ಗುಪ್ತಚರ ಇಲಾಖೆಯಲ್ಲಿ ಉದ್ಯೋಗ – ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನ

job-vacancy-in-intelligence-department-eligible-candidates-apply
ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಗುಪ್ತಚರ ಮಂಡಳಿಯ ಅಸಿಸ್ಟಂಟ್ ಸೆಂಟ್ರಲ್ ಇಂಟೆಲಿಜೆನ್ಸ್‌ ಆಫೀಸರ್ ಗ್ರೇಡ್‌ 2 / ಎಕ್ಸಿಕ್ಯೂಟಿವ್ ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸಲು ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿಯುಳ್ಳವರು ಅರ್ಹತೆ, ಪ್ರಮುಖ ದಿನಾಂಕಗಳು, ಇತರೆ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ. ಗುಪ್ತಚರ ಇಲಾಖೆಯು ಒಟ್ಟು 995 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಈ ಹುದ್ದೆಗಳ ಪೈಕಿ ಸಾಮಾನ್ಯ ವರ್ಗದವರಿಗೆ 377, ಆರ್ಥಿಕವಾಗಿ ಹಿಂದುಳಿದವರಿಗೆ 129, ಒಬಿಸಿಗೆ 222, ಎಸ್‌ಸಿ’ಗೆ 134, ಎಸ್‌ಟಿ’ಗೆ 133 ಹುದ್ದೆಗಳು ಮೀಸಲಿವೆ. ವಿದ್ಯಾರ್ಹತೆ ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಹೊಂದಿರಬೇಕು. ವಯೋಮಿತಿ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 27 ವರ್ಷ ವಯಸ್ಸು ಮೀರಿರಬಾರದು. ಒಬಿಸಿ ವರ್ಗದವರಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ. ಅರ್ಜಿ ಸಲ್ಲಿಸುವುದು ಹೇಗೆ? ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೇಂದ್ರ ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ ವಿಳಾಸ https://www.mha.gov.in/en# ಕ್ಕೆ ಭೇಟಿ ನೀಡಿ. ನವೆಂಬರ್ 25 ರಂದು ಅರ್ಜಿ ಲಿಂಕ್ ಆಕ್ಟಿವೇಟ್‌ ಆಗಲಿದ್ದು, ಅಂದಿನಿಂದ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ: ನೇಮಕಾತಿ ಪ್ರಕ್ರಿಯೆ ಶುಲ್ಕ 450 ರೂ ಅನ್ನು ಎಲ್ಲ ಅಭ್ಯರ್ಥಿಗಳು ಭರಿಸಬೇಕಿದೆ. ಇನ್ನು ಪರೀಕ್ಷೆ ವೆಚ್ಚ 100 ರೂ ಆಗಿದೆ. ವೇತನ: ಈ ಹುದ್ದೆಗೆ 44900-142400 ರೂ ಮಾಸಿಕ ವೇತನ ನಿಗದಿ ಮಾಡಲಾಗಿದೆ. ಈ ಹುದ್ದೆಗೆ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿ ಪ್ರಕ್ರಿಯೆ ಶುಲ್ಕ 450 ರೂ ಅನ್ನು ಎಲ್ಲ ಅಭ್ಯರ್ಥಿಗಳು ಭರಿಸಬೇಕಿದೆ. ಇನ್ನು ಪರೀಕ್ಷೆ ವೆಚ್ಚ 100 ರೂ ಆಗಿದೆ. ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಸರಿಯಾಗಿ ಓದಿ ಅರ್ಥೈಸಿಕೊಂಡು ಮುಂದುವರೆಯಬೇಕು. ಅಭ್ಯರ್ಥಿಗಳು ಲಿಖಿತ ಪರೀಕ್ಷೆ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ ಮತ್ತು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಲಾಗುವುದು. ಅರ್ಜಿ ಸಲ್ಲಿಸಲು ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಆಧಾರ್ ಕಾರ್ಡ್‌, ಪದವಿ ಪ್ರಮಾಣ ಪತ್ರ, ಇತರೆ ಅಗತ್ಯ ದಾಖಲೆಗಳು ಬೇಕು. ಆನ್‌ಲೈನ್‌ ಹೊರತುಪಡಿಸಿ, ಇತರೆ ಯಾವುದೇ ಮಾರ್ಗದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಅರ್ಜಿ ಶುಲ್ಕವನ್ನು ಮಾತ್ರ ಆಫ್‌ಲೈನ್‌ ಚಲನ್‌ ಮೂಲಕ ಅಥವಾ ಆನ್‌ಲೈನ್‌ ಲೈನ್‌ ಮೂಲಕ ಪಾವತಿಸಬಹುದು.

Leave a Reply

Your email address will not be published. Required fields are marked *

error: Content is protected !!