ಡಿ.16 ಕ್ಕೆ ಬಾಲಕರ ವಿದ್ಯಾರ್ಥಿ ನಿಲಯದ ಉದ್ಘಾಟನೆ

Music evening by Cinemasiri organization on December 16

Music evening by Cinemasiri organization on December 16

ದಾವಣಗೆರೆ: ಸಿನಿಮಾಸಿರಿ ಸಂಸ್ಥೆ ವತಿಯಿಂದ ಡಿ.16 ರಂದು ನಗರದ ಶಿವಯೋಗಾಶ್ರಮ ಮಂದಿರದಲ್ಲಿ ಸಂಜೆ 6 ಜೊತೆಯಲಿ ಜೊತೆ ಜೊತೆಯಲಿ ಹೆಸರಿನಲ್ಲಿ ಸುಮಧುರ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿನಿಮಾಸಿರಿ ಅಧ್ಯಕ್ಷ ಸುರಭಿ ಶಿವಮೂರ್ತಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಿನಿಮಾಸಿರಿ ಸಂಸ್ಥೆಯ 25 ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ಆಚರಣೆಯ ಪ್ರಯುಕ್ತ ನಟರಾದ ನಾಗ್ ಹಾಗೂ ಸಹೋದರರ ದಿ.ಶಂಕರ್ ಅನಂತನಾಗ್ ಚಲನಚಿತ್ರಗಳ ದಾವಣಗೆರೆ ಜಿಲ್ಲಾ ವರದಿಗಾರರ ಕೂಟ  ಸುಮಧುರ ಹಾಡುಗಳನ್ನು ಪ್ರಸ್ತುತ ಪಡಿಸಲಾಗುವುದು.

ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಟ ಹಾಗೂ ಮಾಜಿ ಸಚಿವ ಬಿ.ಸಿ ಪಾಟೀಲ್ ಆಗಮಿಸಲಿದ್ದಾರೆಂದರು. ಸಿನಿಮಾಸಿರಿ ಸಂಸ್ಥೆಯಿಂದ ಇಲ್ಲಿಯವರೆಗೂ 25 ಸುಮಾರು 49 ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ವೇಳೆ ಸ್ಥಳೀಯ ಕಲಾವಿದರಾದ ಎಂ.ಜಿ ಜಗದೀಶ್, ಮೃತ್ಯುಂಜಯ, ಹೇಮಂತ್ ಕುಮಾರ್, ಸಂಗೀತಾ ರಾಘವೇಂದ್ರ, ಶೋಭಾ,ನೇತ್ರಾ,ರುದ್ರಾಕ್ಷಿಬಾಯಿ ಅವರುಗಳು ಸುಮಾರು ಚಿತ್ರಗೀತೆಗಳನ್ನು ಹಾಡಲಿದ್ದಾರೆಂದರು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ನಟಿ ದಿ.ಲೀಲಾವತಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಸಾಲಿಗ್ರಾಮ ಗಣೇಶ ಶೆಣೈ, ಎಂ.ಜಿ.ಜಗದೀಶ್, ಹೆಚ್. ವಿ.ಮಂಜುನಾಥಸ್ವಾಮಿ, ಕಣಕುಪ್ಪಿ ವ ಬರುಗೇಶ್, ರುದ್ರೆಶ್, ಡಾ.ನಾಗಪ್ರಕಾಶ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!