ಮುಂದಿನ ಆದೇಶದವರೆಗೆ ಮಗುವಿನ ಕೂದಲು ಕತ್ತರಿಸುವಂತಿಲ್ಲ: ಹೈಕೋರ್ಟ್ ಸೂಚನೆ !
ಬೆಂಗಳೂರು: ಮಗುವಿನ ಧಾರ್ಮಿಕ ಗುರುತು ಬದಲಿಸುವಂತಿಲ್ಲ, ಮುಂದಿನ ಆದೇಶದವರೆಗೆ ಕೂದಲು ಕಟ್ ಮಾಡುವಂತಿಲ್ಲ ಎಂದು ಸಿಖ್ ವ್ಯಕ್ತಿಯ ಪತ್ನಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಅಸಲಿಗೆ, ಸಿಖ್ ಸಮುದಾಯದ ವ್ಯಕ್ತಿಯೊಬ್ಬ ತನ್ನ ಮಗಳ ಕೂದಲಿಗೆ ಕತ್ತರಿ ಹಾಕದಂತೆ ಹೈಕೋರ್ಟ್ ಅರ್ಜಿ ಸಲ್ಲಿಸಿದ್ದರು. ಸಧ್ಯ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಹೆಣ್ಣು ಮಗುವೂ ಸಿಖ್ ಸಂಪ್ರದಾಯದಂತೆ ಪಂಚಕ್ ಸಂಪ್ರದಾಯ ಪಾಲಿಸಬೇಕು. ಸಂಪ್ರದಾಯದಂತೆ ಕೂದಲಿಗೆ ಕತ್ತರಿ ಹಾಕುವಂತಿಲ್ಲ. ಹಾಗಾಗಿ ಕೂದಲು ಕತ್ತರಿಸಿ, ಮಗುವಿನ ಧಾರ್ಮಿಕ ಗುರುತು ಬದಲಿಸದಂತೆ ಸೂಚಿಸಿರುವ ಹೈಕೋರ್ಟ್ ಮುಂದಿನ ಆದೇಶದವರೆಗೂ ಕೂದಲು ಕತ್ತರಿಸದಂತೆ ಸಿಖ್ ವ್ಯಕ್ತಿಯ ಪತ್ನಿಗೆ ಹೈಕೋರ್ಟ್ ಸೂಚನೆ ನೀಡಿದೆ.
ಇನ್ನು ಸಿಖ್ ಸಂಪ್ರದಾಯ ಉಲ್ಲೇಖಿಸಿದ ಮಗುವಿನ ತಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಮಗಳನ್ನ ತನ್ನ ಸುಪರ್ದಿಗೆ ಒಪ್ಪಿಸುವಂತೆ ಹಾಗೂ ಕೂದಲು ಕಟ್ ಮಾಡದಂತೆ ಅರ್ಜಿ ಸಲ್ಲಿಸಿದ್ದರು.ಅದ್ರಂತೆ, ಹೈಕೋರ್ಟ್ ಮುಂದಿನ ಆದೇಶದವರೆಗೂ ಕೂದಲು ಕತ್ತರಿಸದಂತೆ ಆದೇಶ ನೀಡಿದೆ.