lidkar; ರಿಯಾಯಿತಿ ದರದಲ್ಲಿ ಲಿಡಕರ್ ವಸ್ತುಗಳ ಮಾರಾಟ
ದಾವಣಗೆರೆ, ಸೆ.07 : ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (lidkar) ನಿಗಮದ ವತಿಯಿಂದ ಗಣೇಶ ಹಬ್ಬದ ಪ್ರಯುಕ್ತ ಸೆಪ್ಟೆಂಬರ್ 20 ರವರೆಗೆ ಅಪ್ಪಟ ಚರ್ಮದ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.
power cut; ಇಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಹೊಸ ಮಾದರಿಯ ಅಪ್ಪಟ ಚರ್ಮದ ಪಾದರಕ್ಷೆ, ಶೂ, ಬೆಲ್ಟ್, ಪರ್ಸ್ ಮಹಿಳೆಯರ ಪರ್ಸ್, ವ್ಯಾನಿಟಿ ಬ್ಯಾಗ್‍ಗಳು ಶೇಕಡಾ 20 ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತದೆ. ನಿಗಮವು ಗಣೇಶ ಹಬ್ಬದ ಪ್ರಯುಕ್ತ ಈ ರಿಯಾಯಾತಿ ನೀಡುತ್ತಿದ್ದು ಗ್ರಾಹಕರು ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ, ಮಾರಾಟ ಮಳಿಗೆ, ಟೆನ್ನಿಸ್ ಕೋರ್ಟ್ ಕಾಂಪ್ಲೆಕ್ಸ್, ಎ.ವಿ.ಕೆ ಕಾಲೇಜು ರಸ್ತೆ, ಇಲ್ಲಿಗೆ ಭೇಟಿ ನೀಡಿ ಖರೀದಿಸಬಹುದು ಎಂದು ಜಿಲ್ಲಾ ಸಂಯೋಜಕ ಹಾಗೂ ವ್ಯವಸ್ಥಾಪಕರಾದ ಗಂಗಾಧರ್ ತಿಳಿಸಿದ್ದಾರೆ.