ಇಂದು ಜೆ.ಜೆ.ಎಂ ವಿದ್ಯಾರ್ಥಿ ಸಂಘದಿಂದ ಮಾನ್ಸೂನ್ ಫಿಯೆಸ್ಟಾ  

ಇಂದು ಜೆಜೆಎಂ ವಿದ್ಯಾರ್ಥಿ ಸಂಘದಿಂದ ಮಾನ್ಸೂನ್ ಫಿಯೆಸ್ಟಾ  
ದಾವಣಗೆರೆ: ನಗರದ ಜೆ.ಜೆ.ಎಂ. ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಸಂಘದಿಂದ ೭೬ನೇ ಸ್ವಾತಂತ್ರೋತ್ಸವದ ಅಂಗವಾಗಿ ಜು.೧೫ರ ಇಂದಿನಿಂದ ಜೆ.ಜೆ.ಎಂ. ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಮಾನ್ಸೂನ್ ಫಿಯೆಸ್ಟಾ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗಿದೆ.
ಕಾಲೇಜಿನ ಪ್ರಾಚಾರ್ಯರಾದ ಡಾ.ಎಸ್.ಬಿ.ಮುರುಗೇಶ್ ಅವರ ನೇತೃತ್ವದಲ್ಲಿ ದೇಸೀ ಕ್ರೀಡೆಗಳ ಉತ್ಸವ ಹಮ್ಮಿಕೊಳ್ಳಲಾಗಿದೆ. ಮರೆಯಾಗುತ್ತಿರುವ ದೇಸೀ ಕ್ರೀಡೆಗಳನ್ನು ಆಡಿಸಿ ಅದನ್ನು ಜೀವಂತವಾಗಿಸುವ ಪ್ರಯತ್ನ ಇದಾಗಿದ್ದು, ಅಂದು ಬೆಳಿಗ್ಗೆ ೧೧ ಗಂಟೆಗೆ ಇಲ್ಲಿನ ಗಾಜಿನ ಮನೆ ಎದುರು ಇರುವ ವೀರಬಸಪ್ಪ ನವರ ಗದ್ದೆಯಲ್ಲಿ ಕ್ರೀಡಾ ಕೂಟಗಳು ನಡೆಯಲಿದ್ದು, ಮೇಯರ್ ವಿನಾಯಕ ಪೈಲ್ವಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ಪಾಲಿಕೆ ಸದಸ್ಯ ಗಡಿಗುಡಾಳ ಮಂಜುನಾಥ, ರೈತರಾದ ವೀರಬಸಪ್ಪ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಭಾಗವಹಿಸುವರು.
ಜುಲೈ ೨೩ ರ ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಬುಗುರಿ, ಚಿನ್ನಿದಾಂಡು, ಗೋಲಿ, ಲಗೋರಿ, ಕುಂಟಬಿಲ್ಲೆ ಆಟಗಳನ್ನು ದಾವಣಗೆರೆ ಜಿಲ್ಲಾ ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಉದ್ಘಾಟಿಸುವರು.
ಜುಲೈ ೩೦ ರ ಭಾನುವಾರ ಜೆ.ಜೆ.ಎಂ. ಮೆಡಿಕಲ್ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಚೌಕಾಬಾರ, ಕುರಿ ಮತ್ತು ನರಿ, ಅಳಿಗುಳಿ ಮನೆ ಆಟ ನಡೆಯಲಿದೆ.
ಆ.೬ ರಂದು ಜೆ.ಜೆ.ಎಂ. ಮೆಡಿಕಲ್ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಕೇರಂ, ಚೆಸ್, ಟೇಬಲ್ ಟೆನ್ನೀಸ್ ಆಟಗಳನ್ನು ಆಡಿಸಲಾಗುವುದು. ವಿಜೇತರಿಗೆ ಆ.೧೫ ರಂದು ನಡೆಯುವ ಸ್ವಾತಂತ್ರö್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನಗಳನ್ನು ವಿತರಿಸಲಾಗುವುದು ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!