ಚಿಗಟೇರಿ ಆಸ್ಪತ್ರೆಗೆ ಅನಿರೀಕ್ಷಿತ ಭೇಟಿ, ರೋಗಿಗಳ ಆರೋಗ್ಯ ಕ್ಷೇಮ ವಿಚಾರಿಸಿದ ಜಿಲ್ಲಾಧಿಕಾರಿ ಡಾ ವೆಂಕಟೇಶ್ ಎಂ.ವಿ

ಆರೋಗ್ಯ

ದಾವಣಗೆರೆ,ಫೆ.20 (ಕರ್ನಾಟಕ ವಾರ್ತೆ); ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ಅವರು ಮಂಗಳವಾರ ಅನಿರೀಕ್ಷಿತ ಭೇಟಿ ನೀಡಿ ಹೆರಿಗೆ ವಾರ್ಡ್, ತುರ್ತು ನಿಗಾ ಘಟಕ ಹಾಗೂ ಹೊಸದಾಗಿ ಆರಂಭವಾಗಿರುವ ಡಯಾಲಿಸಿಸ್ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ ರೋಗಿಗಳ ಯೋಗಕ್ಷೇಮ ವಿಚಾರಿಸಿದರು.
ಡಯಾಲಿಸಿಸ್ ಘಟಕದಲ್ಲಿ ರೋಗಿಗಳಿಗೆ ಬೇಕಾದ ಡಯಾಲಿಸಿಸ್ ಕಿಟ್‍ಗಳ ದಾಸ್ತಾನು ಮತ್ತು ಔಷಧ, ಕೆಮಿಕಲ್ಸ್ ದಾಸ್ತಾನಿಟ್ಟುಕೊಂಡು ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲು ಸೂಚನೆ ನೀಡಿದರು. ಹೆರಿಗೆ ವಾರ್ಡ್‍ಗೆ ಭೇಟಿ ನೀಡಿ ಹೆರಿಗೆ ಪೂರ್ವ ಮತ್ತು ಹೆರಿಗೆ ನಂತರದಲ್ಲಿ ಸರಿಯಾದ ಚಿಕಿತ್ಸೆ ಲಭ್ಯವಾಗಬೇಕು, ಇದರಿಂದ ತಾಯಿ ಮಗುವಿನ ಮರಣ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲು ಅಗತ್ಯವಿರುವವರಿಗೆ ತೀವ್ರ ನಿಗಾ ಘಟಕದಲ್ಲಿ ಸೂಕ್ತವಾದ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು. ಈ ವೇಳೆ ಜಿಲ್ಲಾ ಸರ್ಜನ್ ಡಾ; ನಾಗೇಂದ್ರಪ್ಪ ಉಪಸ್ಥಿತರಿದ್ದರು.

ಆರೋಗ್ಯ

Leave a Reply

Your email address will not be published. Required fields are marked *

error: Content is protected !!