ಇಸ್ರೋ: ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ…!

ಇಸ್ರೋ: ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ…!

ಬೆಂಗಳೂರು:- ದೇಶವೇ ಎದುರು ನೋಡುತ್ತಿರುವ ತ್ರಿವಿಕ್ರಮ ನ ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ. ಚಂದ್ರಯಾನ-3 ಉಡಾವಣೆಗೆ ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ. ಇಸ್ರೋದ ಚಂದ್ರಯಾನ-3 ನೌಕೆ  ಇಂದು(ಜುಲೈ 14) ಗಗನಕ್ಕೆ ಚಿಮ್ಮಲಿದೆ. ಚಂದ್ರನ ಕಕ್ಷೆಯನ್ನ ಲ್ಯಾಂಡರ್ ಸೇರಲಿದೆ.

ಲ್ಯಾಂಡರ್‌ ರೋವರ್‌ಗಳನ್ನು ಹೊತ್ತುಕೊಂಡು ಎಲ್‌ವಿಎಂ-3 ರಾಕೆಟ್‌ ಶ್ರೀಹರಿಕೋಟಾದ ಉಡಾವಣಾ ಪ್ಯಾಡ್‌ನ ಮೇಲೆ ನಿಂತಿದೆ.  ಇಂದು ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟಾದಿಂದ ರಾಕೆಟ್ ಉಡಾವಣೆ ಆಗಲಿದೆ. ಈ ಐತಿಹಾಸಿಕ ಕ್ಷಣವನ್ನ ಕಣ್ತುಂಬಿಕೊಳ್ಳಲು ಭಾರತೀಯರು ಕಾತರದಿಂದ ಕಾಯುತ್ತಿದ್ದಾರೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-111 ಮೂಲಕ ಉಡಾವಣೆ ಮಾಡಲು ತಯಾರಿ ಪೂರ್ಣಗೊಂಡಿದೆ ಎನ್ನಲಾಗಿದೆ.

 

Leave a Reply

Your email address will not be published. Required fields are marked *

error: Content is protected !!