ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂ ಅಭ್ಯರ್ಥಿ ಗೆಲ್ಲಿಸಲು ರಾಜಕೀಯ ಪಕ್ಷಗಳು ಸಹಕಾರ ನೀಡಲಿ ಮೌಲಾನಾ ಹನೀಫ್ ರಜಾ ಖಾದ್ರಿ

ಮೌಲಾನಾ ಹನೀಫ್ ರಜಾ ಖಾದ್ರಿ

ದಾವಣಗೆರೆ  :ಸರ್ಕಾರದ ಆನೇಕ ಸೌಲಭ್ಯಗಳನ್ನು ಪಡೆಯದಿರುವುದು ನಮ್ಮ ಸಮಾಜದ ಆರ್ಥಿಕ ಹಿನ್ನಡೆಗೆ ಕಾರಣವಾಗಿದೆ. ಆನೇಕ ಬಡವರಿಗೆ ಸರ್ಕಾರ ಸವಲತ್ತುಗಳ ಬಗ್ಗೆ ಮಾಹಿತಿ ಕೊರತೆಯಿದ್ದು, ಇದರ ಬಗ್ಗೆ ಸಮಾಜಕ್ಕೆ ಜಾಗೃತಿ ಮೂಡಿಸಲು ವಿದ್ಯಾವಂತ ಯುವಕರು ಮುಂದೆ ಬರಬೇಕಾಗಿದೆ ಎಂದು ತಂಜಿಮ್ ಉಲೇಮಯೆ ಅಹಲೆ ಸುನ್ನತ್ ಕಮಿಟಿ ಅಧ್ಯಕ್ಷ ಮೌಲಾನಾ ಹಜರತ್ ಹನೀಫ್ ರಜಾ ಖಾದ್ರಿ ಹೇಳಿದ್ದಾರೆ.

ದಾವಣಗೆರೆಯ ಬೂದಾಳ್ ರಸ್ತೆ ತಾಜ್ ಪ್ಯಾಲೇಸ್‌ನಲ್ಲಿ ಮಂಗಳವಾರ ದಾವಣಗೆರೆ ಮುಸ್ಲಿಂ ಒಕ್ಕೂಟದ ವತಿಯಿಂದ ಮುಸಲ್ಮಾನರ ಶೈಕ್ಷಣಿಕ ಆರ್ಥಿಕ ಸಮಾಜಿಕ ರಾಜಕೀಯ ಕುರಿತ ಚಿಂತನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಸಮಜದ ಕೆಲ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇವರು ಕುಟುಂಬ, ಸಮಾಜ ಹಾಗೂ ದೇಶಕ್ಕೆ ಹೊರೆಯಾಗಲಿದ್ದಾರೆ. ಇದನ್ನು ತಡೆಯಲು ಸಮಾಜದಲ್ಲಿ ಒಳ್ಳೆಯ ಆಲೋಚನೆ ಉಳ್ಳವರು ಮುಂದೆ ಬರಬೇಕಾಗಿದೆ ಎಂದರು.

ಇಸ್ಲಾಂ ಧರ್ಮದಲ್ಲಿ ಶಿಕ್ಷಣ ಕ್ಕೆ ಬಹಳ ಮಹತ್ವ ನೀಡಲಾಗಿದೆ. ಅದರಿಂದ ತಮ್ಮ ಮಕ್ಕಳಿಗೆ ಶಿಕ್ಷಣ ಕೂಡಿಸುವುದು ಪೋಷಕರ ಆದ್ಯ ಕರ್ತವ್ಯ ಎಂದರು.

ಚುನಾವಣೆ ಸಂದರ್ಭಗಳಲ್ಲಿ ನಮ್ಮ ಮತ ಯೋಚನೆ ಮಾಡದೆ ನೀಡುವುದರಿಂದ ದೇಶದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಮುಸಲ್ಮಾನರಿಗೆ ಇತ್ತಿಚಿನ ದಿನಗಳಲ್ಲಿ ಭಾರಿ ಹಿನ್ನಡೆ ಉಂಟಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಮುಸಲ್ಮಾನರು ಆನೇಕ ಸಮಾಜದ ಮುಖಂಡರಿಗೆ ರಾಜಕೀಯ ಶಕ್ತಿ ನೀಡಿದ್ದಾರೆ. ಅದ್ದರಿಂದ ಬರುವ ಚುನಾವಣೆಯಲ್ಲಿ ಮುಸಲ್ಮಾನರಿಗೆ ರಾಜಕೀಯ ಶಕ್ತಿ ನೀಡಲು ಎಲ್ಲಾ ಸಮಾಜಗಳು ಸಹಕಾರ ನೀಡಬೇಕು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 80 ಸಾವಿರಕ್ಕಿಂತಲು ಹೆಚ್ಚು ಮುಸ್ಲಿಂ ಮತದಾರರಿದ್ದು ಬರುವ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿ ಗೆಲ್ಲಿಸಲು ರಾಜಕೀಯ ಪಕ್ಷಗಳು ಸಹಕಾರ ನೀಡಬೇಕು. ಮುಸ್ಲಿಂ ಸಮಾಜ ಈ ಕ್ಷೇತ್ರದಲ್ಲಿ ಇಲ್ಲಿ ತನಕ ಯಾವ ರಾಜಕೀಯ ಪಕ್ಷಕ್ಕೆ ಸಹಕಾರ ನೀಡಿದೆ ಆ ಪಕ್ಷದ ಮೇಲೆ ಟಿಕೆಟ್ ನೀಡಲು ಒತ್ತಡ ಹೇರಲು ಸಮಾಜದ ಮುಖಂಡರಿಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಮಸೀದಿಗಳ ಮುಖಂಡರು ಸಮಾಜದ ಗಣ್ಯರು ಸೇರಿ ಈ ಬಾರಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಮುಸ್ಲಿಂ ಒಬ್ಬರಿಗೆ ಶಾಸಕರಗುವ ಅವಕಾಶ ಸಿಗಬೇಕು ಎಂದು ತಮ್ಮ ಅಭಿಪ್ರಾಯಗಳು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ದಾವಣಗೆರೆ ಮುಸ್ಲಿಂ ಒಕ್ಕೂಟ ದ ಸಂಚಾಲಕರಾದ ನಜೀರ್ ಅಹ್ಮದ್, ಮೌಲಾನಾ ಇಲಿಯಾಜ್ ಖಾದ್ರಿ, ಮೌಲಾನಾ ಮುಫ್ತಿ ರಿಜ್ವನ್ ನೂರಿ, ಮೌಲಾನಾ ಮುಫ್ತಿ ಶಾಮಿವುಲ್ಲಾ ಖಾದ್ರಿ, ಮೌಲಾನಾ ಮುಫ್ತಿ ಹಯಾತವುಲ್ಲಾಸಾಬ್, ಮೌಲಾನಾ ಶಹೀದ್ ರಜಾ, ಮೌಲಾನಾ ಸೈಯದ್ ಮುತ್ಯರ್ ಅಹ್ಮದ್, ಸೈಯದ್ ರೀಯಾಜ್ , ಜೆ.ಅಮನುಲ್ಲಾ ಖಾನ್, ಸೈಯಿದ್ ಚಾರ್ಲಿ, ದಾದಪೀರ್, ತಾಜ್ ಪಾಲ್ಯೇಸ್ ಅಹ್ಮದ್, ಕಬೀರ್ ಇಬ್ರಾಹಿಂ ಖಲೀಲವುಲ್ಲಾ , ಟಿ.ಅಸ್ಗರ್ ಸಾಜಿದ್ ಅಹ್ಮದ್, ಯು.ಎಂ ಮನ್ಸೂರ್ ಅಲಿ, ಶೋಯೇಬ್ ಮೆಹಬುಬ್ ಸುಭಾನಿ ಮಸೂದ ಅಹ್ಮದ್ ಮುಜಾಹೀದ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!