“ನಮನ ಅಕಾಡೆಮಿ” 28ನೇ ಅಂತರರಾಷ್ಟ್ರೀಯ ವಿಹಾರ ನೌಕೆ ಸಾಂಸ್ಕೃತಿಕ ಸೌರಭದಲ್ಲಿ.

ದಾವಣಗೆರೆ : ದಾವಣಗೆರೆಯ ನಮನ ಅಕಾಡೆಮಿಯು ಮಂಗಳೂರಿನ ಅಬ್ಬಕ್ಕ ರಾಣಿ ವಿಹಾರ ನೌಕೆ ಯಲ್ಲಿ ನಡೆದ 28ನೇ ಅಂತರರಾಷ್ಟ್ರೀಯ ವಿಹಾರ ನೌಕೆ ಸಾಂಸ್ಕೃತಿಕ ಸೌರಭ ದಲ್ಲಿ ಲಘು ಶಾಸ್ತ್ರೀಯ ನೃತ್ಯ ಹಾಗೂ ಜನಪದ ನೃತ್ಯವನ್ನು ಪ್ರಸ್ತುತ ಪಡಿಸಿತು.

ಮಂಗಳೂರಿನ ಮಂಜುನಾಥ್ ಎಜುಕೇಶನ್ ಟ್ರಸ್ಟ್, ಎಸ್ ಕೆ ಮುನಿಸಿಪಲ್ ಎಂಪ್ಲಾಯಿಸ್ ಯೂನಿಯನ್ ಮಂಗಳೂರು, ಮಹಾನಗರ ಪಾಲಿಕೆ ಮಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಸಮುದ್ರದ ಮಧ್ಯದಲ್ಲಿ ವಿಹಾರ ನೌಕೆಯ ಒಳಗೆ ಜನವರಿ 7 ರಂದು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ನಮನ ಅಕಾಡೆಮಿ ಯೊಂದಿಗೆ ಬೆಂಗಳೂರು, ಮಂಗಳೂರು, ಉಡುಪಿ, ಶಿರಸಿ, ಬೆಹರಿನ್, ಮೈಸೂರು, ಶಿವಮೊಗ್ಗ, ಮುಂಬೈ ಇನ್ನೂ ಮುಂತಾದ ಸ್ಥಳಗಳಿಂದ ಆಗಮಿಸಿದ್ದ ಕಲಾವಿದರು ತಮ್ಮ ಕಲೆಯನ್ನು ಪ್ರಸ್ತುತಪಡಿಸಿದರು.

ನಮನ ಅಕಾಡೆಮಿಯ ನೃತ್ಯ ಕಲಾವಿದರು “ಕರ್ನಾಟಕ ಬರಿ ನಾಡಲ್ಲ ನಮ್ಮ ಸಂಸ್ಕೃತಿಯ ಧಾತು” ಎಂಬ ಭಾವಗೀತೆಗೆ ಲಘು ಶಾಸ್ತ್ರೀಯ ನೃತ್ಯ, ಹಾಗೂ “ಗಣೇಶ ಸ್ತುತಿಗೆ” ಲೇಝಿಮ್ ಬಳಸಿ ಜನಪದ ನೃತ್ಯ ಪ್ರಸ್ತುತಪಡಿಸಿದರು. ಅಕಾಡೆಮಿಯಲ್ಲಿ ಭರತನಾಟ್ಯಂ ಕಲಿಯುತ್ತಿರುವ 40 ವರ್ಷ ಮೇಲ್ಪಟ್ಟ ಗೃಹಿಣಿಯರು ನೃತ್ಯದಲ್ಲಿ ಭಾಗವಹಿಸಿದ್ದು ವಿಶೇಷ ಆಗಿತ್ತು.

ಗುರು ಶ್ರೀಮತಿ ಮಾಧವಿ ಡಿ ಕೆ, ಶ್ರೀಮತಿ ಉಷಾ ಶ್ರೀ, ಶ್ರೀಮತಿ ರೇಖಾ ಪಿ, ಶ್ರೀಮತಿ ಶ್ರೀದೇವಿ ಕೆ, ಜೋಷಿತ ಎನ್ ಎಸ್, ಶ್ರೇಯ ಸಿ ವಿ, ಚಾಣಸ್ಯ ಡಿ, ಶ್ರೇಯ ಜಿ ಎಂ, ಸಿಂಚನ ಎನ್ ಆರ್ ನೃತ್ಯ ಗಳನ್ನು ಪ್ರಸ್ತುತಪಡಿಸಿದ ಕಲಾವಿದರು.

Leave a Reply

Your email address will not be published. Required fields are marked *

error: Content is protected !!