karnataka rajyotsava; ಮೇಣದ ಬತ್ತಿ ಹಚ್ಚುವ ಮೂಲಕ ಕನ್ನಡ ಪರ ಹೋರಾಟಗಾರರ ನೆನೆದ ಕೊಟ್ರೇಶ್

ದಾವಣಗೆರೆ, ನ.02: ನವೆಂಬರ್ ಒಂದು ಅಂದ್ರೆ ಸಾಕು ಕನ್ನಡ ಬಾವುಟ, ರಾಷ್ಟ್ರಧ್ವಜವನ್ನು ಮುಗಿಲುತ್ತೇರಕ್ಕೆ ಧ್ವಜಾರೋಹಣ ಮಾಡುವುದನ್ನು ಎಲ್ಲರೂ ನೋಡಿದ್ದೇವೆ..ಆದರೆ ಕನ್ನಡಕ್ಕಾಗಿ ಹೋರಾಡಿ ಮಡಿದವರನ್ನು ಯಾರು ನೆನಸಿಕೊಳ್ಳುವುದಿಲ್ಲ.ಆದ್ರೆ ಇಲ್ಲೊಬ್ಬರು ನಾಡು, ನುಡಿ ರಕ್ಷಣೆಗಾಗಿ ಬಲಿದಾನ ನೀಡಿದವರನ್ನು ಮೇಣದ ಬತ್ತಿ ಹಚ್ಚುವ ಮೂಲಕ ಅವರನ್ನು ನೆನೆದರು.

ಹೌದು..‌ನಗರದ ಎಕೆ ಫೌಂಡೇಶನ್ ಅಧ್ಯಕ್ಷ, ಲೋಕಸಭಾ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ.ಬಿ.ಕೊಟ್ರೇಶ್ ಹಾಗೂ ಕನ್ನಡ ಪರ ಸಂಘಟನೆಗಳು ಜಯದೇವ ವೃತ್ತದಲ್ಲಿ ಮೇಣದ ಬತ್ತಿ ಹಚ್ಚುವ ಮೂಲಕ ಕನ್ನಡಕ್ಕಾಗಿ (karnataka rajyotsava) ಮಡಿದವರ ಆತ್ಮಕ್ಕೆ ಶಾಂತಿ ಕೋರಿದರು.

ನಂತರ ಮಾತನಾಡಿದ ಎ.ಕೆ.ಫೌಂಡೇಷನ್ ಅಧ್ಯಕ್ಷ ಕೆ.ಬಿ.ಕೊಟ್ರೇಶ್, ಕನ್ನಡಿಗರಿಗೆ ಸುಮ್ಮನೆ ಸ್ವಾತಂತ್ರ್ಯ ಸಿಕ್ಕಿಲ್ಲ, ಇದರ ಹಿಂದೆ ಸಾಕಷ್ಟು ಜನರ ಶ್ರಮವಿದೆ..ಕನ್ನಡ ಭಾಷೆ ಉಳಿವಿಗಾಗಿ ಗೋಕಾಕ್ ಚಳವಳಿ, ನಾಡು, ನುಡಿಗಾಗಿ ತ್ಯಾಗ, ಬಲಿದಾನ ನೀಡಿದ ಅನೇಕ ರಾಜ ಮಹಾರಾಜರನ್ನು ನೆನಸಿಕೊಳ್ಳಬೇಕು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದವರ ರಾಜ ಮಹಾರಾಜರನ್ನು ಈಗಲೂ ನೆನಸಿಕೊಳ್ಳಬೇಕು. ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಕೃಷ್ಣದೇವರಾಯ, ಅನಕೃ, ಕುವೆಂಪು, ಬೇಂದ್ರೆ, ನಾಲ್ವಡಿ ಕೃಷ್ಣರಾಜ್ ಒಡೆಯರ್ ಕನ್ನಡಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದು ಅವರನ್ನು ನೆನೆಯುವುದಕ್ಕಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.

karnataka rajyotsava; ನಾಡಿನ ಭವ್ಯ ಸಂಸ್ಕೃತಿ, ಪರಂಪರೆ ಯುವ ಜನತೆಗೆ ಮನನವಾಗಲಿ; ಎಸ್.ಎಸ್.ಮಲ್ಲಿಕಾರ್ಜುನ್

ಕನ್ನಡಿಗರ ವಿರುದ್ದ ಪರ ಭಾಷಿಗರು ಹೋರಾಟ ನಡೆಸಿದಾಗ ಕನ್ನಡ ಪರ ಸಂಘಟನೆಗಳು ವಿಭಿನ್ನ ಹೋರಾಟದಲ್ಲಿ ಧುಮುಕಿವೆ..ಇನ್ನೂ ನಾಡು, ನುಡಿಗಾಗಿ ಸೇವೆ ಸಲ್ಲಿಸಲು ಸದಾ ಸಿದ್ದನಿದ್ದೇನೆ. ಅಲ್ಲದೇ ಕನ್ನಡ ಶಾಲೆ ಉಳಿವಿಗಾಗಿ ನಿಮ್ಮೆಲ್ಲ ಸಹಕಾರ ಅಗತ್ಯ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಕಾರ್ಯಕ್ರಮದ ನಂತರ ಮಹಿಳೆಯರು ಸೇರಿದಂತೆ ಇತರರು ಮೇಣದಬತ್ತಿ ಹಚ್ಚುವ ಮೂಲಕ ಕನ್ನಡಕ್ಕಾಗಿ ಹೋರಾಡಿದವರು ಅಜರಾಮರು ಎಂದು ತೋರಿಸಿಕೊಟ್ಟರು. ಈ ಸಂದರ್ಭದಲ್ಲಿ ಪ್ರಮುಖರಾದ ಅರುಣ್ ಕುಮಾರ್, ಗೋಪಾಲಗೌಡ, ಮಾರುತಿ ಸೇರಿದಂತೆ ಕನ್ನಡ ಪರ ಸಂಘಟನೆಗಳು ಭಾಗವಹಿಸಿದ್ದವು.

Leave a Reply

Your email address will not be published. Required fields are marked *

error: Content is protected !!