ಕುರುಬರ ಎಸ್ಟಿ ಸೇರ್ಪಡೆ: ಬಿ ಎಂ ಸತೀಶ್ ಸ್ವಾಗತ

ದಾವಣಗೆರೆ: ರಾಜ್ಯದಲ್ಲಿ ಅತ್ಯಂತ ಹಿಂದುಳಿದ ಕುರುಬ ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೇಜರ್ ಮಣಿವಣ್ಣನ್ ಪತ್ರ ಬರೆದಿದ್ದಾರೆ.
ಇದರಿಂದ ಕಾಗಿನೆಲೆ ಕನಕ ಗುರುಪೀಠದ ಶ್ರೀ ನೀರಾಜಂನಾನಂದಪುರಿ ಸ್ವಾಮೀಜಿ ಯವರ ನೇತೃತ್ವದ ಕುರುಬ ಸಮಾಜದ ದಶಕದ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಕುರುಬ ಸಮಾಜದ ಎಸ್ಟಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಹಾಗೂ ಬಿಜೆಪಿ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ರವರು ಹರ್ಷ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರದ ಬುಡಕಟ್ಟು ಕಲ್ಯಾಣ ಸಚಿವಾಲಯ ಎಸ್ಟಿ ಸೇರ್ಪಡೆಯನ್ನು ಲೋಕುರ್ ಸಮಿತಿಯ ಮಾನದಂಡಗಳ ಪ್ರಕಾರ ಅಧ್ಯಯನ ಮಾಡಿ ವರದಿ ನೀಡುವಂತೆ ಆದೇಶಿಸಿತ್ತು. ಅದರಂತೆ ಮೈಸೂರು ವಿಶ್ವವಿದ್ಯಾಲಯದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಕುಲಶಾಸ್ತ್ರೀಯ ಅಧ್ಯಯನ ಮಾಡಿ ರಾಜ್ಯ ಸರ್ಕಾರಕ್ಕೆ ದಿನಾಂಕ:23.03.2023 ರಂದು ವರದಿ ಸಲ್ಲಿಸಿತ್ತು.
ರಾಜ್ಯದ 25 ಜಿಲ್ಲೆಗಳ 50 ತಾಲ್ಲೂಕುಗಳಲ್ಲಿನ 102 ಹಳ್ಳಿಗಳಲ್ಲಿ ಅಧ್ಯಯನ ನಡೆಸಿ, ಕುರುಬ ಸಮುದಾಯದ ಬಗ್ಗೆ ಮಾಹಿತಿ ಮತ್ತು ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಕುರುಬ ಸಮುದಾಯದ ಆದಿ ಗುಣಲಕ್ಷಣ, ಸಂಸ್ಕೃತಿ, ಭೌಗೋಳಿಕತೆ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವಿಕೆ ಹಾಗೂ ನಾಚಿಕೆ ಮತ್ತು ಅಂಜಿಕೆ ಸ್ವಭಾವವನ್ನು ಅಧ್ಯಯನ ಮಾಡಲಾಗಿದೆ.
ವರದಿ ಸಲ್ಲಿಸಿ ಒಂದೇ ದಿನದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ, ವರದಿ ಕಳುಹಿಸುವ ತೀರ್ಮಾನವನ್ನು ದಿನಾಂಕ:24.03.2023 ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ನಿರ್ಣಯ ಅಂಗೀಕರಿಸಿತ್ತು ಎಂದು ಅವರು ಹೇಳಿದ್ದಾರೆ.
ಜಿಲ್ಲೆಯಲ್ಲಿ ಕುರುಬ ಸಮಾಜದ ಎಸ್ಟಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ಕೊಳೇನಹಳ್ಳಿ ಬಿ ಎಂ ಸತೀಶ್, ಮಾಜಿ ದೂಡ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹದಡಿ ಜಿ. ಸಿ ನಿಂಗಪ್ಪ, ಪಾಲಿಕೆ ಸದಸ್ಯ ಜೆ ಎನ್ ಶ್ರೀನಿವಾಸ, ಪ್ರಸನ್ನಕುಮಾರ, ರಾಜುಮೌರ್ಯ, ಹಾಲೇಕಲ್ಲು ವೀರಣ್ಣ, ಎಸ್ ಎಸ್ ಗಿರೀಶ್, ಅಡ್ವಣಿ ಸಿದ್ದಪ್ಪ, ಕರಿಗಾರ ಮಂಜುನಾಥ, ಶಿವಣ್ಣ ಮೇಷ್ಟ್ರು, ಜೆ ದೀಪಕ್, ಕೆ ವಿರೂಪಾಕ್ಷಪ್ಪ, ಎಸ್ ಹೆಚ್ ಪ್ರಕಾಶ್, ಎಂ ಹೆಚ್ ಶ್ರೀನಿವಾಸ, ಪ್ರಸನ್ನ ಬೆಳ್ಳಿಕೆರೆ, ಇಟ್ಟಿಗುಂಡಿ ಮಂಜುನಾಥ, ಲಿಂಗರಾಜು, ಅಣಬೇರು ಶಿವಮೂರ್ತಿ, ಯಕ್ಕನಳ್ಳಿ ದ್ಯಾಮಣ್ಣ, ಪಿ ಜೆ ರಮೇಶ್, ಬಿ ಬಿ ಮಲ್ಲೇಶ್, ಮಾಜಿ ಮೇಯರ್ ಗುರುನಾಥ್ ಸೇರಿದಂತೆ ಜಿಲ್ಲಾ ಹಾಲುಮತ ಸಮಾಜ, ಕುರುಬರ ಯುವ ಘಟಕ, ಯುವ ಘರ್ಜನೆ, ಕನಕ ನೌಕರರ ಸಂಘ, ಶ್ರೀ ಬೀರೇಶ್ವರ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ಮತ್ತು ಸಮಾಜದ ಹಿರಿ ಕಿರಿಯ ಮುಖಂಡರು ಕಾಗಿನೆಲೆ ಕನಕ ಗುರುಪೀಠದ ಶ್ರೀ ನೀರಾಜಂನಾನಂದಪುರಿ ಸ್ವಾಮೀಜಿ ಯವರ ನೇತೃತ್ವದ ಪಾದಯಾತ್ರೆಯಲ್ಲಿ ಭಾಗವಹಿಸಿ ಹೋರಾಟ ನಡೆಸಿದ್ದರು.