A-NEC: ದೇಶದಲ್ಲೇ ಮೊದಲ ಅಪರೂಪದ ಎ-ನೆಕ್ ರೋಗ ಲಕ್ಷಣ ದಾವಣಗೆರೆಯಲ್ಲಿ ಪತ್ತೆ! ಪೊಷಕರೇ ಮಕ್ಕಳ ಬಗ್ಗೆ ಜಾಗೃತರಾಗಿರಿ

ದಾವಣಗೆರೆ: ದೇಶದಲ್ಲೇ ಮೊದಲ ಎ-ನೆಕ್ A-NEC DISEASE ( Acute Nectrotinzing Encephalopathy of childhood Multisystemmatory Syndrome in Children ) ಅಪರೂಪದ ಪ್ರಕರಣ ಈಗ ದಾವಣಗೆರೆಯ ಎಸ್ ಎಸ್ ಆಸ್ಪತ್ರೆಯಲ್ಲೂ ಪತ್ತೆಯಾಗಿದ್ದು ಎಲ್ಲರಲ್ಲೂ ಆತಂಕ ಮೂಡಿಸಿದೆ.

ಕರೋನಾ ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಮಾರಕ ಎಂಬ ತಜ್ಞರ ವರದಿ ಬೆನ್ನಲ್ಲೇ ಎರಡನೇ ಅಲೆಯಲ್ಲಿ ಕೊವಿಡ್ ಸೊಂಕಿನ ನಂತರ ಎ-ನೆಕ್ ಎಂಬ ಅಪರೂಪದ ವೈರಸ್ ಕಂಡುಬಂದಿರುವುದು ವೈದ್ಯಲೋಕವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ.

ಮಗುವಿನ ಎಂ ಆರ್ ಐ ಸ್ಕಾನಿಂಗ್ ನಲ್ಲಿ ಪತ್ತೆಯಾದ ಎ ನೆಕ್ ರೋಗ ಲಕ್ಷಣ ಕೋವೀಡ್ ನಿಂದ ಗುಣಮುಖರಾದ ಮಕ್ಕಳಲ್ಲಿ ಎ-ನೆಕ್ ಕಂಡುಬಂದಿದ್ದು, ಇದು ದೆಹಲಿಯಲ್ಲಿ ಮೊದಲ ಬಾರಿಗೆ ಓರ್ವ ಯುವಕನಲ್ಲಿ ಕಂಡುಬಂದಿತ್ತು. ಆದರೆ ಇದೀಗ ಭಾರತದಲ್ಲೇ ಮೊದಲಿಗೆ ಕರ್ನಾಟಕದ ದಾವಣಗೆರೆಯ 13 ವರ್ಷದ ಗಂಡು‌ ಮಗುವಿನಲ್ಲಿ ಎ-ನೆಕ್ ಕಂಡುಬಂದಿರುವುದನ್ನು ಎಸ್ ಎಸ್ ವೈದ್ಯಕೀಯ ಆಸ್ಪತ್ರೆಯ ನಿರ್ದೇಶಕ ಡಾ. ಕಾಳಪ್ಪನವರ್ ಖಚಿತ ಪಡಿಸಿದ್ದಾರೆ.

ಮಗು ಜ್ವರ, ವಾಂತಿ, ತಲೆನೋವಿಂದ ಬಳಲುತ್ತಿತ್ತು, ಅಸ್ಪತ್ರೆಗೆ ದಾಖಲಾದ ನಂತರ ಪಿಡ್ಸ್ ಬಂದಿತ್ತು, ನಂತರ ಮಗುವಿನ ಮೆದುಳಿನ ಎಂ ಆರ್ ಐ ಸ್ಕ್ಯಾನ್ ಮಾಡಿಸಿದಾಗ ಎ-ನೆಕ್ ಎಂಬುದು ದೃಢಪಟ್ಟಿದೆ ಎಂದು ಅವರು ತಿಳಿಸಿದರು. ಮೊದಲ ಹಂತದಲ್ಲಿ ಮಗುವಿಗೆ ವೆಂಟಿಲೇಶನ್ ನಲ್ಲಿ ಚಿಕಿತ್ಸೆ ನೀಡಲಾಗಿದೆ, ಇದೀಗ ಮಗುವಿಗೆ ಸ್ವಲ್ಪ ಚೇತರಿಕೆಯಾಗಿದೆ ಅಂತಾರ ವೈದ್ಯರು.

ಕರೋನಾ ನಂತರ ಮಕ್ಕಳಲ್ಲಿ ಇದು ಕಂಡು ಬರುವುದರಿಂದ ವೈದ್ಯ ಮಿತ್ರರೆಲ್ಲಾ ಇದಕ್ಕೆ ಸಂಬಂಧಿಸಿದ ಔಷಧ ಉಪಯೋಗಿಸಿ ಇದರಿಂದಾಗುವ ಅನಾಹುತ ತಪ್ಪಿಸಬಹುದೆಂದು ಡಾ. ಕಾಳಪ್ಪನವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಗುವಿನ ಚಿಕಿತ್ಸೆಗೆ ದಾವಣಗೆರೆ ಜಿಲ್ಲಾಡಳಿತ ಹಾಗೂ ಎಸ್ ಎಸ್ ಆಸ್ಪತ್ರೆಯ ಚೇರ್ಮನ್ ಎಸ್ ಎಸ್ ಮಲ್ಲಿಕಾರ್ಜುನ ಸಹಕಾರದಿಂದ ವೈದ್ಯರ ತಂಡಕ್ಕೆ ಸಹಕಾರ ನೀಡಿದ್ದಾರೆ.

 ಮಗುವಿಗೆ ಯಾವ ರೀತಿ ಎ ನೆಕ್ ರೋಗದ ಲಕ್ಷಣ ಬಂತು ಎಂಬುದನ್ನ ಸರ್ಕಾರದ ಮಟ್ಟದಲ್ಲಿ ಜೆನೆಟಿಕ್ ನಿಂದ ಕಂಡುಹಿಡಿಯಬಹುದಾಗಿದೆ.

 ಡಾ.ಕಾಳಪ್ಪನವರ  – ನಿರ್ದೇಶಕರು, SSIMS

ಪೋಷಕರು ತಮ್ಮ ಸುರಕ್ಷತೆಯ ಜತೆಗೆ ಮಕ್ಕಳಿಗೂ ಮಾಸ್ಕ್, ಸ್ಯಾನಿಟೈಸರ್ ಬಳಸಲು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಜಾಗೃತಿ ಮೂಡಿಸಿ ಕರೋನಾ ದೂರವಿಡುವುದೊಂದೆ ಇದಕ್ಕಿರುವ ಸರಿಯಾದ ಮಾರ್ಗ.

Watch video 

Leave a Reply

Your email address will not be published. Required fields are marked *

error: Content is protected !!