ಕರ್ನಾಟಕ ಪೋಲಿಸ್ ಧ್ವಜ ದಿನಾಚರಣೆ; ಐಜಿಪಿ, ಎಸ್ ಪಿ ರಿಂದ ಸ್ವಯಂ ಪ್ರೇರಿತ ರಕ್ತದಾನ

ದಾವಣಗೆರೆ; ದಿನಾಂಕ:-02-04-2024 ಬೆಳಿಗ್ಗೆ 08-30 ಕ್ಕೆ ಪೋಲಿಸ್ ಧ್ವಜದಿನಾಚರಣೆ(“(KARNATAKA POLICE FLAG DAY)) ಪ್ರಯುಕ್ತ ದಾವಣಗೆರೆ ಜಿಲ್ಲಾ ಪೋಲಿಸ್ ಮತ್ತು ಪೋಲಿಸ್ ಕಲ್ಯಾಣ ಸಮಿತಿ ಹಾಗೂ ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯ ಲೈಫ್ ಲೈನ್‌ರಕ್ತ ನಿಧಿ ಕೇಂದ್ರದ ಸಹಯೋಗದೊಂದಿಗೆ ಜಿಲ್ಲಾ ಪೋಲಿಸ್ ಕವಾಯತು ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಜರುಗಿತು.

ಸ್ವಯಂ ಪ್ರೇರಿತರಕ್ತದಾನ ಶಿಬಿರವನ್ನು ಮಾನ್ಯ ಪೊಲೀಸ್ ಮಹಾ ನಿರೀಕ್ಷಕರವರು ಪೂರ್ವ ವಲಯ ದಾವಣಗೆರೆ ರವರಾದ ಡಾ. ಕೆ ತ್ಯಾಗರಾಜನ್ ಐಪಿಎಸ್ ರವರು & ಮಾನ್ಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಈ ರಕ್ತದಾನ ಶಿಬಿರದಲ್ಲಿ ಅಪರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಶ್ರೀ ವಿಜಯಕುಮಾರ್ ಸಂತೋಷ, ನಗರ ಡಿವೈಎಸ್ಪಿ ಶ್ರೀ ಮಲ್ಲೆಶ್‌ದೊಡ್ಡಮನಿ ರವರು, ಚನ್ನಗಿರಿ ಡಿವೈಎಸ್ಪಿ ಶ್ರೀ ಪ್ರಶಾಂತ್ ಮನ್ನೋಳಿ ರವರು ರಕ್ತದಾನ ಮಾಡಿ ತಮ್ಮ ಸಿಬ್ಬಂದಿಗಳಿಗೆ ರಕ್ತದಾನ ಮಾಡಲು ಪ್ರೇರೆಪಿಸಿದರು.

ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಶ್ರೀ ಪ್ರಶಾಂತ್ ಸಿದ್ದಗೌಡರ್ ರವರು, ಡಿಎಆರ್ ಡಿವೈಎಸ್ಪಿ ಶ್ರೀ ನಿಶಿಮಪ್ಪ ರವರು, ಪೋಲಿಸ್ ನೀರಿಕ್ಷಕರಾದ ಹೆಚ್.ಬಿ ಸೋಮಶೇಖರಪ್ಪ ಮತ್ತು ಜಿಲ್ಲೆಯ ಮತ್ತು ತಾಲ್ಲೂಕಿನ ಪೋಲಿಸ್ ನೀರಿಕ್ಷಕರು ಹಾಜರಿದ್ದರು. ನಿವೃತ್ತ ಪೊಲೀಸ್ ಅಧೀಕ್ಷಕರಾದ ಶ್ರೀ ರವಿನಾರಯಣ್‌ರವರು ಸ್ವಯಂ ಪ್ರೇರಿತರಕ್ತದಾನ ಶಿಬಿರ ಆಯೋಜಿಸಿ ಅರ್ಥಪೂರ್ಣವಾಗಿ ಆಚರಿಸಲು ನೆರವಾಗಿರುತ್ತಾರೆ.

ಲೈಪ್‌ಲೈನ್‌ರಕ್ತ ನಿಧಿ ಕೇಂದ್ರದ ವೈದ್ಯಧಿಕಾರಿಗಳಾದ ಡಾ. ಎಮ್.ಎಮ್. ದೊಡ್ಡಿಕೋಪ್ಪದ್ ಮತ್ತು ಕರ್ನಾಟಕ ಹಿಮೊಫಿಲಿಯಾ ಸೊಸೈಟಿಯ ಮಹಿಳಾ ವಿಭಾಗದ ಅಧ್ಯಕ್ಷರಾದ ಡಾ. ಮೀರಾ ಹನಗವಾಡಿ ಉಪಸ್ಥಿತರಿದ್ದರು. ರಕ್ತ ನಿಧಿಯ ಸಿಬ್ಬಂದಿಗಳು ಶಿಬಿರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು, ಹಾಗೂ ಜಿಲ್ಲೆಯ ವೃತ್ತ ನೀರಿಕ್ಷಕರು ಪೋಲಿಸ್ ಸಿಬ್ಬಂದಿಗಳು ಸ್ವಯಂ ಪ್ರೇರಿತರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು. ಸುಮಾರು 16 ಕ್ಕೂ ಹೆಚ್ಚು ಜನ ರಕ್ತದಾನ ಮಾಡಿ ಪೋಲಿಸ್ ಧ್ವಜದಿನಾಚರಣೆಯನ್ನ ಅರ್ಥಪೂರ್ಣವಾಗಿ ಆಚರಿಸಿದರು.

Leave a Reply

Your email address will not be published. Required fields are marked *

error: Content is protected !!