ಬಿಸಿಲಿನ ತಾಪ ಹೆಚ್ಚಳ, ಪಕ್ಷಿಗಳ ನೀರಿನ ದಾಹ ತೀರಿಸಲು ಸರ್ಕಾರಿ ಕಟ್ಟಡಗಳ ಮೇಲೆ ಮಣ್ಣಿನ ಕುಡಿಕೆಗಳಲ್ಲಿ ನೀರು ಶೇಖರಣೆಗೆ ಆದೇಶ
ದಾವಣಗೆರೆ: ಬರ, ಬಿಸಿಲಿನ ತಾಪ ಹೆಚ್ಚಳ, ಮತ್ತೊಂದೆಡೆ ನೀರಿನ ಅಭಾವ, ಇದರಿಂದ ಜನ, ಜಾನುವಾರುಗಳ ಜೊತೆಗೆ ಪ್ರಾಣಿ, ಪಕ್ಷಿಗಳಿಗೂ ಜೀವಜಲದ ಅಭಾವ ಕಾಡುತ್ತಿದೆ. ಪಕ್ಷಿಗಳಿಗೂ ಜೀವ ಜಲ ನೀಡಲು ಎಲ್ಲಾ ಸರ್ಕಾರಿ ಕಟ್ಟಡಗಳ ಮೇಲೆ ಮಣ್ಣಿನಿಂದ ಮಾಡಿದ ಮಡಿಕೆ, ಪಾತ್ರೆಗಳಲ್ಲಿ ನೀರು ಶೇಖರಣೆ ಮಾಡಿಡಲು ಮತ್ತು ನೀರು ಕಡಿಮೆಯಾಗಂತೆ ದಿನನಿತ್ಯ ನೀರು ಹಾಕುವಂತೆ ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.