ಮಾಧ್ಯಮ ಮಿತ್ರರಿಗೆ ಆಹ್ವಾನ

ಕರ್ನಾಟಕ ರಾಜ್ಯ ಪೊಲೀಸ್ 50 ವರ್ಷದ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ “ಡ್ರಗ್ಸ್ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ” ಮೂಡಿಸುವ ಆಶಯದೊಂದಿಗೆ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ದಾವಣಗೆರೆ ನಗರದಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ 10k & 5K ಮ್ಯಾರಥಾನ್ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿರುತ್ತದೆ.

ದಿನಾಂಕ: 10-03-2024 ರಂದು ಬೆಳಗ್ಗೆ 6-00 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ 10k & 5K ಮ್ಯಾರಥಾನ್ ಓಟದ ಸ್ಪರ್ಧೆಗೆ ಡಾ.ಕೆ ತ್ಯಾಗರಾಜನ್, ಮಾನ್ಯ ಐಜಿಪಿ ಪೂರ್ವ ವಲಯ, ದಾವಣಗೆರೆ ರವರು ಚಾಲನೆ ನೀಡಲಿದ್ದಾರೆ. ಸದರಿ ಮ್ಯಾರಥಾನ್ ಓಟ ಸ್ಪರ್ಧೆಗೆ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಸೇರಿದಂತೆ ಎಲ್ಲಾ ನಾಗರೀಕರು ಭಾಗವಹಿಸಲು ಅವಕಾಶವಿರುತ್ತದೆ.

ಸದರಿ 10k & 5K ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆಯ ಮಾಧ್ಯಮ ಮಿತ್ರರು 10k & 5K ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಹಾಗೂ ಸದರಿ ಕಾರ್ಯಾಕ್ರಮಕ್ಕೆ ಎಲ್ಲಾ ಮಾಧ್ಯಮ ಮಿತ್ರರು ಆಗಮಿಸಿ ಕಾರ್ಯಾಕ್ರಮವನ್ನು ಯಶಸ್ವಿಗೊಳಿಸಲು ಕೋರಲಾಗಿದೆ.
ಇಲ್ಲಿ ನೀಡಲಾಗಿರುವ ಲಿಂಕ್ ಮೂಲಕ ರಿಜಿಸ್ಟರ್ ಮಾಡಿಸಲು ಕೋರಿದೆ
https://forms.gle/gbJ37MRUVpEjmYaBA

Leave a Reply

Your email address will not be published. Required fields are marked *

error: Content is protected !!