ಭಾನುವಳ್ಳಿಯಲ್ಲಿ ಮದಕರಿ ನಾಯಕ ಕಮಾನು ತೆರವು; 144ಸೆಕ್ಷನ್ ಜಾರಿ; 30 ಜನರ ಬಂಧನ
ದಾವಣಗೆರೆ (ಹರಿಹರ) ; ಹರಿಹರ ತಾಲೂಕಿನ ಭಾನುವಳ್ಳಿಯಲ್ಲಿ ಜಿಲ್ಲಾಡಳಿತ ಸೂಚನೆಯಂತೆ 144 ಸೆಕ್ಷನ್ ಜಾರಿ ಮಾಡಿ ಮದಕರಿ ನಾಯಕನ ಮಹಾದ್ವಾರ (ಕಮಾನು)ನನ್ನು ಪೊಲೀಸರು ಸೋಮವಾರ ತೆರವುಗೊಳಿಸಿದ್ದಾರೆ.
ತೆರವು ಕಾರ್ಯಾಚರಣೆಗೆ ಅಡ್ಡಿ ಪಡಿಸಿದ ನಾಯಕ ಸಮಾಜದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಎಎಸ್ಪಿ ಮೊಕ್ಕಾಂ ಹೂಡಿದ್ದು ಬಿಗಿ ಬಂದೋ ಬಸ್ತ್ ಏರ್ಪಡಿಸಲಾಗಿದೆ. ಗ್ರಾಮದಲ್ಲಿ ಈಗ ಬೂದಿಮೆಚ್ಚಿದ ಕೆಂಡದ ವಾತಾವರಣವಿದೆ.
ಇನ್ನು ಮದಕರಿ ನಾಯಕ ದ್ವಾರ ತೆರವು ಗೊಳಿಸಿರುವುದನ್ನು ವಿರೋಧಿಸಿದ ನಾಯಕ ಸಮಾಜದ ಹಲವರು ಮಲೆಬೆನ್ನೂರು ಪೊಲೀಸ್ ಠಾಣೆ ಎದುರು ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ದ್ವಾರ ತೆರವುಗೊಳಿಸುವಂತೆ ಕುರುಬ ಸಮಾಜ ಪ್ರತಿಭಟನೆ
ಮದಕರಿ ನಾಯಕ ದ್ವಾರ ತೆರವು ಗೊಳಿಸುವಂತೆ ಕಳೆದ ಕೆಲ ದಿನಗಳಿಂದ ಕುರುಬ ಸಮಾಜ ಪ್ರತಿಭಟನೆ ಮಾಡುತ್ತಿತ್ತು. ಅಲ್ಲದೆ ಇದು ಅನಧಿಕೃತ ಕಮಾನು. ಆದ್ದರಿಂದ ಇದನ್ನು ತೆರವುಗೊಳಿಸುವಂತೆ ಕುರುಬ ಸಮಾಜದವರು ಜಿಲ್ಲಾಡಳಿತಕ್ಕೆ ಮನವಿ ಸಲ್ಲುಸಿದ್ದರು. ಇನ್ನು ಕುರುಬ ಸಮಾಜದ ಪ್ರತಿಭಟನೆಗೆ ಕಾಗಿನೆಲೆ ಕನಕ ಗುರುಪೀಠದ ನಿರಂಜನನಾಂದಪುರಿ ಸ್ವಾಮೀಜಿ ಭೇಟಿ ನೀಡಿ ಹೋರಾಟಕ್ಕೆ ಬೆಂಬಲಿಸಿದ್ದರು. ಈ ನಡುವೆ ನಾಯಕ ಸಮಾಜದ ಮುಖಂಡರು ಈ ಹಿಂದೆ ಮಾಜಿ ಎಂಎಲ್ ಶಿವಪ್ಪರವರಕಾಲದಲ್ಲಿ ಈ ಕಮಾನು ಕಟ್ಟಲಾಗಿದೆ. ಆಗ ಸ್ಥಳೀಯ ಆಡಳಿತದ ಅನುಮತಿ ತೆಗೆದುಕೊಳ್ಳಲಾಗಿತ್ತು. ಆದರೀಗ ಸರಕಾರ ಅವರದ್ದೇ ಇರುವುದರಿಂದ ಈ ರೀತಿ ಮಾಡುತ್ತಿದ್ದಾರೆ ಎಂದಿ ನಾಯಕ ಸಮಾಜದವರು ಆರೋಪಿಸುತ್ತಾರೆ. ಅದೇನೇ ಇರಲಿ ಎರಡಿ ಸಮಾಜ ಒಂದಾಗಿ ಗ್ರಾಮದಲ್ಲಿ ಶಾಂತಿ ನೆಲೆಸಬೇಕೆಂಬುದು ಪ್ರಜ್ಞಾವಂತರ ಆಶಯ.
ಸತ್ಯ ಶೋಧನಾ ಸಮಿತಿ ವರದಿಯಂತೆ ಕಮಾನು ತೆರವುಗೊಳಿಸಲಾಗಿದೆ. ಇದರಲ್ಲಿ ಯಾರ ಒತ್ತಡವೂ ಇಲ್ಲ. ಮಾಜಿ ಎಂಎಲ್ಎ ಶಿವಪ್ಪ ಆಹ ಸೌಹರ್ಧಾಯುತವಾಗಿ ಭೇಟಿ ನೀಡಿದ್ದರು, ಕಮಾನು ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅನುಮತಿ ತೆಗೆದುಕೊಂಡಿಲ್ಲ. ಲೋಕಸಭೆ ಚುನಾವಣೆ ನಂತರ ಕಮಾನು ನಿರ್ಮಾಣಕ್ಕೆ ಮನವಿ ಸಲ್ಲಿಸಿದರೆ ಅನುಮತಿ ನೀಡಿ ಮತ್ತೆ ಪುನರ್ ನಿರ್ಮಾಣ ಮಾಡಲಾಗುವುದು.
ವೆಂಕಟೇಶ್ , ದಾವಣಗೆರೆ ಜಿಲ್ಲಾಧಿಕಾರಿ
ಜಿಲ್ಲಾಡಳಿತ ಸೂಚನೆಯಂತೆ ಗ್ರಾಮದಲ್ಲಿ ಮದಕರಿ ನಾಯಕ ಕಮಾನು ತೆರವುಗೊಳಿಸಲಾಗಿದೆ. ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಗ್ರಾಮದಲ್ಲಿ ಶಾಂತಿ ವ್ಯವಸ್ಥೆ ಕಾಪಾಡಲು ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಮುಂಜಾಗೃತವಾಗಿ 30 ಜನರನ್ನು ಬಂಧಿಸಲಾಗಿದೆ.
ಉಮಾಪ್ರಶಾಂತ್, ದಾವಣಗೆರೆ ಎಸ್ಪಿ