ಜಿಎಂ ವಿಶ್ವವಿದ್ಯಾಲಯದಲ್ಲಿ ಆವಿಷ್ಕಾರದ ವಾರ (ಇನೋವೇಷನ್ ವೀಕ್)

ಮುಂದೆ ವರೆಯುತ್ತಿರುವ ಜಗತ್ತಿನಲ್ಲಿ ಆವಿಷ್ಕಾರಣೆ ಮತ್ತು ಸಂಶೋಧನೆಯ ಅಗತ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಮಕ್ಕಳನ್ನು ಹುರಿದುಂಬಿಸಲು ದಿನಾಂಕ 18.03.2024 ರಂದು ಆವಿಷ್ಕಾರದ ವಾರ ಎಂದು ಘೋಷಿಸಿ ” ಇನ್ನೋವೇಶನ್ ಅಂಡ್ ಬಿಜಿನೆಸ್ ಇಂಕ್ಯುಬೇಷನ್ ಅಂಡ್ ಎಂಟರ್ಪ್ರೈನರ್ಶಿಪ್” ಎಂಬ ಶೀರ್ಷಿಕೆಯಲ್ಲಿ, 18.03.24 ರಿಂದ 24.03.24 ಒಂದು ವಾರದ ಮಟ್ಟಿಗೆ ಜಿಎಂ ವಿಶ್ವವಿದ್ಯಾಲಯವು ಕಾರ್ಯಕ್ರಮವನ್ನು ಏರ್ಪಡಿಸಿದೆ.

ಕಾರ್ಯಕ್ರಮವನ್ನು ಜಿಎಂ ಐ ಪಿ ಎಸ್ ಆರ್ ಕಾಲೇಜಿನ ಫಾರ್ಮಕಾಗ್ನೋಸಿ ವಿಭಾಗದ ಡಾ. ಅಮಿತ್ ಕುಮಾರ್ ಬಿ ನೆರವೇರಿಸಿಕೊಟ್ಟರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಎಂ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಎಸ್ ಆರ್ ಶಂಕಪಾಲ್ ಹಾಗೂ ಅತಿಥಿಗಳಾಗಿ ಆರ್ಕ್ಸ್ ಕಂಪನಿಯ ಸಿ ಇ ಓ ಸಹಸಂಸ್ಥಾಪಕರಾದ ಡಾ. ಶಿವಣ್ಣ ಡಿ ಎಮ್ ಮತ್ತು ಇನ್ನೊಮಂತ್ರ ಕಂಪನಿಯ ಸಿ ಇ ಓ ಹಾಗೂ ವ್ಯವಸ್ಥಾಪಕ ನಿಯೋಜಕರಾದ ಲೋಕೇಶ್ ವೆಂಕಟಸ್ವಾಮಿ ಉಪಸ್ಥಿತರಿದ್ದರು. ಎಲ್ಲ ಗಣ್ಯ ವ್ಯಕ್ತಿಗಳು  ಕಾರ್ಯಕ್ರಮವನ್ನು ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು.

ಜಿಎಂ ವಿಶ್ವವಿದ್ಯಾಲಯದ ಇನ್ನೋವೇಟಿವ್ ವಿಭಾಗದ ನಿರ್ದೇಶಕರಾದ ಡಾ. ಗಿರೀಶ್ ಬೋಳಕಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ ಕೋರಿದರು. ಸುಮಾರು 800 ಹೂ ಹೆಚ್ಚು ವಿದ್ಯಾರ್ಥಿಗಳು ಸಂತಸದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಜಿಎಂ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ ಎಸ್ ಆರ್ ಶಂಕಪಾಲ ಅವರು ಆವಿಷ್ಕಾರ ಮತ್ತು ಸಂಶೋಧನೆಯ ಕುರಿತಾಗಿ ಕೆಲವು ಮುಖ್ಯ ಮಾಹಿತಿಗಳನ್ನು ವಿದ್ಯಾರ್ಥಿಗಳಲ್ಲಿ ಹಂಚಿಕೊಂಡರು. ಹಾಗೂ ಇದರ ಅನುಸಾರವಾಗಿ ಡಾ. ಶಿವಣ್ಣ ಸಹ ಸಂಸ್ಥಾಪಕ ಕೆಲವು ಚಿಕ್ಕಪುಟ್ಟ ಆವಿಷ್ಕಾರ ಮತ್ತು ಸಂಶೋಧನೆಗಳನ್ನು ದೊಡ್ಡ ಮಟ್ಟಿಗೆ ಸಾಧಿಸಬಹುದು ಎಂದು ಹೇಳಿದರು. ಆವಿಷ್ಕಾರ ವಾರದ ಮೊದಲ ದಿನವಾದ ಸೋಮವಾರದಂದು ಡಾ. ನಾಗಲಿಂಗಪ್ಪ ಜಿ ಬಿ. ಐ. ಈ ಜಿ ಎಂ ವಿಶ್ವವಿದ್ಯಾಲಯ ಇವರು ಒಂದು ವಾರದಲ್ಲಿ ನಡೆಯಲಾಗುವ ವಿವಿಧ ಆವಿಷ್ಕಾರದ ಮಾಹಿತಿಗಳನ್ನು ಸಂಕ್ಷಿಪ್ತವಾಗಿ ಇಂದು ವಿವರಿಸಿದರು. ಆವಿಷ್ಕಾರ ಮತ್ತು ಸಂಶೋಧನೆಯು ಎಲ್ಲಾ ವಿಭಾಗದ ಶಿಕ್ಷಣ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದ್ದಲ್ಲಿ ಭಾರತ ಅತ್ಯುನ್ನತವಾಗಿ ಮೇಲೆರಬಹುದು ಎಂದು ಹೇಳಿದರು.ಕೊನೆಯದಾಗಿ ಕಾರ್ಯಕ್ರಮದ ವಂದನಾರ್ಪಣೆಯನ್ನು ಫಾರ್ಮಾ ಕಲಜಿ ವಿಭಾಗದ ಡಾ. ಮೊಹಮ್ಮದ್ ಯಾಸಿನ್ ಅವರು ನೆರವೇರಿಸಿ ಕೊಟ್ಟರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!