ರಾಜ್ಯದ ಸಮುದ್ರಗಳಿಗೆ ಕೃತಕ ಬಂಡೆಗಳ ಅಳವಡಿಕೆ; ಇದರ ಹಿಂದಿನ ಉದ್ದೇಶವೇನು?

karnataka-government-decided-to-install-artificial-reef-in-coastal areas
ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಡಲಿಗೆ ಕೃತಕ ಬಂಡೆ ಅಳವಡಿಸುವ ಕುರಿತು ಸರಕಾರ ತನ್ನ ಯೋಜನೆಯ ಬಗ್ಗೆ ಮುಂದಿಟ್ಟಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಮೀನುಗಾರಿಕಾ ಸಚಿವರು ಮಾಹಿತಿಯನ್ನು ನೀಡಿದ್ದಾರೆ. ರಾಜ್ಯದಲ್ಲಿ ಸುಮಾರು 300 ಕಿಲೋ ಮೀಟರ್‌ನಷ್ಟು ಉದ್ದ ಕಡಲ ತೀರವಿದೆ. ಇದೀಗ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 56 ಸ್ಥಳಗಳಲ್ಲಿ ಕೃತಕ ಬಂಡೆಗಳನ್ನು (Artificial Reef) ಅಳವಡಿಸಲು ಸರಕಾರ ಮುಂದಾಗಿದೆ. ಕೇಂದ್ರ ಸರಕಾರದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯಗಳ ನಡುವಿನ ಅನುದಾನದೊಂದಿಗೆ ಕೃತಕ ಬಂಡೆಗಳನ್ನು ಅಳವಡಿಸುವ ಪ್ರಕ್ರಿಯೆ ನಡೆಯಲಿದೆ.
ಯಾಕಾಗಿ ಕೃತಕ ಬಂಡೆ?
ಸಾಮಾನ್ಯ ಕಡಲ್ಕೊರೆತ ಸ್ಥಳಗಳಲ್ಲಿ ಕಲ್ಲುಗಳನ್ನು ಹಾಕುವುದನ್ನು ನೋಡಿದ್ದೀವಿ. ಆದರೆ ಈ ಕೃತಕ ಬಂಡೆ ಕಲ್ಲುಗಳನ್ನು ಅಳವಡಿಸುವ ಉದ್ದೇಶ ಭಾರೀ ಮಹತ್ವದ್ದಾಗಿದೆ. ಕಾರಣ, ಕೃತಕ ಬಂಡೆ ಅಳವಡಿಸುವುದರಿಂದ ಬ್ರೇಕ್ ವಾಟರ್‌ಗಳನ್ನು ಇದು ನಿರ್ಮಿಸಬಲ್ಲದು. ಆದರೆ ರಾಜ್ಯ ಸರಕಾರದ ಮುಖ್ಯ ಉದ್ದೇಶ, ಮೀನು ಫಸಲು ಹೆಚ್ಚಳ ಮಾಡುವುದಾಗಿದೆ. ಈಗಾಗಲೇ ಕರಾವಳಿಯಲ್ಲಿ ಮೀನು ಸಂಪತ್ತು ಕುಸಿಯುತ್ತಿದೆ, ಅದರಲ್ಲೂ ಈ ಬಾರಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಮೀನುಗಾರಿಕೆ ಕಷ್ಟಕರವಾಗಿದೆ.