ಲೋಕಲ್ ಸುದ್ದಿ

ಕಲಾಕುಂಚದಿಂದ “ಶ್ರಾವಣ ಶ್ರವಣ” ಉಚಿತ ರಾಜ್ಯ ಮಟ್ಟದ ಕವನ ಸ್ಪರ್ಧೆಗೆ ಆಹ್ವಾನ

ಆಗಸ್ಟ್ . ೬ ರಂದು ಯಕ್ಷರಂಗ, ಯಕ್ಷಗಾನ ಸರ್ವ ಸದಸ್ಯರ ಮಹಾಸಭೆ

ದಾವಣಗೆರೆ : ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಮುಂದಿನ ಶ್ರಾವಣ ಮಾಸದ ಪ್ರಯುಕ್ತ ರಾಜ್ಯ ಮಟ್ಟದ “ಶ್ರಾವಣ ಶ್ರವಣ” ಕವನ ಸ್ಪರ್ಧೆ ಉಚಿತವಾಗಿ
ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ. ಶ್ರಾವಣದ ಕುರಿತು ೨೦ ರಿಂದ ೨೫ ಸಾಲುಗಳಲ್ಲಿ ಕವನ ಬರೆದುಸ್ಪರ್ಧಿಗಳು ಕನ್ನಡದಲ್ಲಿ ಪೂರ್ಣ ಪ್ರಮಾಣದ ವಿಳಾಸ ವ್ಯಾಟ್ಸಪ್ ಸಂಖ್ಯೆ ಇತ್ತೀಚಿನ ಆಕರ್ಷಕ ಭಾವಚಿತ್ರದೊಂದಿಗೆ “ಶ್ರಾವಣ ಶ್ರವಣ” ಕವನ ಸ್ಪರ್ಧೆ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, “ಕನ್ನಡ ಕೃಪಾ” ಕುವೆಂಪು ರಸ್ತೆ, ಕಸ್ತೂರ್ಬಾ ಬಡಾವಣೆ, ದಾವಣಗೆರೆ-೫೭೭೦೦೨ ಈ ವಿಳಾಸಕ್ಕೆ ಅಂಚೆ ಮೂಲಕ ೧೦-೦೮-೨೦೨೩ ರೊಳಗೆ ತಲಪುವಂತೆ ಕಳಿಸಬೇಕು. ಆಂಗ್ಲ ಭಾಷೆಯಲ್ಲಿ ವಿಳಾಸವಿದ್ದರೆ ಕವನ ಸ್ವೀಕರಿಸುವುದಿಲ್ಲ.

ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ವಿಜೇತರಿಗೆ ಸದ್ಯದಲ್ಲೇ “ಕಾವ್ಯ ಕುಂಚ” ಮೂರನೇ ಭಾಗದ ಕವನ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ ಸ್ಪರ್ಧಿಗಳ ಭಾವಚಿತ್ರದೊಂದಿಗೆ ಪ್ರಮಾಣಪತ್ರ, ಸ್ಮರಣಿಕೆಯೊಂದಿಗೆ ಬಹುಮಾನ ವಿತರಿಸಲಾಗುವುದು ಎಂದು ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್, ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9481986868 ೮ ಈ ಸಂಖ್ಯೆಗೆ  ಸಂಪರ್ಕಿಸಬಹುದು ಎಂದು ಈ ಸ್ಪರ್ಧೆಯ ತೀರ್ಪುಗಾರರಲ್ಲಿ ಒಬ್ಬರಾದ ಶ್ರೀಮತಿ ಶೈಲಾ ವಿನೋದ್ ದೇವರಾಜ್ ವಿನಂತಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top