ಮಯಂಕ್ ಮಹಾವೀರ ಜೈನ್ ಜೈನ ಸನ್ಯಾಸ ದೀಕ್ಷೆ: ಸಮರ್ಥ್ ಶಾಮನೂರು ಶುಭ ಹಾರೈಕೆ

ದಾವಣಗೆರೆ: ನಗರದ ಶ್ರೀ ಸಂಘವಿ ಮಹಾವೀರ ಜೈನ್ ಇವರ ಸುಪುತ್ರನಾದ 18 ರ ಹರೆಯದ ಮಯಂಕ್ ಇವರು ಇದೇ ಏಪ್ರಿಲ್ ತಿಂಗಳ 1 ನೇ ತಾರೀಖಿನ ಸೋಮವಾರದಂದು ಲೌಕಿಕ ಸುಖಮಯ ಬದುಕಿನಿಂದ ನಿರ್ಗಮಿಸಿ ಅತ್ಯಂತ ಕಠಿಣವಾದ ಜನ್ಮ ಜನ್ಮಾಂತರಗಳ ಹುಟ್ಟು ಸಾವುಗಳ ಜಂಜಾಟಗಳಿಂದ ಮುಕ್ತಿ ಹೊಂದಬಹುದಾದಂತಹ ಜೈನ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ.

ಭಾನುವಾರದಂದು ಮುಂಜಾನೆ ಸಾಂಸಾರಿಕ ಜೀವನದ ಎಲ್ಲ ‌ಸುಖ ಸಂಪತ್ತುಗಳ ತ್ಯಾಗದ ಪ್ರತೀಕವಾಗಿ ಮುಮುಕ್ಷು ಮಯಂಕ್ ನ ಸಾಂಸಾರಿಕ ಜೀವನದ ಕೊನೆಯ ಬೃಹತ್ ಮೆರವಣಿಗೆ ನಡೆದು ಚೌಕೀಪೇಟೆಯ ಶ್ರೀ ಸುಪಾರ್ಶ್ವನಾಥ ಜೈನ್ ದೇವಸ್ಥಾನದಿಂದ ಮುಂಜಾನೆ 8 ಗಂಟೆಗೆ ಹೊರಟು ರೇಣುಕಾ ಮಂದಿರ ತಲುಪಿತು.

ತದನಂತರ ರೇಣುಕಾ ಮಂದಿರದಲ್ಲಿ ನೂರಾರು ಜೈನ ಸಂತರು, ಆಚಾರ್ಯರ ಸಮ್ಮುಖದಲ್ಲಿ ನಡೆದ ಈ ದಿಕ್ಷಾದ ಪೂರ್ವಭಾವಿ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು.

ಈ ದೀಕ್ಷಾ ಸಮಾರಂಭದ ಕಾರ್ಯಕ್ರಮದಲ್ಲಿ ನಗರದ ಶ್ರೀ ಶಾಮನೂರು ಶಿವಶಂಕರಪ್ಪನವರ ಮೊಮ್ಮಗ ಹಾಗೂ ಶಾಮನೂರು ಮಲ್ಲಿಕಾರ್ಜುನ್ ಹಾಗೂ ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್ ರವರ ಪುತ್ರ ಸಮರ್ಥ ಶಾಮನೂರು ಅವರು ದಿಕ್ಷಾರ್ಥಿಯಾದ ಮಯಂಕ್ ರನ್ನು ಭೇಟಿಯಾಗಿ ಶುಭ ಹಾರೈಸಿ ಗುರು, ಆಚಾರ್ಯ ಭಗವಂತರ ಆಶೀರ್ವಾದ ಪಡೆದರು.

Leave a Reply

Your email address will not be published. Required fields are marked *

error: Content is protected !!