ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದ ಕುಲ ಸಚಿವರಾಗಿ ಪ್ರೊ. ರುದ್ರಗೌಡ ಬಿರಾದಾರ್ ಆಯ್ಕೆ

ಕಲಬುರಗಿ : ಕಲಬುರಗಿ ನಗರದ ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯಕ್ಕೆ ಅರ್ಥಶಾಸ್ತ್ರ ವಿಭಾಗದ ಪ್ರೊ. ರುದ್ರಗೌಡ ಬಿರಾದಾರ್ ಕುಲಸಚಿವರಾಗಿ ಆಯ್ಕೆಯಾಗಿದ್ದಾರೆ.
ಅವರಿಗೆ ಕರ್ನಾಟಕ ರಾಜ್ಯ ಅರ್ಥಶಾಸ್ತ್ರ ವೇದಿಕೆಯ ಕಾರ್ಯದರ್ಶಿಯಾದ ಪ್ರೊ.ಭೀಮಣ್ಣ ಸುಣಗಾರ್, ನಿಕಟಪೂರ್ವ ಕಾರ್ಯದರ್ಶಿಯಾದ ಪ್ರೊ. ಷಣ್ಮುಖ ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರುಗಳಾದ ಪ್ರೊ. ರಂಗಪ್ಪ, ಪ್ರೊ. ಸುಚಿತ್ರ, ಪ್ರೊ. ಸೆಲ್ವಿ , ಪ್ರೊ. ಹುಚ್ಚೇಗೌಡ, ಪ್ರೊ. ಗಿರೀಶ್, ಪ್ರೊ. ಸುಂದರಂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.