ಕಲಾವಿದರಿಗೆ ಕಿಟ್ ವಿತರಿಸಿದ ಬ್ರಾಹ್ಮಣ ಸಮಾಜ ಬಾಂಧವರು: ಸಮಾಜ ಸೇವೆಯಲ್ಲಿ ಯುವಕರ ಪಾತ್ರ ಮಹತ್ವದ್ದು – ಡಿ ವೈ ಎಸ್ ಪಿ ನಾಗೇಶ ಐತಾಳ

ದಾವಣಗೆರೆ : ಸಮಾಜ ಸೇವೆಯಲ್ಲಿ ಯುವಕರು ತಮ್ಮ ಪಾತ್ರವನ್ನು ತುಂಬಾ ಚೆನ್ನಾಗಿ ನಿಬಾಯಿಸುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸಿ ಎಂದು ಡಿವೈಎಸ್ಪಿ ನಾಗೇಶ ಐತಾಳ ಹೇಳಿದರು

ನಗರದ ಬ್ರಾಹ್ಮಣ ಸಮಾಜದ ಕಚೇರಿ ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕು ಬ್ರಾಹ್ಮಣ ಯುವ ವೇದಿಕೆಯಿಂದ ಕಲಾವಿದರಿಗೆ, ವಾದ್ಯದವರಿಗೆ ಹಾಗು ಅಡಿಗೆ ಸಹಾಯಕರಿಗೆ ಆಹಾರ ದಿನಸಿ ಪದಾರ್ಥ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಕಷ್ಟದಲ್ಲಿರುವವರಿಗೆ ಗುರುತಿಸಿ ನೆರವಾಗುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ಡಾ.ಬಿ.ಟಿ.ಅಚ್ಚುತ, ಕಾರ್ಯದರ್ಶಿ ಮಾಧವ ಪದಕಿ ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಉಪ್ಪಾದ್ಯಕ್ಷ ಡಾ.ಕಿರಣ್ ಹೆಗಡೆ, ಕಾರ್ಯದರ್ಶಿ ಅನಿಲ್ ಬಾರಂಗಳ್, ಖಜಾಂಚಿ ಎಂ.ಜಿ.ಶ್ರೀಕಾಂತ್, ಸಲಹೆಗಾರ ಡಾ.ಆನಂದ್ ಋಗ್ವೇದಿ, ಕರ್ನಾಟಕ ರಾಜ್ಯದ ಬ್ರಾಹ್ಮಣ ನಿಗಮ ಮಂಡಳಿ ನಿರ್ದೇಶಕ ಪಿ.ಸಿ.ಶ್ರೀನಿವಾಸ, ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಎಸ್.ಪಿ.ಸತ್ಯನಾರಾಯಣ, ಕಾರ್ಯದರ್ಶಿ ಬಾಲಕೃಷ್ಣ ವೈದ್ಯ, ತಾಲೂಕು ಯುವ ವೇದಿಕೆ ಉಪಾಧ್ಯಕ್ಷ ಭದರಿಪ್ರಸಾದ್, ಸದಸ್ಯರಾದ ವಿಕ್ರಂ ಜೋಶಿ, ರಜತ್, ವಿನಯ್ ಪದಕಿ, ಉತ್ಸವ ರಾವ್, ಹನುಮಂತ್ ರಾವ್, ವಿಶ್ವನಾಥ್ ದೀಕ್ಷಿತ್, ಚೈತನ್ಯ ನಾರಾಯಣ ಸ್ವಾಮಿ, ವಿಕ್ರಮ್ ಜೋಷಿ, ವಿಜಯಾ ಜೋಷಿ ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

error: Content is protected !!