ಮಾ.15ಕ್ಕೆ ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷಾಚರಣೆ
ದಾವಣಗೆರೆ: ಪ್ರಸಾರಭಾರತಿ ಮತ್ತು ಚಿತ್ರದುರ್ಗದ ಆಕಾಶವಾಣಿ ಇವರ ಸಂಯುಕ್ತಾಶ್ರಯದಲ್ಲಿ ರೇಡಿಯೋ ಕಿಸಾನ್ ದಿವಸ್-2023 ರ ಅಂಗವಾಗಿ ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷಾಚರಣೆ (ಸಿರಿಧಾನ್ಯ ಕೃಷಿ, ಮೌಲ್ಯವರ್ಧನೆ, ಮಾರುಕಟ್ಟೆ) ಕಾರ್ಯಕ್ರಮವನ್ನು ಮಾ.15 ರಂದು ಬೆಳಿಗ್ಗೆ 11 ಗಂಟೆಗೆ ಇಲ್ಲಿನ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಐ.ಸಿ.ಎ.ಆರ್. ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ, ಹಿರಿಯ ವಿಜ್ಞಾನಿ ಡಾ.ಟಿ.ಎನ್, ದೇವರಾಜ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಆಕಾಶವಾಣಿ ಚಿತ್ರದುರ್ಗದ ಮುಖ್ಯಸ್ಥೆ ಎಮ್. ರೇಣುಕಾಪ್ರಕಾಶ್ ಅಧ್ಯಕ್ಷತೆ ವಹಿಸುವರು. ಜಿ. ಸಿದ್ದಣ್ಣ ಕಾರ್ಯಕ್ರಮ ನಿರ್ವಹಿಸುವರು. ಮುಖ್ಯಅತಿಥಿಗಳಾಗಿ ಜಂಟಿ ಕೃಷಿ ನಿರ್ದೇಶಕ ಡಾ. ಶ್ರೀನಿವಾಸ್ ಚಿಂತಾಲ್, ಡಾ. ಪಿ. ರಮೇಶ್, ಡಾ. ಬಿ.ಆರ್. ಗಂಗಾಧರ್ ವರ್ಮ, ಡಾ. ಜಿ.ಓ. ಮಲ್ಲಕಾರ್ಜುನ್, ಡಾ. ಎ.ಎಮ್. ಮಾರುತೇಶ್ ಪಾಲ್ಗೊಳ್ಳುವರು.