‘ಕೋವಿಡ್ ನಂತರ ಪುಟಿದೆದ್ದ ಕರುನಾಡು’: ಬೊಮ್ಮಾಯಿ ಬಜೆಟ್ ಬಗ್ಗೆ ಶಾಸಕ ಡಿ.ಎಸ್.ಅರುಣ್ ಖುಷ್

ಬೊಮ್ಮಾಯಿ ಬಜೆಟ್ ಬಗ್ಗೆ ಶಾಸಕ ಡಿ.ಎಸ್.ಅರುಣ್ ಖುಷ್

ಬೆಂಗಳೂರು: ಕೋವಿಡ್ ನಂತರ ಪುಟಿದೆದ್ದ ಕರುನಾಡಿನ ಉಜ್ವಲ ಭವಿಷ್ಯಕ್ಕಾಗಿ ರೂಪಿಸಿರುವ ಬಜೆಟ್ ಇದಾಗಿದೆ ಎಂದು ಬೊಮ್ಮಾಯಿ ಬಜೆಟ್ ಬಗ್ಗೆ ವಿಧಾನ ಪರಿಷತ್ ಸದಸ್ಯ ಶಾಸಕ ಡಿ.ಎಸ್.ಅರುಣ್ ಬಣ್ಣಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಈ ಬಾರಿಯ ಮುಂಗಡ ಪತ್ರವನ್ನು ಜನಸ್ನೇಹಿ ಮುಂಗಡ ಪತ್ರ ಎಂದು ಕರೆದಿದ್ದಾರೆ.ಈ ಮುಂಗಡ ಪತ್ರ 3 ಲಕ್ಷ 7 ಸಾವಿರ ಕೋಟಿಯ ಗಾತ್ರವಾಗಿದೆ. ಈ ಬಾರಿಯ ಮುಂಗಡ ಪತ್ರ ಈ ಅವಧಿಯ ಕೊನೆಯ ಮುಂಗಡಪತ್ರವಾಗಿದ್ದು, ಹಾಗೂ ನಮ್ಮ ಹೆಮ್ಮೆಯ ಮುಖ್ಯಮಂತ್ರಿಗಳ ಎರಡನೆಯ ಬಜೆಟ್ ಆಗಿದ್ದು ಬಹಳ ಅರ್ಥಪೂರ್ಣವಾಗಿದ್ದು ಸರ್ವರನ್ನು ಗಮನಿಸಿ ಜನಸ್ನೇಹಿ ಮುಂಗಡ ಪತ್ರವನ್ನು ತಯಾರಿಸಲಾಗಿದೆ ಎಂದಿದ್ದಾರೆ.
ಕೋವಿಡ್ ನಂತರದಲ್ಲಿ ಉಂಟಾದ ಆರ್ಥಿಕ ಸಂಕಷ್ಟವನ್ನು ಚೇತರಿಕೆ ಎತ್ತ ಕೊಂಡೊಯ್ದು ಮುನ್ನಡೆ ಸಾಧಿಸಲು ಗಮನಹರಿಸಲಾಗುತ್ತಿದೆ ಎಂದಿರುಬ ಅರುಣ್, ‘ಹೋಗುತ್ತಿದೆ ಹಳೇ ಕಾಲ ಬರುತ್ತಿದೆ ಹೊಸ ಭರವಸೆ’ ಎಂಬ ಆಶಾದಾಯಕ ನುಡಿಯನ್ನಾಡಿದ ನಮ್ಮ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಯ್ಯ ಅವರು, ರಾಜ್ಯದ ಎಲ್ಲಾ ವರ್ಗದ ಜನರ ನಾಡಿಮಿಡಿತಾ ಅರಿತು, ಮಾನವ ಅಭಿವೃದ್ಧಿ,ಕಾರ್ಮಿಕ ಅಭಿವೃದ್ಧಿ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಹಾಗೂ ಮಹಿಳಾ ಮತ್ತು ಶಿಕ್ಷಣಕ್ಕೆ ಆದ್ಯತೆ ಕೊಡುವ ಆಯವ್ಯಯ ರೂಪಿಸಿದ್ದಾರೆ ಎಂದು ಬಣ್ಣಿಸಿದ್ದಾರೆ.
ಅನ್ನದಾತರಿಗೆ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷ ಸಾಲ ನೀಡಲು ಮುಂದಾಗಿದೆ, ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಲಾಗಿದೆ. ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್* ವ್ಯವಸ್ಥೆ ಕಲ್ಪಿಸಲು ಮುಂದಾಗಿರೋ ನಮ್ಮ ಸರ್ಕಾರ, ಶಿಕ್ಷಣದ ವ್ಯವಸ್ಥೆಗೆ ಕೊರತೆ ಉಂಟಾಗದಂತೆ ನೋಡಿಕೊಳ್ಳುತ್ತಿದೆ. ಅಂಗನವಾಡಿ ಆಶಾ ಕಾರ್ಯಕರ್ತೆಯರ* ಆರ್ಥಿಕ ಭದ್ರತೆಗಾಗಿ ಸಹಾಯಧನವನ್ನು ಹೆಚ್ಚಿಸಲಾಗಿದೆ. ವೃತ್ತಿ ತೆರಿಗೆ ವಿನಾಯಿತಿ, ಕಡಿಮೆ ವರಮಾನದ ವರ್ಗಕ್ಕೆ ವೃತ್ತಿ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ. ಈ ಹಿಂದೆ 15 ಸಾವಿರ ಇತ್ತು. ಈಗ 25 ಸಾವಿರಕ್ಕೆ ವೃತ್ತಿ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ, ಮಾಡಲಾಗಿದೆ. ಸರ್ವ ವಲಯಗಳನ್ನು ಗಮನದಲ್ಲಿಟ್ಟುಕೊಂಡು, ಸರ್ವ ವಲಯ ಅಭಿವೃದ್ಧಿಗಾಗಿ ಈ ಬಜೆಟ್ ರೂಪಗೊಂಡಿದೆ ಎಂದು ಹೇಳಬಹುದು ಎಂದು ಶಾಸಕ ಡಿ.ಎಸ್.ಅರುಣ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!