ದಾವಣಗೆರೆ: ದಡ್ಡರಿಗೆ ಹೇಳಿದರೆ ತಿದ್ದಿಕೊಂಡಾರು. ಆದರೆ ಬುದ್ಧಿವಂತರು ಎಂದು ಬೀಗುವವರಿಗೆ ಅದರಲ್ಲೂ ಹಣ ಇದ್ದವರಿಗೆ ಏನಾದರೂ ಸಲಹೆ ನೀಡಲಾದೀತೇ?
ದಾವಣಗೆರೆಯಲ್ಲಿ ಹಣವುಳ್ಳ ಪ್ರಜ್ಞಾವಂತರು ತಮ್ಮ ವಾಹನಗಳನ್ನು ಹೇಗೆ ಪಾರ್ಕಿಂಗ್ ಮಾಡುತ್ತಾರೆ ಎಂದು ಪಿ.ಜೆ. ಬಡಾವಣೆಯಲ್ಲಿ ಒಂದು ಸುತ್ತು ಹಾಕಿ ನೋಡಬೇಕಿದೆ.
ಈ ಫೋಟೋ ನೋಡಿ ಪ್ರಜ್ಞಾವಂತರ ಪಾರ್ಕಿಂಗ್ ವೈಖರಿ ತಿಳಿದುಕೊಳ್ಳಬಹುದು. ಇಲ್ಲಿ ಅನೇಕ ಆಸ್ಪತ್ರೆಗಳಿವೆ. ನಿತ್ಯ ಸಾವಿರಾರು ಜನರು ಓಡಾಡುತ್ತಾರೆ. ಬೈಕುಗಳು, ಕಾರುಗಳು, ಆಟೋಗಳು ಸಂಚರಿಸುತ್ತವೆ.
ಆದರೆ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡುವುದರಿಂದ ಎಲ್ಲರಿಗೂ ತೊಂದರೆಯಾಗುತ್ತಿದೆ. ಸಂಚಾರಿ ಪೊಲೀಸರು ಈ ಬಗ್ಗೆ ಗಮನ ಹರಿಸಬೇಕಿದೆ.
ಈ ಪಾರ್ಕಿಂಗ್ ಗಮನಿಸಿದ ಸಾರ್ವಜನಿಕರೊಬ್ಬರು `ಉತ್ತಮವಾದ ಪಾರ್ಕಿಂಗ್ ಮಾಡಿರುವ ಈ ಕಾರ್ ಮಾಲೀಕರಿಗೆ ಅಭಿನಂದನೆಗಳು.. ದಾವಣಗೆರೆ ಪಿ ಜೆ ಬಡಾವಣೆಯ ಪ್ರಮುಖ ರಸ್ತೆಯಲ್ಲಿ ಅತೀ ವಿದ್ಯಾವಂತರು ತಮ್ಮ ವಾಹನಗಳನ್ನು ನಿಲ್ಲಿಸುವ ರೀತಿ ಇದು.. ನಾಚಿಕೆ ಯಾಗಬೇಕು ಇವರ ಜನ್ಮಕ್ಕೆ… ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ಇಂತಹ ವಾಹನಗಳ ಮೇಲೆ ಕಠಿಣ ಕ್ರಮ ವಹಿಸಬೇಕು.. ನಮ್ಮ ದಾವಣಗೆರೆ ಮುಂದಿನ ವರ್ಷಗಳಲ್ಲಿ ಸಂಚಾರ ಸಮಸ್ಯೆಗಳನ್ನು ನಿರ್ವಹಣೆ ಮಾಡಲು ಹರ ಸಾಹಸ ಪಡಬೇಕಾಗಬಹುದು.’ ಎಂದು ಸಾಮಾಜಿಕ ಜಾಲ ತಾಣದಲ್ಲಿ ಸಂದೇಶ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
