ. ತಂದೆಯವರು ಆರ್ಶೀವಾದ ಮಾಡಿದ್ದಾರೆ ಶಿಕಾರಿಪುರದಲ್ಲಿ ಪ್ರವಾಸ ಮಾಡುತ್ತೇನೆ ಎಂದು ವಿಜೇಯೇಂದ್ರ ಹೇಳಿದರು.
ಸಿ.ಪಿ.ಯೋಗಿಶ್ವರ, ಯತ್ನಾಳ್ ಪಕ್ಷದಲ್ಲಿದ್ದುಕೊಂಡು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ ವಿಜೇಯೆಂದ್ರ, ಸಿ.ಪಿ.ಯೋಗಿಶ್ವರ ಆಡಿಯೋ ಸಂಬಂಧ ನನಗೇನೂ ಗೊತ್ತಿಲ್ಲ. ಪತ್ರಿಕೆಯಲ್ಲಿ ಬಂದಿದೆ..ಪತ್ರಿಕೆ ಓದಿಲ್ಲ. ನೋಡಿದ ನಂತರ ಉತ್ತರ ಕೊಡುತ್ತೇನೆ. ಇದರ ಬಗ್ಗೆ ರಾಜ್ಯ, ಕೇಂದ್ರ ನಾಯಕರು ಗಮನಿಸುತ್ತಿರುತ್ತಾರೆ.ಸೂಕ್ತ ಸಮಯದಲ್ಲಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ವಿಜೇಯೇಂದ್ರ ಹೇಳಿದರು. ಈ ಸಂದರ್ಭದಲ್ಲಿ ಮುಂದಿನ ಸಿಎಂ ವಿಜೇಯೇಂದ್ರ ಎಂದು ಬೆಂಬಲಿಗರು ಕೂಗಿದರು.
ಮಾಜಿ ಸಚಿವ ವಿಶ್ವನಾಥ್ ಪಕ್ಷ ಬಿಡುವ ಬಗ್ಗೆ ಉತ್ತರಿಸಿದ ವಿಜೇಯೇಂದ್ರ, ಯಾರೊ ಒಬ್ಬರೂ ಪಕ್ಷ ಬಿಟ್ಟ ತಕ್ಷಣ ಪಕ್ಷಕ್ಕೆ ಡ್ಯಾಮೇಜ್ ಆಗುವುದಿಲ್ಲ. ಪಕ್ಷದಲ್ಲಿ ಕಾರ್ಯಕರ್ತರ ಪಡೆ ಇದೆ. ವರಿಷ್ಠರು ಇದ್ದಾರೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.