ರವಿ ಬಸ್ರೂರು ನಿರ್ದೇಶನದ ‘ಕಡಲ್’ ಸಿನಿಮಾ ಜ.19 ಕ್ಕೆ ಬಿಡುಗಡೆ

ಬೆಂಗಳೂರು: ಚಂದನವನದ ಖ್ಯಾತ ಸಂಗೀತ ನಿರ್ದೇಶಕದ ರವಿ ಬಸ್ರೂರು ಸಂಗೀತ ನಿರ್ದೇಶಕರಾಗಿ ಈಗಾಗಲೇ ಸೈ ಎನಿಸಿಕೊಂಡಿದ್ದು ಗೊತ್ತೆ ಇದೆ. ಇದರ ನಡುವೆಯೂ ಗರ್ ಗರ್ ಮಂಡ್ಲ, ಬಿಲಿಂಡರ್, ಕಟಕ, ಗಿರ್ಮಿಟ್ ಸಿನಿಮಾ ನಿರ್ದೇಶನ ಮಾಡಿ ಜನರ ಮೆಚ್ಚುಗೆ ಗಳಿಸಿರುವ ಇವರು ಇದೀಗ ಕರಾವಳಿಯ ಮೀನುಗಾರರ ಬದುಕಿನ ಕಥೆಯನ್ನು ಆಯ್ದುಕೊಂಡು ಮತ್ತೊಂದು ಸಿನಿಮಾದ ನಿರ್ದೇಶಕರಾಗಿ ಚಂದನವನದ ಮುಂದೆ ಬಂದಿದ್ದು, ಕಡಲ್ ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ಇದೀಗ ಈ ಸಿನಿಮಾದ ಟ್ರೇಲರ್ ಬಿಡುಗಡೆಗೊಂಡಿದೆ.

ಅವರ ನಿರ್ದೇಶನದ ಮತ್ತೊಂದು ಹೊಸ ಸಿನಿಮಾ ಕಡಲ್ ಜನವರಿ 19 ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ರವಿ ಬಸ್ರೂರು ಮ್ಯೂಸಿಕ್ ಚಾನಲ್‌ ನಲ್ಲಿ ಸಂಕ್ರಾಂತಿ ಹಬ್ಬದ ದಿನದಂದು ಟ್ರೇಲರ್ ಬಿಡುಗಡೆಯಾಗಿದೆ.

ಇದು ಮೀನುಗಾರರ, ಕರಾವಳಿ ಬದುಕಿನ ಸುತ್ತ ಹೆಣೆದ ಕಥೆಯಾಗಿದ್ದು, ಪ್ರೀತಿ, ಪ್ರೇಮ ದ್ವೇಷದ ಸುತ್ತಲೂ ಕಥೆ ಸಾಗುತ್ತಾ ಹೋಗುತ್ತದೆ. ಓಂಕಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ಈ ಸಿನಿಮಾಕ್ಕೆ ಎನ್‌.ಎಸ್ ರಾಜ್ ಕುಮಾರ್ ಬಂಡವಾಳ ಹೂಡಿದ್ದು, ಸಚಿನ್ ಬಸ್ರೂರು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇನ್ನು ನಿರ್ದೇಶಕರಾಗಿ, ಸಂಗೀತ ನಿರ್ದೇಶಕರಾಗಿ ಹಾಗೂ ಸಂಕಲನಕಾರರಾಗಿದ್ದಾರೆ ರವಿ ಬಸ್ರೂರು.

ಇನ್ನು ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಸೌರಭ ಭಂಡಾರಿ, ಸೂಚನ್ ಶೆಟ್ಟಿ ಹಾಗೂ ನಾಯಕಿಯಾಗಿ ಚಿರಶ್ರೀ ಅಂಚನ್ ಕಾಣಿಸಿಕೊಂಡಿದ್ದು, , ಭಾಸ್ಕರ್ ಬಸ್ರೂರು, ನಾಗೇಂದ್ರ ಕೋಟೆ, ಸುಜಾತ ಅಂದ್ರದೆ, ವಿಜಯ್ ಬಸ್ರೂರು ಸೇರಿದಂತೆ ಹಲವು ತಾರಾಗಣವಿದೆ.

Leave a Reply

Your email address will not be published. Required fields are marked *

error: Content is protected !!